ಸಾಂದರ್ಭಿಕ ಚಿತ್ರ ( Unknown Facts )
- ನಾವು ಪ್ರತಿನಿತ್ಯ ಸಾವಿರಾರು ವಸ್ತುಗಳನ್ನು ಬಳಸುತ್ತೇವೆ
- ಕೆಲವೊಂದು ವಸ್ತುಗಳ ಬಗ್ಗೆ ನಾವು ಸಂಪೂರ್ಣವಾಗಿ ತಿಳಿದುಕೊಂಡಿರುವುದೇ ಇಲ್ಲ
- ಅವುಗಳಲ್ಲಿ ನಾವು ಸ್ಟೈಲ್ಗಾಗಿ ಧರಿಸುವ ಟೋಪಿ ಕೂಡ ಒಂದು
Unknown Facts : ನಾವು ಪ್ರತಿನಿತ್ಯ ಸಾವಿರಾರು ವಸ್ತುಗಳನ್ನು ಬಳಸುತ್ತೇವೆ. ಆದರೆ, ಕೆಲವೊಂದು ವಸ್ತುಗಳ ಬಗ್ಗೆ ನಾವು ಸಂಪೂರ್ಣವಾಗಿ ತಿಳಿದುಕೊಂಡಿರುವುದೇ ಇಲ್ಲ. ಅವುಗಳಲ್ಲಿ ನಾವು ಸ್ಟೈಲ್ಗಾಗಿ ಧರಿಸುವ ಟೋಪಿ ಕೂಡ ಒಂದು.
ಇಂದು ಮಾರುಕಟ್ಟಯಲ್ಲಿ ಡಿಸೈನ್ ಡಿಸೈನ್ ಟೋಪಿಗಳಿವೆ. ಇವುಗಳನ್ನು ಕ್ರೀಡೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಏಕೆಂದರೆ, ತಲೆಗೆ ಬಿಸಿಲಿನಿಂದ ರಕ್ಷಣೆ ಸಿಗಲಿ ಅಂತ. ನಮ್ಮಲ್ಲಿ ಬಹುತೇಕ ಮಂದಿ ಟೋಪಿಯನ್ನು ಬಳಸುತ್ತಾರೆ. ಸಾಮಾನ್ಯ ಜನರು ಬಿಸಿಲಿನಿಂದ ರಕ್ಷಣೆ ಸಿಗಲಿ ಎನ್ನುವುದಕ್ಕಿಂತ ಸ್ಟೈಲ್ಗಾಗಿ ಟೋಪಿಯನ್ನು ಧರಿಸುತ್ತಾರೆ. ಟೋಪಿ ಧರಿಸಿದಾಗ ವ್ಯಕ್ತಿಯ ಲುಕ್ ಕೂಡ ಬದಲಾಗುತ್ತದೆ.
ನೀವು ಟೋಪಿಯನ್ನು ಗಮನಿದಾಗ ಅದರ ಮೇಲೆ ಒಂದು ಬಟನ್ ಇರುವುದನ್ನು ನೀವು ನೋಡಿರಬಹುದು. ಅದು ಏಕಿದೆ ಎಂದು ಎಂದಾದರೂ ನೀವು ಯೋಚಿಸಿದ್ದೀರಾ? ಅದು ಟೋಪಿಗೆ ಅಲಂಕಾರದಂತೆ ಕಂಡರೂ ಅದರ ಹಿಂದೆ ಸ್ಪಷ್ಟವಾದ ಕಾರಣವೂ ಇದೆ. ಅದೇನೆಂದು ನಾವೀಗ ತಿಳಿದುಕೊಳ್ಳೋಣ.
ಬಟನ್ ಹಿಂದಿರುವ ರಹಸ್ಯವೇನು?
ಅದಂಹಾಗೆ, ಈ ಬಟನ್ಗಳು ಸಾಮಾನ್ಯವಾಗಿ ಬೇಸ್‌ಬಾಲ್ ಕ್ಯಾಪ್‌ಗಳಲ್ಲಿ ಮಾತ್ರ ಕಂಡುಬರುತ್ತದೆ. ಈ ಸಣ್ಣ ಬಟನ್ ಅನ್ನು 'ಸ್ಕ್ವಾಚಿ' ಎಂದು ಕರೆಯಲಾಗುತ್ತದೆ. ಇದನ್ನು ಮೂಲತಃ ಟೋಪಿಯ ಮೇಲ್ಭಾಗಕ್ಕೆ ಸೇರಿಸಲಾದ ವಿವಿಧ ಬಟ್ಟೆಗಳನ್ನು ಒಟ್ಟಿಗೆ ಹೊಲಿಯುವ ಪ್ರದೇಶವನ್ನು ಮುಚ್ಚಲು ಬಳಸಲಾಗುತ್ತಿತ್ತು. ಅಂದರೆ, ಬಟ್ಟೆಯ ತುಂಡುಗಳನ್ನು ಒಟ್ಟಿಗೆ ಸೇರಿಸುವ ಜಾಗದಲ್ಲಿ ಇರುವ ಹೊಲಿಗೆಯನ್ನು ಮುಚ್ಚಲು ಇದನ್ನು ಬಳಸಲಾಗುತ್ತಿತ್ತು.
ಇಂದು ಫ್ಯಾಶನ್‌ನ ಭಾಗವಾಗಿದೆ
ಬೇಸ್‌ಬಾಲ್ ಆಟಗಾರರು ಹೆಚ್ಚಾಗಿ ಧರಿಸುತ್ತಿದ್ದರಿಂದ ಇದಕ್ಕೆ ಬೇಸ್‌ಬಾಲ್ ಕ್ಯಾಪ್ ಎಂಬ ಹೆಸರು ಬಂದಿದೆ. ಅರಂಭದಲ್ಲಿ ಬಟ್ಟೆಯ ಸೀಮ್ (ಸೀಮ್ ಎಂದರೆ ಎರಡು ಅಥವಾ ಹೆಚ್ಚಿನ ಬಟ್ಟೆಯ ತುಂಡುಗಳನ್ನು ಒಟ್ಟಿಗೆ ಹೊಲಿಯುವ ಭಾಗ) ಗೋಚರಿಸುತ್ತಿತ್ತು. ಅದನ್ನು ಮರೆಮಾಡಲು, ಮೇಲೆ ಸಣ್ಣ ಕವರ್‌ನಂತೆ ಒಂದು ಗುಂಡಿಯನ್ನು ಸೇರಿಸಲಾಯಿತು. ನಂತರ, ಇದೇ ಫ್ಯಾಶನ್‌ನ ಭಾಗವಾಯಿತು.
ಇಂದು, ಅನೇಕ ಬ್ರ್ಯಾಂಡ್‌ಗಳು ಇದನ್ನು ಡಿಸೈನ್ ಆಗಿ ಬಳಸುತ್ತಿವೆ. ವಿಭಿನ್ನ ಮಾದರಿಗಳಲ್ಲಿ ಈ ಗುಂಡಿಯನ್ನು ವಿಭಿನ್ನ ರೀತಿಯಲ್ಲಿ ಜೋಡಿಸುವ ಬ್ರ್ಯಾಂಡ್‌ಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ, (ಏಜೆನ್ಸೀಸ್).