Ironing Prices (ಚಿತ್ರ X) 
ದೇಶ

ನೋಯ್ಡಾದಲ್ಲಿ 5 ರೂ, ಬೆಂಗಳೂರಲ್ಲಿ 20 ರೂ.! ಸಿಲಿಕಾನ್ ಸಿಟಿಯ ಇಸ್ತ್ರಿ ರೇಟ್ ನೋಡಿ ಬೆಚ್ಚಿಬಿದ್ದ ಉದ್ಯಮಿ ಸಜಿತ್ ಪೈ Ironing Prices

ಪ್ರಮುಖ ಮುಖ್ಯಾಂಶಗಳು

  • ಸಿಲಿಕಾನ್ ಸಿಟಿ ಬೆಂಗಳೂರಿನ ಜೀವನ ವೆಚ್ಚ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿವೆ
  • ಬೆಂಗಳೂರು ಮೂಲದ ವೆಂಚರ್​ ಕ್ಯಾಪಿಟಲಿಸ್ಟ್​ ಸಜಿತ್​ ಪೈ ಹಂಚಿಕೊಂಡ ಪೋಸ್ಟ್
  • ನಾನು ನೋಯ್ಡಾದಲ್ಲಿ ತಂಗಿದ್ದಾಗ ಪ್ರತಿ ಒಂದು ತುಂಡು ಬಟ್ಟೆ ಇಸ್ತ್ರಿ ಮಾಡಲು 5 ರೂ. ಇತ್ತು
  • ಒಂದು ಬಟ್ಟೆಗೆ 12-20 ರೂ. ಬೆಲೆಗಳಾಗಿರುವುದರಿಂದ ನನಗೆ ಆಶ್ಚರ್ಯವನ್ನುಂಟು ಮಾಡಿದೆ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಜೀವನ ವೆಚ್ಚ ಮತ್ತು ಹೈಪರ್-ಲೋಕಲ್ ಸೇವೆಗಳ ಬೆಲೆಗಳು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿವೆ ಎಂಬುದಕ್ಕೆ ಇತ್ತೀಚಿನ ಸಾಮಾಜಿಕ ಮಾಧ್ಯಮ ಚರ್ಚೆಯೊಂದು ಸಾಕ್ಷಿಯಾಗಿದೆ. ಬೆಂಗಳೂರು ಮೂಲದ ವೆಂಚರ್​ ಕ್ಯಾಪಿಟಲಿಸ್ಟ್​ ಸಜಿತ್​ ಪೈ ಅವರು ನಗರದ (Ironing Prices) ಅತಿ ಹೆಚ್ಚು ಇಸ್ತ್ರಿ ಶುಲ್ಕವನ್ನು ನೋಯ್ಡಾ ನಗರಕ್ಕೆ ಹೋಲಿಸಿ ಹಂಚಿಕೊಂಡಿರುವ ಪೋಸ್ಟ್​ ಇದೀಗ ಭಾರೀ ಸದ್ದು ಮಾಡುತ್ತಿದೆ.

ಘಟನೆ ಏನು?

ನಗರದ ದುಬಾರಿ ಪ್ರದೇಶಗಳಲ್ಲೊಂದಾದ ಇಂದಿರಾನಗರಕ್ಕೆ ಸ್ಥಳಾಂತರಗೊಂಡ ಸಜಿತ್ ಪೈ, ಅಲ್ಲಿನ ಸ್ಥಳೀಯ ಲಾಂಡ್ರಿ ಸೇವೆಗಳ ವೆಚ್ಚವನ್ನು ಕಂಡು ನಿಜವಾದ ಆಶ್ಚರ್ಯ ಮತ್ತು ಆಘಾತವನ್ನು ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಬೆಂಗಳೂರಿನಲ್ಲಿ ಬಟ್ಟೆಗಳನ್ನು ಇಸ್ತ್ರಿ ಮಾಡಲು ವಿಧಿಸುವ ಶುಲ್ಕ ನೋಯ್ಡಾಗೆ ಹೋಲಿಸಿದರೆ ದುಬಾರಿಯಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಮಾಡಿದ್ದು, ಇದು ನಗರಗಳ ನಡುವಿನ ಜೀವನ ವೆಚ್ಚದ ತಾರತಮ್ಯದ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಪೈ ಅವರು ಈ ಹಿಂದೆ ನೋಯ್ಡಾದಲ್ಲಿ ನೆಲೆಸಿದ್ದಾಗ ಪ್ರತಿ ಒಂದು ಬಟ್ಟೆಗೆ 5 ರೂ. ಪಾವತಿಸುತ್ತಿದ್ದರು. ಅದರಿಂದ ಬೆಂಗಳೂರಿನ ಬೆಲೆಗಳು ಸ್ವಲ್ಪ ಹೆಚ್ಚಾಗಬಹುದು ಎಂದು ನಿರೀಕ್ಷಿಸಿದ್ದರು. ಆದರೆ, ಅವರಿರುವ ನಗರದಲ್ಲಿನ ಇಸ್ತ್ರಿ ದರಗಳು ಅವರನ್ನು ಆಶ್ಚರ್ಯಚಕಿತಗೊಳಿಸಿದವು.

ಪೋಸ್ಟ್​ನಲ್ಲೇನಿದೆ?

ಈ ತಿಂಗಳ ಆರಂಭದಲ್ಲಿ ನಾನು ಬೆಂಗಳೂರಿಗೆ ಸ್ಥಳಾಂತರಗೊಂಡೆ. ಇಸ್ತ್ರಿ ಮಾಡಲು ಬಟ್ಟೆಗಳನ್ನು ಅಂಗಡಿಗೆ ತೆಗೆದುಕೊಂಡು ಹೋಗಿದ್ದೆ. ಆದರೆ, ಆಶ್ಚರ್ಯಕರ ಸಂಗತಿಯೆಂದರೆ ಇಸ್ತ್ರಿ ಮಾಡುವ ವೆಚ್ಚ ಹೆಚ್ಚಾಗಿದೆ. ಈ ಹಿಂದೆ ನಾನು ನೋಯ್ಡಾದಲ್ಲಿ ತಂಗಿದ್ದಾಗ ಪ್ರತಿ ಒಂದು ತುಂಡು ಬಟ್ಟೆಗೆ 5 ರೂ. ಇತ್ತು. ಬೆಂಗಳೂರಿನಲ್ಲಿ ಸ್ವಲ್ಪ ಬೆಲೆಯನ್ನು ಹೆಚ್ಚಾಗಬಹುದು ಎಂದು ನಿರೀಕ್ಷಿಸಿದ್ದೆ. ಆದರೆ, ಇಲ್ಲಿ ಒಂದು ಬಟ್ಟೆಗೆ 12-20 ರೂ. ಬೆಲೆಗಳಾಗಿರುವುದರಿಂದ ನನಗೆ ಆಶ್ಚರ್ಯವನ್ನುಂಟು ಮಾಡಿದೆ.
ಆದಾಗ್ಯೂ, ಬೆಂಗಳೂರಿನಲ್ಲಿ ಇಸ್ತ್ರಿ ಮಾಡುವ ಮಾರಾಟಗಾರರು ಇದ್ದಿಲು ತುಂಬಿದ ಕಬ್ಬಿಣದ ಪೆಟ್ಟಿಗೆಗಳ ಬದಲಿಗೆ ಎಲ್‌ಪಿಜಿ ಚಾಲಿತ ಕಬ್ಬಿಣಗಳನ್ನು ಬಳಸುತ್ತಿರುವುದರಿಂದ ಬೆಲೆ ಏರಿಕೆ ಮಾಡಿರಬಹುದು ಎಂದು ಬರೆದು ಪೋಸ್ಟ್​ ಹಂಚಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆಗಳು

ಪೈ ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಪ್ರತಿಕ್ರಿಯಿಸಿದ್ದು, ಇಸ್ತ್ರಿ ಮಾಡುವುದು ಹೆಚ್ಚು ಶ್ರಮದಾಯಕ ಕೆಲಸ ಮತ್ತು ಮಾರಾಟಗಾರರು ಹೆಚ್ಚು ಶುಲ್ಕ ವಿಧಿಸುತ್ತಿಲ್ಲ ಎಂದು ಹೇಳಿದ್ದಾರೆ. ಇಸ್ತ್ರಿ ಮಾಡುವುದು ಶ್ರಮದಾಯಕ ಕೆಲಸ. ಇದರಿಂದ ದೈಹಿಕ ಒತ್ತಡ, ವೃತ್ತಿಪರ ಅಪಾಯಗಳು ಇದ್ದರೂ ಕೂಡಾ ಹೆಚ್ಚು ಶುಲ್ಕ ವಿಧಿಸುವುದಿಲ್ಲ ಎಂದು ಬಳಕೆದಾರರು ಕಾಮೆಂಟ್​ ಮಾಡಿದ್ದಾರೆ (ಏಜೆನ್ಸೀಸ್​).