Hardeep Singh Puri (ಚಿತ್ರ X) 
ದೇಶ

ಕಾಂಗ್ರೆಸ್ ಅಭ್ಯರ್ಥಿ ಸೇರಿ ಇಬ್ಬರ ನಾಮಪತ್ರ ತಿರಸ್ಕೃತ; ಹರ್ದೀಪ್ ಸಿಂಗ್ ಪುರಿ ರಾಜ್ಯಸಭೆ ಆಯ್ಕೆ ಖಚಿತ | Hardeep Singh Puri

ಮಧ್ಯಪ್ರದೇಶದ ರಾಜ್ಯಸಭಾ ಉಪಚುನಾವಣೆಯಲ್ಲಿ, ಮಂಗಳವಾರ(ನ. 03) ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸೇರಿದಂತೆ ಇಬ್ಬರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದ್ದು, ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ ಎಂದು ವರದಿಯಾಗಿದೆ.

ಭೋಪಾಲ್: ಮಧ್ಯಪ್ರದೇಶದ ರಾಜ್ಯಸಭಾ ಉಪಚುನಾವಣೆಯಲ್ಲಿ, ಮಂಗಳವಾರ(ನ. 03) ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸೇರಿದಂತೆ ಇಬ್ಬರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದ್ದು, ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ ಎಂದು ವರದಿಯಾಗಿದೆ.

ನಾಮಪತ್ರಗಳ ಪರಿಶೀಲನೆಗೆ ಕೊನೆಯ ದಿನವಾಗಿದ್ದ ಇಂದು, ಕಾಂಗ್ರೆಸ್ ಬೆಂಬಲಿತ ರಾಜಕುಮಾರ್ ಲೋಹಾನಿ ಮತ್ತು ಕಾಂತೆ ಸಾಯಣ್ಣ ಅವರ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ ಎನ್ನಲಾಗಿದೆ. ಮತ್ತು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾದ ನ. 05ರಂದು ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿ ಕಾಂತೆ ಸಾಯ ಮತ್ತು ಲೋಹಾನಿ ಅವರು, ಕಾಂಗ್ರೆಸ್ ನಾಯಕ ಹೇಮಂತ್ ಕಟಾರೆ ಅವರೊಂದಿಗೆ ಸೇರಿ, ಪುರಿ ಅವರ ನಾಮಪತ್ರ ವಿರುದ್ಧ ಆಕ್ಷೇಪಣೆ ಎತ್ತಿದ್ದರು. 'ಫಾರ್ಮ್ 26'ರಲ್ಲಿ ಸಲ್ಲಿಸಲಾದ ಅವರ ಅಫಿಡವಿಟ್ ಅಪೂರ್ಣವಾಗಿದೆ ಮತ್ತು ಅಮಾನ್ಯವಾಗಿದೆ ಎಂದು ಪ್ರತಿಪಾದಿಸಿದ್ದರು.

ಅದಾಗ್ಯೂ, ಚುನಾವಣಾಧಿಕಾರಿ ಉಮೇಶ್ ಶರ್ಮಾ ಅವರು ಆಕ್ಷೇಪಣೆಗಳನ್ನು ಪರಿಶೀಲಿಸಿ, ಪುರಿ ಅವರು 'ಜನತಾ ಪ್ರಾತಿನಿಧ್ಯ ಕಾಯ್ದೆ'ಯ ಯಾವುದೇ ನಿಬಂಧನೆಯನ್ನು ಉಲ್ಲಂಘಿಸಿಲ್ಲ ಎಂದು ಆದೇಶ ನೀಡಿದ್ದು, ಪುರಿ ಅವರ ನಾಮಪತ್ರಗಳಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ಹೇಳಿದ್ದಾರೆ.

ಇನ್ನೂ ಚುನಾವಣಾಧಿಕಾರಿ ಉಮೇಶ್ ಶರ್ಮಾ ಅವರ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್, ದು ಭಾರತೀಯ ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಇಷ್ಟೊಂದು ಗಂಭೀರ ದೋಷಗಳಿದ್ದರೂ, ನಾಮಪತ್ರವನ್ನು ತಿರಸ್ಕರಿಸಲಾಗಿಲ್ಲ ಎಂದು ಆರೋಪಿಸಿದೆ. ಮತ್ತು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಹೇಮಂತ್ ಕಟಾರೆ ಮತ್ತು ಕಾಂಗ್ರೆಸ್ ಶಾಸಕ ಆತಿಫ್ ಅಕೀಲ್ ತಿಳಿಸಿದ್ದಾರೆ.

ಎದುರಾಳಿಗಳ ನಾಮಪತ್ರಗಳು ತಿರಸ್ಕೃತಗೊಂಡಿರುವುದರಿಂದ ಹರ್ದೀಪ್ ಸಿಂಗ್ ಪುರಿ ಅವರ ನಾಮಪತ್ರ ಸ್ವೀಕೃತಗೊಂಡಿರುವುದರಿಂದ ಅವರ ಆಯ್ಕೆ ಬಹುತೇಕ ಖಚಿತವಾಗಿದೆ. ಇದಕ್ಕೂ ಮುನ್ನ, ಪುರಿಯವರು ಉತ್ತರ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿದ್ದರು (ಏಜೆನ್ಸೀಸ್).