ಸನಾತನವನ್ನು ಯಾರು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ: ಅರ್ಜುನ್​ ಸರ್ಜಾ ಕೌಂಟರ್​ 
ದೇಶ

ಸನಾತನ ಧರ್ಮವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ: ಉದಯನಿಧಿಗೆ ಆ್ಯಕ್ಷನ್ ಕಿಂಗ್ ಅರ್ಜುನ್​ ಸರ್ಜಾ ಕೌಂಟರ್​! Arjun Sarja on Udhayanidhi Stalin

ಪ್ರಮುಖ ಮುಖ್ಯಾಂಶಗಳು

  • ಸನಾತನ ಧರ್ಮದ ವಿರುದ್ದ ನಾಲಿಗೆ ಹರಿಬಿಟ್ಟಿದ್ದ ಉದಯನಿಧಿ ಸ್ಟಾಲಿನ್​
  • ಸನಾತನವನ್ನು ನಿರ್ಮೂಲನೆ ಮಾಡುವುದಾಗಿ ಹೇಳಿದ್ದ ಡಿಎಂಕೆ ಶಾಸಕ
  • ಸನಾತನವನ್ನು ಯಾರು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ: ಅರ್ಜುನ್​ ಸರ್ಜಾ ಕೌಂಟರ್​
ತಮಿಳುನಾಡು: ಕೆಲ ದಿನಗಳ ಹಿಂದೆ ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷ ನಾಯಕ ಉದಯನಿಧಿ ಸ್ಟಾಲಿನ್​ ಸನಾತನ ಧರ್ಮದ ಕುರಿತು ವಿವಾದತ್ಮಕ ಹೇಳಿಕೆ ನೀಡಿದ್ದು, ಇದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು.
ಈಗ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಹುಭಾಷಾ ನಟ ಅರ್ಜುನ್​ ಸರ್ಜಾ (Arjun Sarja on Udhayanidhi Stalin), ಸನಾತನ ಧರ್ಮ ತಂದೆ-ತಾಯಿಯರನ್ನು ಹೇಗೆ ನೋಡಿಕೊಳ್ಳಬೇಕೆಂದು ಕಲಿಸಿಕೊಡುತ್ತದೆ, ಹಾಗಾದರೆ ನೀವು ನಿಮ್ಮ ಹೆತ್ತವರನ್ನು ಮನೆಯಿಂದ ಹೊರಹಾಕುತ್ತಿರಾ? ಎಂದು ಸರ್ಜಾ, ಸ್ಟಾಲಿನ್​ ಅವರ ಕಾಲೆಳೆದಿದ್ದಾರೆ.

ಸನಾತನವನ್ನು ಅಳಿಸಲು ಸಾಧ್ಯವಿಲ್ಲ!

ಉದಯನಿಧಿ ಸನಾತನ ವಿರೋಧಿ ಹೇಳಿಕೆಗೆ ಅರ್ಜುನ್​ ಸರ್ಜಾ, ಸನಾತನ ಧರ್ಮ ಮನುಷ್ಯರು ಹೇಗೆ ಬದುಕನ್ನು ನಡೆಸಬೇಕೆಂದು ತಿಳಿಸುತ್ತದೆ, ಮಾತಾ-ಪಿತರನ್ನು ದೇವರಂತೆ ಕಾಣಬೇಕೆಂದು ಹೇಳಿಕೊಡುತ್ತದೆ.
ವಯಸ್ಸಾದ ತಂದೆ-ತಾಯಿಯರನ್ನು ಪ್ರೀತಿಯಿಂದ ಕಾಣಬೇಕೆಂದು ಸನಾತನ ಧರ್ಮ ಕಲಿಸುತ್ತದೆ. ನೀವು ಸನಾತನ ಧರ್ಮವನ್ನು ಒಪ್ಪುದಿಲ್ಲ ಎಂದಾದರೆ ವಯಸ್ಸಾದ ನಿಮ್ಮ ಅಪ್ಪ-ಅಮ್ಮನನ್ನು ಮನೆಯಿಂದ ಆಚೆ ಹಾಕುತ್ತಿರಾ? ಇಲ್ಲ ಅಲ್ಲವೆ. ಹಾಗೆಯೇ ಸನಾತನ ಧರ್ಮವನ್ನು ಕೊನೆಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅರ್ಜುನ್​ ಸರ್ಜಾ ಹೇಳಿದ್ದಾರೆ.

ಸನಾತನದ ವಿರುದ್ಧ ನಾಲಿಗೆ ಹರಿಬಿಟ್ಟ ಉದಯನಿಧಿ!

ಮಂಗಳವಾರ (ಮೇ.12) ತಮಿಳುನಾಡು ಅಸೆಂಬ್ಲಿಯಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್​, ಸನಾತನ ಧರ್ಮ ಇದು ಜನರನ್ನು ಒಡೆದು ಆಳುತ್ತದೆ, ಹೀಗಾಗಿ ಇದನ್ನು ನಿರ್ಮೂಲನೆ ಮಾಡಬೇಕೆಂದು ಹೇಳಿಕೆ ನೀಡಿದ್ದಾರೆ.
ನಿನ್ನೆ ರಾಜ್ಯದ ಮುಖ್ಯಮಂತ್ರಿಯಾಗಿ ವಿಜಯ್​ ಅಧಿಕಾರ ಸ್ವೀಕರಿಸಿದ್ದಾರೆ, ಅವರಿಗೆ ದೇಶದ ವಿವಿಧ ರಾಜ್ಯದ ನಾಯಕರು ಶುಭ ಹಾರೈಸಿದ್ದಾರೆ. ನಾನು ಸಹ ಅವರಿಗೆ ಶುಭ ಕೋರುತ್ತೇನೆ. ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷ ಇಬ್ಬರು ಸೇರಿ ತಮಿಳುನಾಡಿನ ಅಭಿವೃದ್ಧಿಗಾಗಿ ಕೆಲಸ ಮಾಡೋಣ ಎಂದು ಹೇಳಿದ್ದರು, (ಏಜನ್ಸೀಸ್​).