ಯಾವುದೇ ಬುಡಕಟ್ಟು ಜನರನ್ನು ಸ್ಥಳಾಂತರಿಸುತ್ತಿಲ್ಲ: ಎಲ್‌ಜಿ ಡಿ.ಕೆ. ಜೋಶಿ ಸ್ಪಷ್ಟನೆ
- ಟ್ ನಿಕೋಬಾರ್ ದ್ವೀಪದಲ್ಲಿ 81,000 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗೆ ರಾಹುಲ್ ಗಾಂಧಿ ವಿರೋಧ
- ಬುಡಕಟ್ಟು ಜನಾಂಗ ಮತ್ತು ಅರಣ್ಯ ನಾಶದ ಆರೋಪ
- ಯಾವುದೇ ಬುಡಕಟ್ಟು ಜನರನ್ನು ಸ್ಥಳಾಂತರಿಸುತ್ತಿಲ್ಲ: ಎಲ್‌ಜಿ ಡಿ.ಕೆ. ಜೋಶಿ ಸ್ಪಷ್ಟನೆ
ನಿಕೋಬಾರ್: ಗ್ರೇಟ್ ನಿಕೋಬಾರ್ ದ್ವೀಪದಲ್ಲಿ ಕೇಂದ್ರ ಸರ್ಕಾರ ನಾನಾ ಅಭಿವೃದ್ಧಿ ಯೋಜನೆಗಳನ್ನು(Great Nicobar Project) ಪ್ರಾರಂಭಿಸಲು ಮುಂದಾಗಿದ್ದು, ಇದಕ್ಕೆ ವಿರೋಧ ಪಕ್ಷಗಳಿಂದ ತೀವ್ರ ಪ್ರತಿಕ್ರಿಯೆ ದೊರೆಯುತ್ತಿದೆ.
ಆದರೆ ಇತ್ತೀಚೆಗೆ ಈ ಕುರಿತು ಮಾತನಾಡಿರುವ ಅಂಡಮಾನ್- ನಿಕೋಬಾರ್ನ ಲೆಫ್ಟಿನೆಂಟ್ ಗಮರ್ನರ್, ಅಡ್ಮಿರಲ್ ಡಿ.ಕೆ. ಜೋಶಿ, ನಿಕೋಬಾರ್ ದ್ವೀಪಗಳಲ್ಲಿ ಮಾಡ ಹೊರಟಿರುವ ಯೋಜನೆಗಳ ಬಗ್ಗೆ ವಿರೋಧ ಪಕ್ಷಗಳಿಗೆ ಮಾಹಿತಿ ಕೊರತೆಯಿದೆ, ಇದರಿಂದ ಯಾವುದೇ ಬುಡಕಟ್ಟು ಜನರಿಗೆ ತೊಂದರೆಯಾಗುವುದಿಲ್ಲ ಎಂದು ಜೋಶಿ ಸ್ಪಷ್ಟ ಪಡಿಸಿದ್ದಾರೆ.
ಯೋಜನೆಯಿಂದ ಬುಡಕಟ್ಟಿನವರಿಗೆ ತೊಂದರೆಯಿಲ್ಲ!
ಗ್ರೇಟ್ ನಿಕೋಬಾರ್ ದ್ವೀಪದಲ್ಲಿ ನಡೆಯಲಿರುವ ಯೋಜನೆ ಬಗ್ಗೆ ಮಾತನಾಡಿರುವ ನಿವೃತ್ತ ನೌಕಾಪಡೆ ಮುಖ್ಯಸ್ಥ ಹಾಗೂ ಅಂಡಮಾನ್- ನಿಕೋಬಾರ್ನ ಲೆಫ್ಟಿನೆಂಟ್ ಗಮರ್ನರ್, ಅಡ್ಮಿರಲ್ ಡಿ.ಕೆ. ಜೋಶಿ, ಈ ಯೋಜನೆಗೆ ಪರಿಸರ ಸಂರಕ್ಷಣಾ ಸಮಿತಿಯಿಂದ ಶಾಸನಬದ್ಧ ಅನುಮತಿ ಪಡೆದಿದ್ದೆವೆ. ಇಲ್ಲಿ ನಡೆಯಲಿರುವ ಅಭಿವೃದ್ಧಿ ಯೋಜನೆಗಳು ಭವಿಷ್ಯದಲ್ಲಿ ಭಾರತ ಶಕ್ತಿಶಾಲಿಯಾಗಿ ರೂಪುಗೊಳ್ಳುವುದರಲ್ಲಿ ಬಹಳ ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಿದ್ದಾರೆ.
ಹಾಗೂ ಈ ಯೋಜನೆಗಳು ಶತಮಾನಗಳಿಂದ ದ್ವೀಪಗಳಲ್ಲಿ ವಾಸಿಸುತ್ತಿರುವ ಸ್ಥಳೀಯ ಬುಡಕಟ್ಟು ಜನಾಂಗದವರಿಗೆ ಯಾವುದೇ ರೀತಿಯ ತೊಂದರೆ ನೀಡುವುದಿಲ್ಲ. ಹಾಗೆಯೇ ಯಾವುದೇ ಬುಡಕಟ್ಟಿನ ಜನರನ್ನು ದ್ವೀಪದಿಂದ ಸ್ಥಳಾಂತರ ಮಾಡಲಾಗುತ್ತಿಲ್ಲ ಎಂದು ಹೇಳಿದ್ದಾರೆ.
81 ಸಾವಿರ ಕೋಟಿ ಹೂಡಿಕೆ!
ಕೇಂದ್ರ ಸರ್ಕಾರವು ಗ್ರೇಟ್ ನಿಕೋಬಾರ್ ದ್ವೀಪದಲ್ಲಿ ಗ್ರೀನ್ಫೀಲ್ಡ್ ಏರ್ಪೋರ್ಟ್, ಟ್ರಾನ್ಸ್‌ಶಿಪ್‌ಮೆಂಟ್ ಬಂದರು, ವಿದ್ಯುತ್ ಮೂಲಸೌಕರ್ಯ ಮತ್ತು ಪಟ್ಟಣ ಅಭಿವೃದ್ಧಿ ಮೊದಲಾದವುಗಳನ್ನು ನಿರ್ಮಿಸುವ ಸಲುವಾಗಿ ಸುಮಾರು 81,000 ಕೋಟಿ ಹೂಡಿಕೆ ಮಾಡಲು ಮುಂದಾಗಿದೆ.
ಇದು ಕೇವಲ ಪ್ರವಾಸೋದ್ಯಮ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಮಾತ್ರವಲ್ಲ, ಗ್ರೇಟ್ ನಿಕೋಬಾರ್ ದ್ವೀಪ ಜಾಗತಿಕ ಭೂಗೋಳದಲ್ಲಿ ಅತ್ಯಂತ ಮಹತ್ವದ ಪ್ರದೇಶವಾಗಿದ್ದು, ಇಲ್ಲಿ ಭಾರತದ ಹಿಡಿತದ ಪ್ರದರ್ಶನ ಅಗತ್ಯವಾಗಿದೆ ಎಂದು ಅಡ್ಮಿರಲ್ ಜೋಶಿ ಹೇಳಿದ್ದಾರೆ.
ಪರಿಸರಕ್ಕೆ ಯಾವುದೇ ಹಾನಿಯಿಲ್ಲ!
ಈ ಅಭಿವೃದ್ಧಿ ಯೋಜನೆಯಿಂದ ನಿಕೋಬಾರ್ ದ್ವೀಪಗಳನ್ನು ನಾಶಮಾಡಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಜೋಶಿ, ನಿಕೋಬಾರ್ ಶೇ. 94 ರಷ್ಟು ಅರಣ್ಯ ಪ್ರದೇಶದಿಂದ ಕೂಡಿದೆ. ಆದರೆ ನಾವು ಈ ಅಭಿವೃದ್ಧಿ ಯೋಜನೆಗೆ ಕೇವಲ ಶೇ.1.8 ಅರಣ್ಯವನ್ನು ಮಾತ್ರ ಉಪಯೋಗಿಸಿ ಕೊಳ್ಳುತ್ತಿದ್ದವೆ ಎಂದಿದ್ದಾರೆ.
ಗ್ರೇಟ್ ನಿಕೋಬಾರ್ ದ್ವೀಪವನ್ನು ಅಭಿವೃದ್ಧಿ ಪಡಿಸಲು ಇದೇ ಸರಿಯಾದ ಸಮಯವಾಗಿದ್ದು, ಜಾಗತಿಕನ ರಾಜಕಾರಣದಲ್ಲಿ ಭಾರತದ ಸ್ಥಾನ ಗಟ್ಟಿಯಾಗ ಬೇಕಾದರೆ ಈಗ ತಕ್ಷಣದ ಕ್ರಮ ಅಗತ್ಯ ಎಂದು ಅವರು ಹೇಳಿದ್ದಾರೆ, (ಏಜನ್ಸೀಸ್).