Noida Woman Death 
ದೇಶ

ವರದಕ್ಷಿಣೆ ಕಿರುಕುಳ, ಮಾನಸಿಕ ಹಿಂಸೆ; ಮದುವೆಯಾದ 5 ತಿಂಗಳಿಗೆ ಗೃಹಿಣಿ ಸೂಸೈಡ್, ವಕೀಲನ ವಿರುದ್ಧ ಕೇಸ್..Noida

ಪ್ರಮುಖ ಮುಖ್ಯಾಂಶಗಳು

  • ಮದುವೆಯಾದ ಐದೇ ತಿಂಗಳಿಗೆ 31 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಆತ್ಮಹತ್ಯೆ
  • ಮಾನಸಿಕ ಮತ್ತು ದೈಹಿಕ ಕಿರುಕುಳ, ವರದಕ್ಷಿಣೆ ತರಲು ನಿತ್ಯ ಒತ್ತಾಯ
  • ನೋಯ್ಡಾದಲ್ಲಿ ನೆಲೆಸಿದ್ದ ಭೋಪಾಲ್ ಮೂಲದ ಯುವತಿ ತ್ವಿಶಾ ಶರ್ಮಾ ಸಾವು
Noida Woman Dies: 33 ವರ್ಷದ ಸಾಫ್ಟ್​ವೇರ್​ ಎಂಜಿನಿಯರ್​ ತ್ವಿಶಾ ಶರ್ಮಾ ಎಂಬಾಕೆ ವರದಕ್ಷಿಣೆ ಕಿರುಕುಳದಿಂದ ಬೇಸತ್ತು, ಮದುವೆಯಾಗಿ ಐದೇ ತಿಂಗಳಿಗೆ ಸೂಸೈಡ್ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ಬೆಳಕಿಗೆ ಬಂದಿದೆ.
ತ್ವಿಶಾಳ ಅತ್ತೆ ನಿವೃತ್ತ ನ್ಯಾಯಧೀಶರು, ಆಕೆಯ ಪತಿ ವಕೀಲನಾಗಿದ್ದು ಇಬ್ಬರ ವಿರುದ್ಧ ಎಫ್​ಐಆರ್​​ ದಾಖಲಾಗಿದೆ. ವರದಕ್ಷಿಣೆ ಸಾವು ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಪತಿ ಮತ್ತು ಆತನ ಸಂಬಂಧಿಕರನ್ನು ವಿಚಾರಣೆ ನಡೆಸುತ್ತಿದ್ದಾರೆ.
ತ್ವಿಶಾ ಶರ್ಮಾ ಭೂಪಾಲ್​ ಮೂಲದ ವಕೀಲ ಸಮರ್ಥ್​ ಸಿಂಗ್​ ಅವರನ್ನು ಐದು ತಿಂಗಳ ಹಿಂದೆ ಮದುವೆಯಾಗಿದ್ದಳು. ಮದುವೆಯಾದ ಕೆಲ ದಿನಕ್ಕೆ ಆಕೆಯ ಅತ್ತೆ ಹಾಗೂ ಪತಿ ಹಣಕ್ಕಾಗಿ ಪೀಡಿಸುತ್ತಿದ್ದರು. ಇದೇ ಕಾರಣದಿಂದ ಆಕೆ ಮೇ.12ರಂದು ಆತ್ಮಹತ್ಯೆಗೆ ಗುರಿಯಾಗಿದ್ದಾಳೆ ಎಂದು ದೂರಿದ್ದಾರೆ.

ಮಾನಸಿಕ, ದೈಹಿಕ ಕಿರುಕುಳ

'ಆಕೆ ಸೂಸೈಡ್​ ಮಾಡಿಕೊಳ್ಳುವ ರಾತ್ರಿ ನಮಗೆ 10:05ಕ್ಕೆ ಕರೆ ಮಾಡಿದ್ದಳು. ದೈಹಿಕ ಮತ್ತು ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಳು. ಹೀಗೆ ಮಾತನಾಡುತ್ತಿರುವಾಗ ಆಕೆಯ ಪತಿ ಕೊಠಡಿಗೆ ಎಂಟ್ರಿಯಾದ ಕಾರಣ ಕಾಲ್ ಕಟ್ ಮಾಡಿದಳು' ಎಂದು ಹೇಳಿದ್ದಾರೆ.
ಇನ್ನು ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿರುವ ತಿಶ್ವಾ ಸಹೋದರ ಮೇಜರ್​ ಹರ್ಷಿತ್​ ಶರ್ಮಾ ಮಾತನಾಡಿ, 'ಆಕೆ ಕರೆ ಕಟ್ ಮಾಡಿದ ತಕ್ಷಣ ನಾವು ಸಮರ್ಥ್ ಮತ್ತು ಅವರ ಅತ್ತೆ ಗಿರಿಬಾಲ ಅವರಿಗೆ ಕರೆ ಮಾಡಿ ಮಾತನಾಡಲು ಯತ್ನಿಸಿದೆವು. ಕೊನೆಗೆ ಅವರು 10:15ಕ್ಕೆ ಕಾಲ್​ ಪಿಕ್​ ಮಾಡಿ ಮಗಳ ಬಗ್ಗೆ ತಿಳಿಸಿದರು. 10:20ಕ್ಕೆ ಆಕೆ ಉಸಿರಾಟ ನಿಲ್ಲಿಸದ ಬಗ್ಗೆ ತಿಳಿಯಿತು. ತ್ವಿಶಾಳನ್ನು 10 ನಿಮಿಷ ದೂರದಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋದರು ಪ್ರಾಣ ಉಳಿದಿಲ್ಲ' ಎಂದು ಸಂತ್ರಸ್ತೆ ಕುಟುಂಬಸ್ಥರು ಹೇಳಿದ್ದಾರೆ.

ಗರ್ಭಪಾತಕ್ಕೆ ಒತ್ತಡ

'ಸಹೋದರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು. ಆಕೆ ಗರ್ಭಿಣಿಯಾಗಿದ್ದಾಗ ಮಗು ಬಯಕೆಯನ್ನು ವ್ಯಕ್ತಪಡಿಸಿದ್ದಳು. ಆದರೆ ಅವರು ಆಕೆಗೆ ಗರ್ಭಪಾತಮಾಡಿಸಲು ತೀವ್ರ ಒತ್ತಡ ಹೇರಿದ್ದರು. ಆಕೆಯ ನಡೆಯನ್ನು ಸಂಶಯಿಸುತ್ತಿದ್ದರು. ಇದು ನನ್ನ ಮಗುವಲ್ಲ. ನಿನಗೆ ಅಕ್ರಮ ಸಂಬಂಧ ಇದೆ ಅವನದ್ದೇ ಈ ಮಗು ಎಂದು ಆರೋಪಿಸುತ್ತಿದ್ದರು. ಈ ಮಧ್ಯೆ ಆಕೆ ಗರ್ಭಪಾತ ಮಾಡಿಸಿಕೊಂಡಿದ್ದಾಳೆ' ಎಂದು ಆಕೆಯ ಕರಾಳ ದಿನಗಳನ್ನು ಬಹಿರಂಗ ಪಡಿಸಿದರು.

ದೇಹದ ಮೇಲೆ ಗಾಯ

ತ್ವಿಶಾ ನೇಣು ಬಿಗಿದ ನಂತರವೂ ಬದುಕಿದ್ದಳು. ಆದರೆ, ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾಳೆ. ಆಕೆಯ ದೇಹದ ಮೇಲೆ ಹಲವಾರು ಗಾಯಗಳಾಗಿವೆ. ಮುಖ, ದೇಹ ಎಲ್ಲ ಕಡೆಯು ಗಾಯವಾಗಿದೆ. ಹೊಟ್ಟೆ, ಯಕೃತ್ತು, ಇತರ ಭಾಗದಲ್ಲಿ ವಿಷಕಾರಿ ಅಂಶ ವಿದೆಯೇ ಎನ್ನುವುದನ್ನು ಪರಿಶೀಲಿಸಲು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎನ್ನಲಾಗಿದೆ, (ಏಜೆನ್ಸೀಸ್).