Naxals  
ದೇಶ

ನಟೋರಿಯಸ್​ ಮಾವೋವಾದಿ ಹಿಡ್ಮಾ ಸೇರಿ 6 ನಕ್ಸಲರು ಎನ್​ಕೌಂಟರ್​ಗೆ ಬಲಿ! | Naxals

ಪ್ರಮುಖ ಮುಖ್ಯಾಂಶಗಳು

  • ನಾಗರಿಕರ ವಿರುದ್ಧ ಕನಿಷ್ಠ 26 ಸಶಸ್ತ್ರ ದಾಳಿಗಳನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತಿದ್ದ ಹಿಡ್ಮಾ
  • ಸೀತಾರಾಮರಾಜು ಜಿಲ್ಲೆಯಲ್ಲಿ ನಡೆದ ಪೊಲೀಸ್​ ಕಾರ್ಯಚರಣೆಯಲ್ಲಿ ಗುಂಡಿಕ್ಕಿ ಹತ್ಯೆ
ಆಂಧ್ರಪ್ರದೇಶ: ಭದ್ರತಾ ಪಡೆಗಳು ಮತ್ತು ನಾಗರಿಕರ ವಿರುದ್ಧ ಕನಿಷ್ಠ 26 ಸಶಸ್ತ್ರ ದಾಳಿಗಳನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತಿದ್ದ ನಟೋರಿಯಸ್​ ಮಾವೋವಾದಿ(Naxals) ನಾಯಕ ಮದ್ವಿ ಹಿಡ್ಮಾ ಮಂಗಳವಾರ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ.
ಈತನ ಜೊತೆಗೆ ಇಬ್ಬರು ಮಾವೋವಾದಿಗಳು ಕೂಡ ಕಾರ್ಯಚರಣೆಯಲ್ಲಿ ಹತರಾಗಿದ್ದಾರೆ. ಅಲ್ಲದೆ, ಛತ್ತಿಸ್​ಘಡದಲ್ಲೂ ನಡೆಸಿದ ಪ್ರತ್ಯೇಕ ಕಾರ್ಯಚರಣೆಯಲ್ಲಿ ಮೂವರು ನಕ್ಸಲೇಟ್ಸ್​​ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ಈ ಟಾಪ್​ ಮಾವೋವಾದಿ ನಾಯಕನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. 2021ರ ಏಪ್ರಿಲ್‌ನಲ್ಲಿ ಛತ್ತೀಸ್‌ಗಢದಲ್ಲಿ 22 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ ದಾಳಿಯಲ್ಲಿ ಮಾವೋವಾದಿ ನಾಯಕ ಮದ್ವಿ ಹಿಡ್ಮಾ ಪ್ರಮುಖ ಶಂಕಿತನಾಗಿದ್ದ. ಅಂದಿನಿಂದ ಹಿಡ್ಮಾ ತಲೆಗೆ 50 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಅಲ್ಲದೆ, ಅವರ ಪತ್ನಿ ಕೂಡ ಈ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಯಾರು ಈ ಮದ್ವಿ ಹಿಡ್ಮಾ?

1981ರಲ್ಲಿ ಸುಕ್ಮಾದಲ್ಲಿ ಜನಿಸಿದ ಹಿಡ್ಮಾ, 1996ರಲ್ಲಿ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿಯ ಬೆಟಾಲಿಯನ್ ಅನ್ನು ಮುನ್ನಡೆಸಿದರು. ಈತನ ಧೈರ್ಯ ಮತ್ತು ಕಾರ್ಯಚರಣೆ ಶೈಲಿ ನೋಡಿ ಶೀಘ್ರದಲ್ಲೇ, ಹಿಡ್ಮಾ ಸಿಪಿಐ ಮಾವೋವಾದಿಗಳ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಕೇಂದ್ರ ಸಮಿತಿಯ ಅತ್ಯಂತ ಕಿರಿಯ ಸದಸ್ಯರಾದರು.
ಇಲ್ಲಿಯವರೆಗೆ, ಒಬ್ಬ ಮಾವೋವಾದಿಯ ಮೃತದೇಹವನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಸಂಪೂರ್ಣ ಕಾರ್ಯಚರಣೆ ಬಳಿಕ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗುವುದು" ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಬಸ್ತಾರ್ ಶ್ರೇಣಿ) ಸುಂದರರಾಜ್ ಪಿ ತಿಳಿಸಿದ್ದಾರೆ(ಏಜೆನ್ಸೀಸ್​)|