- ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೆಲಸ ಮತ್ತು ಜೀವನದ ಸಮತೋಲನ ಎಂಬುದು ಕೇವಲ ಮಾತಿಗೆ ಮಾತ್ರ ಸೀಮಿತವಾಗಿದೆ
- ನಾನು ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಜೊತೆಗೆ ಉತ್ತಮವಾದ ಸಂಬಳವನ್ನು ಪಡೆಯುತ್ತಿದ್ದೇನೆ.
- ಈ ಯಶಸ್ಸಿನ ನಡುವೆ ನಾನು ಕಳೆದುಕೊಳ್ಳುತ್ತಿರುವ ನೆಮ್ಮದಿಯ ಬೆಲೆ ಎಷ್ಟು ಗೊತ್ತಾ: ಉದ್ಯೋಗಿ ನಂದಿನಿ ಶರ್ಮಾ
ನವದೆಹಲಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೆಲಸ ಮತ್ತು ಜೀವನದ ಸಮತೋಲನ ಎಂಬುದು ಕೇವಲ ಮಾತಿಗೆ ಮಾತ್ರ ಸೀಮಿತ ಎಂದು ಹೇಳುತ್ತಿರುವ ಸಮಯದಲ್ಲಿ, ಮೈಕ್ರೋಸಾಫ್ಟ್ (Microsoft employee) 'ಕಂಪನಿಯ 26 ವರ್ಷದ ಉದ್ಯೋಗಿಯೊಬ್ಬರು ಹಂಚಿಕೊಂಡ ಪೋಸ್ಟ್ ಭಾರತದ ಯುವ ವೃತ್ತಿಪರರ ಗಮನ ಸೆಳೆದಿದೆ. ವೃತ್ತಿ ಜೀವನದ ಆರಂಭಿಕ ಹಂತದಲ್ಲಿದ್ದ ಸಾವಿರಾರು ಯುವಕರು ಈ ಪೋಸ್ಟ್ ಹಂಚಿಕೊಳ್ಳುತ್ತಿದ್ದು, ಕಾರ್ಪೋರೇಟ್ ಜಗತ್ತಿನ ವಾಸ್ತವಗಳ ಬಗ್ಗೆ ಚರ್ಚೆ ಆರಂಭವಾಗಿದೆ.
ಪೋಸ್ಟ್‌ನಲ್ಲೇನಿದೆ?
ಮೈಕ್ರೋಸಾಫ್ಟ್‌ನಲ್ಲಿ ಕೆಲಸ ಮಾಡುವ ನಂದಿನಿ ಶರ್ಮಾ ಎಂದು ಗುರುತಿಸಲ್ಪಟ್ಟ ಉದ್ಯೋಗಿಯು, ತಾನು ಗಳಿಸುತ್ತಿರುವ ಸಂಬಳ, ಕಂಪನಿಯ ಕೆಲಸದ ಸಂಸ್ಕೃತಿ ಮತ್ತು ತನ್ನ ದೈನಂದಿನ ಜೀವನದ ಬಗ್ಗೆ ಮುಕ್ತವಾಗಿ ಬರೆದುಕೊಂಡಿದ್ದಾರೆ. ನಾನು ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಜೊತೆಗೆ ಉತ್ತಮವಾದ ಸಂಬಳವನ್ನು ಪಡೆಯುತ್ತಿದ್ದೇನೆ. ಆದರೆ, ಈ ಯಶಸ್ಸಿನ ನಡುವೆ ನಾನು ಕಳೆದುಕೊಳ್ಳುತ್ತಿರುವ ನೆಮ್ಮದಿಯ ಬೆಲೆ ಎಷ್ಟು ಗೊತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.
ವಿಶೇಷವಾಗಿ, ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ಶ್ರಮವು ಕಾಲಾನಂತರದಲ್ಲಿ ಸಂಯೋಜನೆಗೊಳ್ಳುತ್ತದೆ. ಹೆಚ್ಚಿನ ಜನರು ಹಣದ ಸಂಯೋಜನೆಯ ಬಗ್ಗೆ ಮಾತನಾಡುತ್ತಾರೆ. ಆದರೆ, ಸ್ಥಿರವಾದ ಪ್ರಯತ್ನ ಮತ್ತು ಸ್ಥಿರತೆಯು ದೀರ್ಘಾವಧಿಯ ಯಶಸ್ಸನ್ನು ರೂಪಿಸುವಲ್ಲಿ ಮಾತ್ರ ಪ್ರಯೋಜನವಾಗಿದೆ ಎಂದು ಹೇಳಿದರು.
ಇಪ್ಪತ್ತರ ದಶಕದ ಆರಂಭವನ್ನು ಅನುಕೂಲ ಎಂದು ವಿವರಿಸಿದ ಅವರು, ಅನೇಕ ಯುವಕರು ಈ ಹಂತದಲ್ಲಿ ವಿಶ್ರಾಂತಿ ಅಥವಾ ಮನರಂಜನೆಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ತಮ್ಮ ಕೌಶಲ್ಯವನ್ನು ಮುಂದೂಡುತ್ತಾರೆ. ಆದರೆ, ಇದು ತಪ್ಪು. ಹಾಗಾಗಿ ಕೆಲಸ ಮತ್ತು ಕುಟುಂಬದ ಒತ್ತಡಗಳು ಹೆಚ್ಚಾಗುವ ಮೊದಲು ನಿಮ್ಮನ್ನು ನೀವು ಬಲಿಷ್ಠಗೊಳಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಒಮ್ಮೆ ವಯಸ್ಸಾದಂತೆ ಮತ್ತು ಜವಾಬ್ದಾರಿಗಳು ಹೆಗಲೇರಿದಾಗ ಹೊಸದನ್ನು ಕಲಿಯಲು ಮತ್ತು ಶ್ರಮವಹಿಸಲು ಬೇಕಾದ ಮಾನಸಿಕ ನೆಮ್ಮದಿ ಸಿಗುವುದಿಲ್ಲ. ಇದು ಅನಿವಾರ್ಯವಾಗಿ ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ ಎಂದಿದ್ದಾರೆ.
ನಿಮ್ಮ ಯಶಸ್ಸಿಗೆ ನೀವೇ ಶಿಲ್ಪಿ
ಆದಾಗ್ಯೂ, ಅವರ ಪೋಸ್ಟ್ನಲ್ಲಿರುವ ಮತ್ತೊಂದು ಪ್ರಮುಖ ಸಂದೇಶವೆಂದರೆ, ಯಾರೂ ನಿಮ್ಮನ್ನು ಉಳಿಸಲು ಬರುವುದಿಲ್ಲ. ಅಂದರೆ, ಕಂಪನಿಯು ಸಂಕಷ್ಟಕ್ಕೆ ಸಿಲುಕಿದಾಗ ಅಥವಾ ಲೇ-ಆಫ್ ಸಂಭವಿಸಿದಾಗ ನಿಮ್ಮ ಕಂಪನಿಯ ಬ್ರ್ಯಾಂಡ್ ಹೆಸರು ನಿಮ್ಮನ್ನು ಕಾಪಾಡುವುದಿಲ್ಲ. ಬದಲಾಗಿ, ನೀವು ಅಂದು ಗಳಿಸಿಕೊಂಡ ಕೌಶಲ್ಯ ಮತ್ತು ನೀವು ಬೆಳೆಸಿಕೊಂಡ ವೈಯಕ್ತಿಕ ಬ್ರ್ಯಾಂಡ್ ಮಾತ್ರ ನಿಮ್ಮನ್ನು ರಕ್ಷಿಸುತ್ತದೆ ಎಂದಿದ್ದಾರೆ.
ಉದ್ಯಮದ ಮೇಲೆ ಇದರ ಪ್ರಭಾವ
ಈ ವೈರಲ್ ಪೋಸ್ಟ್ ಕೇವಲ ವೈಯಕ್ತಿಕ ಅನಿಸಿಕೆಯಾಗಿ ಉಳಿದಿಲ್ಲ. ಇದು ಕಂಪನಿಗಳು ತಮ್ಮ ಉದ್ಯೋಗಿಗಳ ಮಾನಸಿಕ ಆರೋಗ್ಯದ ಮೇಲೆ ಒತ್ತಡವನ್ನು ಹೇರುತ್ತಿವೆ. ಮೈಕ್ರೋಸಾಫ್ಟ್‌ನಂತಹ ದೈತ್ಯ ಕಂಪನಿಗಳು ಈಗಾಗಲೇ ಉದ್ಯೋಗಿಗಳ ಕ್ಷೇಮಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ, ಕೆಲಸದ ಆಳದಲ್ಲಿ ಒತ್ತಡ ಇನ್ನೂ ಕಡಿಮೆಯಾಗಿಲ್ಲ ಎಂಬುದನ್ನು ಅದು ಸಾಬೀತುಪಡಿಸಿದೆ (ಏಜೆನ್ಸೀಸ್).