ದೆಹಲಿ ಹಿಂಸಾಚಾರ ಹಾಗೂ ದೆಹಲಿ ಹೈಕೋರ್ಟ್​ ಚಿತ್ರ 
ದೇಶ

ದೆಹಲಿ ಹಿಂಸಾಚಾರ ಪ್ರಕರಣಕ್ಕೆ SIT ತನಿಖೆ ಇಲ್ಲ: ರಾಜಕೀಯ ನಾಯಕರ ವಿರುದ್ಧದ ಮನವಿ ತಿರಸ್ಕಾರ; ಅರ್ಜಿ ವಜಾ ಮಾಡಿ ಹೈಕೋರ್ಟ್​ ಆದೇಶ! Delhi High Court

ದೆಹಲಿ ಹಿಂಸಾಚಾರ ಪ್ರಕರಣಕ್ಕೆ SIT ತನಿಖೆ ಇಲ್ಲ ಮತ್ತು ರಾಜಕೀಯ ನಾಯಕರ ವಿರುದ್ಧದ ಮನವಿ ವಜಾಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಸಂಪೂರ್ಣ ವಿವರ ಇಲ್ಲಿದೆ.

ನವದೆಹಲಿ: 2019 ರಲ್ಲಿ ಸಿಎಎ, ಎನ್​ಆರ್​​ಸಿ ಕಾನೂನನ್ನು ವಿರೋಧಿಸಿ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ನಡೆದಿದ್ದ ಹಿಂಸಾಚಾರದ ಕುರಿತು ವಿಶೇಷ ತನಿಖಾ ತಂಡ (SIT) ವನ್ನು ರಚಿಸಿ ನೂತನ ತನಿಖೆ ನಡೆಸುವಂತೆ ಕೋರಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್​ ಸೋಮವಾರ (ಅ.5) ವಜಾ ಮಾಡಿ ಆದೇಶಿಸಿದೆ.

ಈ ಅರ್ಜಿ ವಿಚಾರಣೆ ಮಾಡಿದ ನ್ಯಾಯಮೂರ್ತಿ ವಿವೇಕ್ ಚೌಧರಿ ಮತ್ತು ನ್ಯಾಯಮೂರ್ತಿ ಮನೋಜ್ ಜೈನ್ ಅವರ ನ್ಯಾಯಪೀಠ, ಸಲ್ಲಿಸಲಾದ ಅರ್ಜಿಯಲ್ಲಿ ಎರಡು ಭಾಗ ಮಾಡಲಾದೆ, ಒಂದರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದ ಉಲ್ಲೇಖವಿದ್ದರೆ, ಇನ್ನೊಂದರಲ್ಲಿ ಕೇವಲ ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ನಡೆದ ಗಲಭೆ ಬಗ್ಗೆ ನಮೂದಿಸಲಾಗಿದೆ ಎಂದು ಹೇಳಿ ಎಲ್ಲಾ ಅರ್ಜಿಗಳನ್ನು ವಜಾ ಮಾಡಲಾಗಿದೆ ಎಂದು ನ್ಯಾಯಪೀಠ ಆದೇಶಿಸಿದ್ದು, ಸಂಪೂರ್ಣ ಆದೇಶ ಪ್ರತಿ ಕೆಲ ಸಮಯದಲ್ಲಿ ಹೊರ ಬೀಳಲಿದೆ.

ರಾಜಕಾರಣಿಗಳ ಮೇಲಿನ ಪ್ರಕರಣಕ್ಕೂ ಕೊಕ್​!

ಪ್ರತ್ಯೇಕ ಎಸ್​ಐಟಿ ತನಿಖೆ ಸೇರಿದಂತೆ, ಬಿಜೆಪಿ ಕಾಂಗ್ರೆಸ್​, ಸೇರಿದಂತೆ ವಿವಿಧ ರಾಜಕೀಯ ಪಕ್ಷದ ನಾಯಕರು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರಿಂದ ಇಷ್ಟೊಂದು ಹಿಂಸಾಚಾರವಾಗಿದೆ, ಇವರೆಲ್ಲರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಸಲ್ಲಿಕೆಯಾಗಿದ್ದ ಸುಮಾರು 15 ಅರ್ಜಿಗಳನ್ನು ದೆಹಲಿ ಹೈಕೋರ್ಟ್​ ವಜಾ ಮಾಡಿ ಆದೇಶಿಸಿದೆ.

ಬಿಜೆಪಿ ಸಂಸದ ಅನುರಾಗ್​ ಸಿಂಗ್​ ಠಾಕೂರ್​, ಪರವೇಶ್​ ವರ್ಮಾ ಕಪಿಲ್​ ಮಿಶ್ರಾ, ಕಾಂಗ್ರೆಸ್​ನ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಆಮ್​ ಆದ್ಮಿ ಪಕ್ಷದ ಮನೀಶ್​ ಸಿಸೋಡಿಯಾ, ಅಮಾನುತುಲ್ಲಾ ಖಾನ್​, AIMIM ಪಕ್ಷದ ಅಸಾದುದ್ದೀನ್​ ಓವೈಸಿ ಹಾಗೂ ವಾರಿಸ್​ ಪಠಾಣ್​ ಮತ್ತು ಸಿಪಿಎಂ ಪಕ್ಷದ ಬೃಂದಾ ಕರತ್​ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ನ್ಯಾಯಪೀಠ ವಜಾಗೊಳಿಸಿದೆ.

ಅರ್ಜಿ ಸಲ್ಲಿಕೆಯಾದ ಜನಪ್ರತಿನಿಧಿಗಳು, ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದ ಪ್ರದೇಶಗಳಿಗೆ ಭೇಟಿ ನೀಡಿ, ಪ್ರಚೋದನಾಕಾರಿ ಭಾಷಣ ಮಾಡಿ, ಉಭಯ ಕೋಮುಗಳ ನಡುವೆ ದ್ವೇಷ ಹೆಚ್ಚಾಗುವಂತೆ ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.

2019-20 ರಲ್ಲಿ ದೆಹಲಿಯಲ್ಲಿ ಏನಾಗಿತ್ತು?

2019-20 ರ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಸಿಎಎ, ಎನ್​ಆರ್​ಸಿ ನೀತಿಗೆ ಅಲ್ಪಸಂಖ್ಯಾತರು ಅಧಿಕ ಸಂಖ್ಯೆಯಲ್ಲಿರುವ ದೆಹಲಿಯ ಕೆಲ ಭಾಗಗಲ್ಲಿ ಭಾರಿ ಪ್ರತಿಭಟನೆ ಪ್ರಾರಂಭವಾಯಿತು. ಈ ಪ್ರತಿಭಟನೆ, ಹಿಂಸಾಚಾರದ ರೂಪ ಪಡೆದುಕೊಂಡು ಸುಮಾರು 50 ಕ್ಕೂ ಹೆಚ್ಚಿನ ಜನ ಪ್ರಾಣಕಳೆದುಕೊಂಡರೆ 700 ಕ್ಕೂ ಅಧಿಕ ಜನ ಗಾಯಗೊಂಡಿದ್ದರು. ನಂತರ ಕೆಲ ಹೋರಾಟಗಾರರು ಈ ಘಟನೆ ಕುರಿತಂತೆ ರಾಜ್ಯ ಸರ್ಕಾರ ನಡೆಸಿದ್ದ ತನಿಖೆ ಬಗ್ಗೆ ಅಸಮಾಧಾನ ಹೊರಹಾಕಕಿ ಹೈಕೋರ್ಟ್​ ಮೆಟ್ಟಿಲೇರಿದ್ದರು, (ಏಜೆನ್ಸೀಸ್​).