Indian Railways bedsheet washing cost 
ದೇಶ

ಎಸಿ ರೈಲಿನಲ್ಲಿ ಪ್ರಯಾಣಿಕರು ಬಳಸುವ ಬೆಡ್​ಶೀಟ್​ ತೊಳೆಯಲು ರೈಲ್ವೆ ಇಲಾಖೆ ಕೊಡುವ ಹಣವೆಷ್ಟು ಗೊತ್ತಾ?.. Indian Railways

Indian Railways bedsheet washing cost: ಭಾರತದ ರೈಲಿನಲ್ಲಿ ದುಬಾರಿ ಪ್ರಯಾಣ ಎಂದರೆ ಅದು ಎಸಿ ಬೋಗಿಯಲ್ಲಿ ಪ್ರಯಾಣಿಸುವುದು.  ಎಸಿ ಕೋಚ್​ನಲ್ಲಿ ಪ್ರಯಾಣಿಸುವಾಗ ಕೊಡುವ ಬೆಡ್​ಶೀಟ್​, ದಿಂಬು ಟವಲ್​ ಅನ್ನು ಟಿಕೆಟ್​​ ಕೊಟ್ಟ ಆಧಾರದಲ್ಲಿ ಕೊಡುತ್ತದೆ. ಈಗ ಸಿಕ್ಕಿರುವ ಅಚ್ಚರಿ ವಿಚಾರ ಏನೆಂದರೆ, ಭಾರತ ರೈಲ್ವೆ ಇಲಾಖೆಯು ಪ್ರಯಾಣಿಕರು ಬಳಸಿ ಬೆಡ್​ಶೀಟ್​ ತೊಳೆಯಲು ಲಾಂಡ್ರಿಗೆ ಕೊಡುವ ವೆಚ್ಚ ಎಷ್ಟು ಎನ್ನುವುದು. ಹೌದು ರೈಲ್ವೆ ಇಲಾಖೆ ನೀವು ಬಳಸು ಬೆಡ್​ಶೀಟ್​ ತೊಳೆಯಲು ಖರ್ಚು ಮಾಡೋದು3.12ರೂಪಾಯಿ ಮಾತ್ರ ಎನ್ನುವ ಮಾಹಿತಿ ಹೊರಬಿದ್ದಿದೆ. 

3.12ರೂ ಖರ್ಚು

ಸಾರಿಗೆ ವ್ಯವಸ್ಥೆಯಲ್ಲಿ ಅತ್ಯಂತ ಅಗ್ಗದ ದರದಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುವುದು ಎಂದರೆ, ಅದು  ರೈಲ್ವೆ ಪ್ರಯಾಣ.  ಹೀಗಾಗಿಯೇ ರೈಲಿನಲ್ಲಿ ಕಿಕ್ಕಿರಿದು ಜನರು ಸೇರಿರುತ್ತಾರೆ. ಮುಂಬೈ ಸೇರಿದಂತೆ ಹಲವು ಮೆಟ್ರೋ ನಗರಿಯಲ್ಲಿ ರೈಲಿನ ಸಂಖ್ಯೆ ಹೆಚ್ಚಿಸಬೇಕು ಎಂದು ಹಲವರ ಬೇಡಿಕೆ ಇದೆ. ರೈಲಿನಲ್ಲಿ  ಪ್ರಯಾಣಿಸಲು ಹತ್ತಕ್ಕೂ ಹೆಚ್ಚು ವರ್ಗಗಳಿವೆ. ಅದರಲ್ಲಿ ಎಸಿ ವರ್ಗದಲ್ಲಿ ಪ್ರಯಾಣಿಸುವವರು ದೂರದ ಊರಿಗೆ ಹೋಗುವವರಾಗಿರುತ್ತಾರೆ. ಅಥವಾ ಪ್ರವಾಸಿಗರಾಗುತ್ತಾರೆ. ಇವರಿಗೆ ನೀಡುವ ಬೆಡ್​ಶೀಟ್​ ಬಳಕೆಯಾದ ನಂತರ ಅದನ್ನು ಒಗೆಯಲು  ಭಾರತೀಯ ರೈಲ್ವೆ ಇಲಾಖೆ ಲಾಂಡ್ರಿಗೆ ನೀಡೋದು  ಕೇವಲ 3.16 ರೂಪಾಯಿ  ಎಂದು ಖಾಸಗಿ ಮಾಧ್ಯಮ ವರದಿ ಮಾಡಿದೆ. 

ಪ್ರಯಾಣಿಕರಿಗೆ ಅಚ್ಚರಿ

ಹೌದು ವಿಶ್ವದ ಅತಿದೊಡ್ಡ ರೈಲಿನ ಸಂಪರ್ಕ ಹೊಂದಿರುವ  ಭಾರತದ ರೈಲ್ವೆ ಇಲಾಖೆಯು, ಎಸಿ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ದಿಂಬು, ಬೆಡ್​ಶೀಟ್​ , ಟವೆಲ್​ ಕಂಬಳಿ ನೀಡುತ್ತದೆ. ಇದನ್ನೆಲ್ಲವು ಟಿಕೆಟ್​ ಬುಕ್ಕಿಂಗ್​ ವೇಳೆಯೇ ಕಟ್ಟಿಸಿಕೊಳ್ಳಲಾಗುತ್ತದೆಯಾದರೂ,  ಕೊಟ್ಟದನ್ನು ವಾಪಸ್​ ಪಡೆದು ಲಾಂಡ್ರಿಗೆ ಹಾಕಲು ಪ್ರಯಾಣಿಕರಿಂದ ಪಡೆದುಕೊಳ್ಳೋದು ಕೇವಲ ಮೂರು ರೂಪಾಯಿ ಎಂದು  ಭಾರತೀಯ ರೈಲ್ವೆ ಇಲಾಖೆಯ  ಲಾಂಡ್ರಿ ಟೆಂಡರ್ ದಾಖಲೆಯ ಪ್ರಕಾರ ತಿಳಿದುಬಂದಿದೆ.   

ಭಾರತೀಯ ರೈಲ್ವೆಯಲ್ಲಿ ಅತ್ಯಂತ ದುಬಾರಿ ಮತ್ತು ಆರಾಮದಾಯಕ ಪ್ರಯಾಣ ಬೆಳೆಸಬೇಕು ಎಂದರೆ ಫಸ್ಟ್​ ಎಸಿ ಬುಕ್​ ಮಾಡಿ ಎನ್ನುತ್ತಾರೆ, ಇವರಿಗೆ ಪ್ರತ್ಯೇಕ ಕ್ಯಾಬಿನ್​ ಇರುತ್ತದೆ. ಇನ್ನು ಎಸಿ2 ಹಾಗೂ ಎಸಿ ಎಕಾನಮಿ ಹಾಗೂ ಎಸಿ ಚೇರ್​ ಕಾರ್​​ ಸೇರಿದಂತೆ ಹಲವು ಇದೆ. ಇದರಲ್ಲಿ ಲಕ್ಷ್ಯುರಿ ಎಂದರೆ ಫಸ್ಟ್​ ಎಸಿ ಇಲ್ಲಿ ಪ್ರಯಾಣಿಸುವವರಿಗೆ ಪ್ರತ್ಯೇಕ ಕ್ಯಾಬಿನ್​ ಸ್ವಚ್ಛಂದವಾಗಿರುವ ತಲೆ ದಿಂಬು ಟವೆಲ್​ ಸೇರಿದಂತೆ ನಾನಾ ವಸ್ತುಗಳನ್ನು ನೀಡಲಾಗುತ್ತದೆ. ಪ್ರಯಾಣಿಕರು ಬಳಸಿದ ಲೆನಿನ್​ ಸ್ವಚ್ಛಗೊಳಿಸಲು ಕೇವಲ ಮೂರು ರೂಪಾಯಿ ತೆಗೆದುಕೊಳ್ಳಲಾಗುತ್ತದೆ. ಈ ಬಗ್ಗೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್)