Yogi Adityanath | ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ ಎರಡನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಸಿಎಂ ಯೋಗಿ ಆದಿತ್ಯಾನಾಥ್
ಅಯೋಧ್ಯೆ: ನಮ್ಮ ರಾಷ್ಟ್ರದ ಆತ್ಮವು ಸನಾತನ ಧರ್ಮದಲ್ಲಿದ್ದು, ಯಾರೂ ಕೂಡ ಸನಾತನ ಧರ್ಮಕ್ಕಿಂತ ಮೇಲಲ್ಲ, ಹಿಂದಿನ ಸರ್ಕಾರ ಅಯೋಧ್ಯೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸಿರಬಹುದು, ಆದರೆ, ಹನುಮಂತನಿಂದ ರಕ್ಷಿಸಲ್ಪಟ್ಟ ಸ್ಥಳಕ್ಕೆ ಇವರು ಹಾನಿ ಮಾಡಲು ಸಾಧ್ಯವೇ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಪ್ರಶ್ನಿಸಿದ್ದಾರೆ.
ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಯೋಗಿ, ಕೆಲವು ವ್ಯಕ್ತಿಗಳು, ಸ್ವಾರ್ಥ ಹಿತಾಸಕ್ತಿಗಳು, ಧಾರ್ಮಿಕ ಮತಾಂಧತೆ ಮತ್ತು ಅಧಿಕಾರ ಸಮಾಧಾನದ ರಾಜಕೀಯದಿಂದ ಪ್ರೇರೇಪಿಸಲ್ಪಟ್ಟರು, ಈ ಪವಿತ್ರ ನಗರವನ್ನು ಅಶಾಂತಿ ಮತ್ತು ಸಂಘರ್ಷದ ಕೇಂದ್ರವನ್ನಾಗಿ ಪರಿವರ್ತಿಸಿದರು, ಇದನ್ನು ಈಗ ಇತಿಹಾಸದ ಸರಿಯಾದ ಹಾದಿಗೆ ತರಲಾಗಿದೆ ಎಂದರು.
500 ವರ್ಷಗಳ ನಿರಂತರ ಹೋರಾಟದ ಬಳಿಕ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿರುವುದನ್ನು ಶ್ಲಾಘಿಸಿದ ಯೋಗಿ, ಪ್ರಧಾನಿ ಮೋದಿ ಮೂರು ಪ್ರಮುಖ ಭೇಟಿಗಳನ್ನು ಉಲ್ಲೇಖಿಸಿದರು. 2020 ರ ಆಗಸ್ಟ್ 5 ಪ್ರಮುಖ ಮತ್ತು ಐತಿಹಾಸಿಕ ದಿನಾಂಕವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ನಗರದಲ್ಲಿ ಭವ್ಯ ದೇವಾಲಯದ ಅಡಿಪಾಯ ಹಾಕಿದರು, 2024 ರ ಜನವರಿ 22 ರಂದು ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕಾಗಿ ಅಯೋಧ್ಯೆಗೆ ಬಂದರು, ನವೆಂಬರ್ 25 ರಂದು ರಾಮ ಮಂದಿರದ ಮೇಲೆ ಕೇಸರಿ ಧ್ವಜ ಹಾರಿಸಲು ಮೂರನೇ ಬಾರಿಗೆ ಅಯೋಧ್ಯೆಗೆ ಭೇಟಿ ನೀಡಿದ್ದನ್ನು ಸ್ಮರಿಸಿದರು.
ಕಳೆದ 5 ವರ್ಷಗಳಲ್ಲಿ, 45 ಕೋಟಿಗೂ ಅಧಿಕ ಭಕ್ತರು ಅಯೋಧ್ಯೆಗೆ ಭೇಟಿ ನೀಡಿದ್ದಾರೆ, 2017ಕ್ಕಿಂತ ಮೊದಲು ಕೆಲವೇ ಲಕ್ಷ ಜನರು ಇಲ್ಲಿಗೆ ಬರುತ್ತಿದ್ದರು. ಇಲ್ಲಿ ಸ್ವಚ್ಛತೆ ಇರಲಿಲ್ಲ, ವಿದ್ಯುತ್ ಇರಲಿಲ್ಲ, ರಸ್ತೆ ಸಂಪರ್ಕವಿರಲ್ಲ, ಭದ್ರತೆ ಇರಲಿಲ್ಲ. ಯಾರಾದರೂ ಜೈ ಶ್ರೀ ರಾಮ್ ಎಂದು ಹೇಳಿದರೆ ಅಂತಹವರ ಮೇಲೆ ಲಾಠಿ ಚಾರ್ಜ್ ಮಾಡಲಾಗುತ್ತಿತ್ತು, ಬಂಧಿಸಲಾಗುತ್ತಿತ್ತು, ಇಂದು ದೇಶದಲ್ಲಿ ಜೈ ಶ್ರೀ ರಾಮ್ ಎಂದು ಹೇಳಿ, ಭಾರತ ಸರ್ಕಾರದ ಯೋಜನೆ ಕೂಡ ಜಿ ರಾಮ್ ಜಿ ಹೆಸರಿನಲ್ಲಿ ಬಂದಿದ್ದು, ಇದು ಅತಿದೊಡ್ಡ ಉದ್ಯೋಗ ಯೋಜನೆಯಾಗಲಿದೆ ಎಂದು ಹೇಳಿದರು.
ಅಯೋಧ್ಯೆಯಲ್ಲಿ ಎಂದಿಗೂ ಯುದ್ಧ ನಡೆದಿಲ್ಲ ಮತ್ತು ಯಾವುದೇ ಶತ್ರು ಈ ಭೂಮಿಯ ಶಕ್ತಿಯನ್ನು ತಡೆದುಕೊಳ್ಳಲು ಸಾಧ್ಯವಾಗಿಲ್ಲ, ಈ ಕ್ಷೇತ್ರದ ಉಲ್ಲೇಖವೇ ಶಾಂತಿ ಮತ್ತು ಘನತೆಯ ಭಾವವನ್ನು ಮೂಡಿಸುತ್ತದೆ ಎಂದು ಯೋಗಿ ಹೇಳಿದರು.
ಅನ್ನಪೂರ್ಣ ದೇವಾಲಯದ ಮೇಲೆ ಧ್ವಜಾರೋಹಣ
ರಾಮ ಮಂದಿರದಲ್ಲಿ ಇಂದು (ಡಿ.31 ಬುಧವಾರ) ನಡೆದ ಪ್ರಾಣ ಪ್ರತಿಷ್ಠಾ ದ್ವಾದಶಿ ಕಾರ್ಯಕ್ರಮದ ಹಿನ್ನಲೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನ್ನಪೂರ್ಣ ದೇವಾಲಯದ ಮೇಲೆ ಧ್ವಜಾರೋಹಣ ನೆರವೇರಿಸಿದ್ದಾರೆ.
ಪ್ರಾಣ ಪ್ರತಿಷ್ಠೆಯ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸಿಂಗ್, ಮುಖ್ಯ ಯಜ್ಞ ವಾಗಿ ಭಾಗವಹಿಸಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಉಪಸ್ಥಿತರಿದ್ದರು. ದೇವಾಲಯಕ್ಕೆ ತೆರಳುವ ಮುನ್ನ ಇಬ್ಬರೂ ನಾಯಕರು ಪ್ರಮುಖ ಪೂಜಾ ಸ್ಥಳವಾದ ಹನುಮಾನ್‌ಗಢಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ(ಏಜೆನ್ಸೀಸ್).