ಮಮತಾ ಬ್ಯಾನರ್ಜಿ ಮೇಲಿನ ಹಲ್ಲೆ ಆರೋಪ ಸಂಪೂರ್ಣ ಸುಳ್ಳು 
ದೇಶ

ಮಮತಾ ಬ್ಯಾನರ್ಜಿ ಮೇಲಿನ ಹಲ್ಲೆ ಆರೋಪ ಸಂಪೂರ್ಣ ಸುಳ್ಳು: ಘಟನೆಯ ಅಸಲಿ ಸತ್ಯ ಬಿಚ್ಚಿಟ್ಟ ಪೊಲೀಸ್ ಕಮಿಷನರ್! | Mamata Banerjee

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ದುರ್ಗಾ ಪೂಜೆ ಉದ್ಘಾಟನೆಗೆ ತೆರಳುತ್ತಿದ್ದಾಗ ಮಹಿಳೆಯೊಬ್ಬರಿಂದ ದಾಳಿಗೊಳಗಾಗಿದ್ದಾರೆ ಎಂಬ ಆರೋಪವನ್ನು ಕೊಲ್ಕತ್ತಾ ಪೊಲೀಸ್ ಕಮಿಷನರ್ ಅಜಯ್ ಕುಮಾರ್ ನಂದ್ ಅವರು ಬುಧವಾರದಂದು ತಳ್ಳಿಹಾಕಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ದುರ್ಗಾ ಪೂಜೆ ಉದ್ಘಾಟನೆಗೆ ತೆರಳುತ್ತಿದ್ದಾಗ ಮಹಿಳೆಯೊಬ್ಬರಿಂದ ದಾಳಿಗೊಳಗಾಗಿದ್ದಾರೆ ಎಂಬ ಆರೋಪವನ್ನು ಕೊಲ್ಕತ್ತಾ ಪೊಲೀಸ್ ಕಮಿಷನರ್ ಅಜಯ್ ಕುಮಾರ್ ನಂದ್ ಅವರು ಬುಧವಾರದಂದು ತಳ್ಳಿಹಾಕಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ನಡೆದಿದೆ ಎನ್ನಲಾದ ಈ ಘಟನೆಗೆ ಸಂಬಂಧಿಸಿದಂತೆ, ಕಳೆದ ಒಂದು ವರ್ಷದಿಂದ ಕರ್ತವ್ಯಕ್ಕೆ ಗೈರುಹಾಜರಾಗಿದ್ದಾರೆ ಎನ್ನಲಾದ ನಾಗರಿಕ ಸ್ವಯಂಸೇವಕಿಯನ್ನು ಪೊಲೀಸರು ನಿನ್ನೆ ಬಂಧಿಸಿದ್ದರು.

ಘಟನೆಯ ಕುರಿತು ಸ್ಪಷ್ಟನೆ ನೀಡಿರುವ ಕೊಲ್ಕತ್ತಾ ಪೊಲೀಸ್ ಕಮಿಷನರ್ ಅಜಯ್ ಕುಮಾರ್ ನಂದ್ ಅವರು, ಆ ಮಹಿಳೆ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಲು ಮಾತ್ರ ಅಲ್ಲಿಗೆ ಹೋಗಿದ್ದರು ಎಂದು ತಿಳಿಸಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿಯ ಬೆಂಬಲಿಗರು ಆಕೆಯ ವರ್ತನೆಯನ್ನು ಬೇರೆ ರೀತಿಯಲ್ಲಿ ಗ್ರಹಿಸಿದ್ದರಿಂದ ಇದು ದಾಳಿಯಂತೆ ಬಿಂಬಿತವಾಗಿದೆ ವಿನಃ ಇದು ಯಾವುದೇ ನೈಜ ದಾಳಿಯಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಅಕ್ಟೋಬರ್ 20 ರವರೆಗೆ ದೇಶದ 20 ರಾಜ್ಯಗಳಿಗೆ ಹವಾಮಾನ ಇಲಾಖೆಯಿಂದ ಹೈಅಲರ್ಟ್...ದಕ್ಷಿಣ ಭಾರತದ ಕಥೆ ಏನು..? | IMD Rain Alert

ಆ ಹೆಣ್ಣುಮಗಳಿಗೆ ಮತ್ತು ಆಕೆಯ ತಂದೆಗೆ ಮಮತಾ ಬ್ಯಾನರ್ಜಿ ಮುಂಚಿತವಾಗಿಯೇ ಪರಿಚಿತರಾಗಿದ್ದರು ಎಂದು ತಿಳಿಸಿರುವ ಕಮಿಷನರ್, ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಕೂಡಲೇ ಎಚ್ಚೆತ್ತು ಆಕೆಯನ್ನು ವಶಕ್ಕೆ ಪಡೆದಿದ್ದಾರೆ ಎಂದಿದ್ದಾರೆ. ಈ ಸಂಪೂರ್ಣ ಘಟನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಬಳಿಕವೇ ವಾಸ್ತವ ಪರಿಸ್ಥಿತಿ ಏನೆಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿರುವ ಅವರು, ಈ ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಖಚಿತಪಡಿಸಿದ್ದಾರೆ.

ಟಿಎಂಸಿ ಆರೋಪವೇನು..?

ಮಮತಾ ಬ್ಯಾನರ್ಜಿ ಮೇಲೆ ದಾಳಿ ಮಾಡಲು ಯತ್ನಿಸಲಾಗಿದೆ ಎಂದು ಟಿಎಂಸಿ ಕಾರ್ಯಕರ್ತರು ಆರೋಪಿಸುತ್ತಿದ್ದು, ದೂರಿನ ಪ್ರಕಾರ, ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ವರದಿಯಾಗಿದೆ. ಆ ಮಹಿಳೆಯನ್ನು ತನಿಷ್ಠಾ ಸಾಹಾ ಎನ್ನಲಾಗಿದ್ದು, ನಾಗರಿಕ ಸ್ವಯಂಸೇವಕಿಯಾಗಿದ್ದ ಅವಳು ಮಾದಕ ದ್ರವ್ಯದ ವ್ಯಸನಿಯಾಗಿದ್ದಳು ಎಂದು ದೂರಿದ್ದಾರೆ.

ಘಟನೆಯ ಕುರಿತು ರಾಜ್ಯಸಭಾ ಸಂಸದೆ ಡೋಲಾ ಸೇನ್ ಅವರು ಗಂಭೀರ ಆರೋಪಗಳನ್ನು ಮಾಡಿದ್ದು, ಚಾಕುವಿನೊಂದಿಗೆ ಸಜ್ಜಾಗಿದ್ದ ಮಹಿಳೆಯೊಬ್ಬರು ಮಾಜಿ ಮುಖ್ಯಮಂತ್ರಿ ಮೇಲೆ ದಾಳಿ ಮಾಡಲು ಯತ್ನಿಸಿದ್ದಾರೆ ಎಂದು ತಿಳಿಸಿದ್ದಾರೆ. ಆ ಮಹಿಳೆ ತಾನೊಬ್ಬ ಸಿವಿಕ್ ಪೊಲೀಸ್ ಸ್ವಯಂಸೇವಕಿ ಎಂದು ಹೇಳಿಕೊಂಡಿದ್ದಳು ಎಂದು ಅವರು ವಿವರಿಸಿದ್ದಾರೆ. ತನಿಷ್ಠಾ ಸಾಹಾ ಎಂದು ಗುರುತಿಸಲಾದ ಆ ಮಹಿಳೆ ಡ್ರಗ್ ಅಡಿಕ್ಟ್ (ಮಾದಕ ದ್ರವ್ಯ ವ್ಯಸನಿ) ಆಗಿದ್ದು, ಅಷ್ಟೇ ಅಲ್ಲದೆ ತಾನು ಮಮತಾ ಅವರ ಸೊಸೆ ಅಥವಾ ಹತ್ತಿರದ ಸಂಬಂಧಿ ಎಂದು ಹೇಳಿಕೊಂಡಿದ್ದಾಳೆ ಎಂದು ಡೋಲಾ ಸೇನ್ ದೂರಿದ್ದಾರೆ.

ಮುಂದುವರೆದು ಮಾತನಾಡಿದ ಸಂಸದೆ ಡೋಲಾ ಸೇನ್, ಆಕೆ ಮಮತಾ ಬ್ಯಾನರ್ಜಿ ಅವರ ಮನೆಯ ಪ್ರವೇಶದ್ವಾರದಲ್ಲಿ ನಿಂತು ಅವಾಚ್ಯ ಶಬ್ದಗಳಲ್ಲಿ ಬೈಯ್ಯುತ್ತಿದ್ದಳು ಮತ್ತು ರಸ್ತೆಯ ಮೇಲೂ ಮಲಗಿಕೊಂಡಿದ್ದಳು ಎಂದು ತಿಳಿಸಿದ್ದಾರೆ. ಕಾಳಘಾಟ್ ನಿವಾಸದ ಸಮೀಪವಿರುವ ಮಿಲನ್ ಸಂಘದಲ್ಲಿ ದುರ್ಗಾ ಪೂಜೆಯನ್ನು ಉದ್ಘಾಟಿಸಲು ತೆರಳುತ್ತಿದ್ದಾಗ ಮಮತಾ ಬ್ಯಾನರ್ಜಿ ಅವರ ಮೇಲೆ ಆ ಮಹಿಳೆ ಚಾಕುವಿನಿಂದ ದಾಳಿ ಮಾಡಲು ಯತ್ನಿಸಿದ್ದಾಳೆ. ಝಡ್-ಪ್ಲಸ್ ಭದ್ರತಾ ರಕ್ಷಣೆ ಹೊಂದಿರುವ ಮಾಜಿ ಮುಖ್ಯಮಂತ್ರಿಯವರ ಭದ್ರತಾ ವ್ಯವಸ್ಥೆಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸುತ್ತಾ, ಆ ಮಹಿಳೆ ಮಮತಾ ಅವರ ಬಳಿಗೆ ಅತ್ಯಂತ ಆಕ್ರಮಣಕಾರಿ ರೀತಿಯಲ್ಲಿ ಬಂದಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.(ಏಜೆನ್ಸೀಸ್).