Shashi Tharoor | ಸಂಸದ ಶಶಿ ತರೂರ್ 
ದೇಶ

ಗದ್ದಲ ಮಾಡಲು ಜನ ನಿಮ್ಮನ್ನು ಸಂಸತ್ತಿಗೆ ಕಳುಹಿಸಿಲ್ಲ...ವಿಪಕ್ಷ ಸಂಸದರ ವಿರುದ್ಧ ಸಂಸದ ತರೂರ್​ ಕಿಡಿ | Shashi Tharoor

ದೆಹಲಿ: ಸಂಸತ್ತಿನಲ್ಲಿ ಉಂಟಾಗುತ್ತಿರುವ ಅಡಚಣೆಗಳ ಹಿನ್ನಲೆಯಲ್ಲಿ ಪ್ರತಿಪಕ್ಷದ ಸಂಸದರನ್ನು ತರಾಟೆಗೆ ತೆಗೆದಕೊಳ್ಳುವ ಮೂಲಕ ಸಂಸದ ಶಶಿ ತರೂರ್, ಮಿತ್ರಪಕ್ಷಗಳೊಂದಿಗಿನ ತಮ್ಮ ಭಿನ್ನಾಭಿಪ್ರಾಯಗಳನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ.
ನಾನು ಈ ವಿಷಯವಾಗಿ ಮೊದಲಿನಿಂದಲೂ ಮಾತನಾಡುತ್ತಲೇ ಇದ್ದೇನೆ, ಸೋನಿಯಾ ಗಾಂಧಿ ಸೇರಿದಂತೆ ಪಕ್ಷದ ಇತರ ಹಿರಿಯ ನಾಯಕರಿಗೆ ಇದರ ಬಗ್ಗೆ ಚೆನ್ನಾಗಿ ತಿಳಿದಿದೆ. ಕ್ಷೇತ್ರದ ಜನರು ನನ್ನ ಬುದ್ಧಿವಂತಿಕೆಯನ್ನು ಬಳಸಿಕೊಂಡು ರಾಷ್ಟ್ರದ ಅಭಿವೃದ್ದಿ ಬಗ್ಗೆ ಮಾತನಾಡಲು ಕಳುಹಿಸಿದ್ದಾರೆ, ಈ ರೀತಿ ಕೂಗಾಡಲು, ಗದ್ದಲವನ್ನು ಸೃಷ್ಟಿಸಲು ಅಲ್ಲ ಎಂದು ಹೇಳಿದರು. ಸೋಮವಾರ ಚಳಿಗಾಲದ ಅಧಿವೇಶನ ಪ್ರಾರಂಭವಾದಾಗಿನಿಂದ ಸಂಸತ್ತಿನಲ್ಲಿ ಅನೇಕ ವಿಷಯಗಳ ಕುರಿತು ಗದ್ದಲವೇ ಹೆಚ್ಚಾಗಿದ್ದು, ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ ಚರ್ಚೆಗೆ ವಿರೋಧ ಪಕ್ಷಗಳು ಪಟ್ಟು ಹಿಡಿದಿವೆ.
ಪ್ರಧಾನಿಯವರ ಶ್ಲಾಘನೆ ಸೇರಿದಂತೆ ತಮ್ಮ ಪಕ್ಷದ ಕೆಲ ನಾಯಕರ ಬಗೆಗಿನ ಟೀಕೆಗಳ ಬಗ್ಗೆ ತರೂರ್ ಈ ಹಿಂದೆ ವಿವಾದಕ್ಕೆ ಸಿಲುಕಿದ್ದರು. ಈ ಬಿಕ್ಕಟ್ಟನ್ನು ಹೋಗಲಾಡಿಸಲು ಅನೇಕ ಪ್ರಯತ್ನಗಳು ನಡೆದರು ಕೂಡ ಪಕ್ಷದ ಸಭೆಗಳಿಂದ ದೂರವೇ ಉಳಿದರು. ಇದು ವರಿಷ್ಟರ ನಡುವಿನ ಅಂತರವನ್ನು ಸಹ ಹೆಚ್ಚಿಸಿದೆ. ಇತ್ತೀಚೆಗೆ ರಾಮನಾಥ್ ಗೋಯೆಂಕಾ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರ ಭಾಷಣವನ್ನು ಸಹ ಹೊಗಳಿ ಸ್ವಪಕ್ಷದ ನಾಯಕರುಗಳಿಂದಲೇ ಟೀಕೆಗೆ ಗುರಿಯಾಗಿದ್ದರು. ಬಿಜೆಪಿಯ ಕಾರ್ಯತಂತ್ರಗಳು ಉತ್ತಮ ಎನ್ನುವುದಾದರೆ, ಅವರು ಪಕ್ಷದಲ್ಲಿ ಏಕೆ ಇದ್ದಾರೆ ಎಂದು ಕಾಂಗ್ರೆಸ್​ ನಾಯಕರೊಬ್ಬರು ಪ್ರಶ್ನಿಸಿದ್ದರು.
ಕೇರಳದ ತಿರುವನಂತಪುರಂನಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ತರೂರ್, ದೇಶಾದ್ಯಂತ ತಮ್ಮದೇ ಆದ ಜನಪ್ರಿಯತೆಯನ್ನು ಹೊಂದಿದ್ದಾರೆ, ಇವರ ಇಂಗ್ಲಿಷ್ ಶಬ್ದಕೋಶಕ್ಕಾಗಿ ಯುವಕರಿಗೆ ತರೂರ್​ ಅಚ್ಚು ಮೆಚ್ಚು(ಏಜೆನ್ಸೀಸ್​).