ಶ್ರೀಧರ್ ಚಿಲ್ಲಾಲ್  
ದೇಶ

66 ವರ್ಷ ಉಗುರು ಕತ್ತರಿಸಲೇ ಇಲ್ಲ; 29 ಅಡಿ ಉದ್ದ ಬೆಳೆಸಿ ಗಿನ್ನೆಸ್ ದಾಖಲೆ! | 29-Foot Nails: Guinness Record

ಪ್ರಮುಖ ಮುಖ್ಯಾಂಶಗಳು

  • 66 ವರ್ಷ ಉಗುರು ಬೆಳೆಸಿ ಗಿನ್ನೆಸ್ ರೆಕಾರ್ಡ್​​
  • 5 ಉಗುರುಗಳ ಒಟ್ಟು ಉದ್ದ 29 ಅಡಿ 10 ಇಂಚು
  • ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಭಾರತೀಯನ ಹೆಸರು
ಮಹಾರಾಷ್ಟ್ರ: ಜನರು ಯಾವ್ಯಾವ ವಿಷಯದಲ್ಲಿ ಗಿನ್ನೆಸ್ ರೆಕಾರ್ಡ್​​ ಮಾಡುತ್ತಾರೆ ಎನ್ನುವುದೇ ಅಚ್ಚರಿ. ಉಗುರು ಬೆಳೆದ ಬಳಿಕ ಕತ್ತರಿಸುವುದು, ಮತ್ತೆ ಅದು ಬೆಳೆಯುವುದು ಸಾಮಾನ್ಯ. ಆದರೆ ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ 66 ವರ್ಷಗಳ ಕಾಲ ಎಡಗೈಯ ಉಗುರುಗಳ ಕತ್ತರಿಸದೆ, ಸುಮಾರು 29 ಅಡಿ ಉದ್ದಕ್ಕೆ ಬೆಳೆಸಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಮಹಾರಾಷ್ಟ್ರದ ಪುಣೆಯ ಶ್ರೀಧರ್ ಚಿಲ್ಲಾಲ್ ಅವರು ಎಡಗೈಯ ಐದು ಉಗುರುಗಳನ್ನು ಅಳೆಯಲಾಗಿತ್ತು. ಹೆಬ್ಬೆರಳಿನ ಉಗುರು 197.8 ಸೆಂ.ಮೀ, ಮಧ್ಯದ ಬೆರಳಿನ ಉಗುರು 186.6 ಸೆಂ.ಮೀ, ಉಂಗುರದ ಬೆರಳಿನ ಉಗುರು 181.6 ಸೆಂ.ಮೀ, ಕಿರುಬೆರಳಿನ ಉಗುರು 179.1 ಸೆಂ.ಮೀ ಮತ್ತು ತೋರುಬೆರಳಿನ ಉಗುರು 164.5 ಸೆಂ.ಮೀ ಉದ್ದವಿದ್ದು, ಇದು

ಗಿನ್ನೆಸ್ ರೆಕಾರ್ಡ್ ಸೇರಿದೆ.

16ನೇ ವಯಸ್ಸಿನಲ್ಲಿ ಶುರುವಾದ ವಿಚಿತ್ರ ಪ್ರಯತ್ನ

ಶ್ರೀಧರ್ 1952ರಲ್ಲಿ ತಮ್ಮ 16ನೇ ವಯಸ್ಸಿನಲ್ಲಿ ಉಗುರು ಬೆಳೆಸಲು ಆರಂಭಿಸಿದ್ದರು. ಶಾಲೆಯಲ್ಲಿ ಅವರ ಸ್ನೇಹಿತರೊಬ್ಬ ಶಿಕ್ಷಕರ ಉದ್ದನೆಯ ಉಗುರನ್ನು ಆಕಸ್ಮಿಕವಾಗಿ ಮುರಿದಿದ್ದ. ಆಗ ಶಿಕ್ಷಕರು, ಉದ್ದನೆಯ ಉಗುರುಗಳನ್ನು ಮುರಿಯದಂತೆ ನೋಡಿಕೊಳ್ಳುವುದು ಎಷ್ಟು ಕಷ್ಟ ಅಂತ ನಿನಗೆ ಗೊತ್ತಾ? ಎಂದು ಬೈದಿದ್ದರು. ಶಿಕ್ಷಕರ ಈ ಮಾತು ಶ್ರೀಧರ್ ಮನಸ್ಸಿನಲ್ಲಿ ಆಳವಾಗಿ ನಾಡಿತ್ತು. ಅದೇ ದಿನದಿಂದ ಅವರು ಎಡಗೈಯ ಉಗುರುಗಳನ್ನು ಕತ್ತರಿಸದೆ ಬೆಳೆಸಲು ನಿರ್ಧರಿಸಿದ್ದರು.

ದೈನಂದಿನ ಕೆಲಸವೆ ಸವಾಲು

ಉಗುರುಗಳು ಉದ್ದವಾಗುತ್ತಿದ್ದಂತೆ ದೈನಂದಿನ ಕೆಲಸ ಮಾಡುವುದೇ ಶ್ರೀಧರ್​ಗೆ ದೊಡ್ಡ ಸವಾಲಾಗಿತ್ತು. ಅವರು ಪೋಟೋ ಗ್ರಾಫರ್​ ಆದದ್ದರಿಂದ, ಉದ್ದನೆಯ ಉಗುರುಗಳಿಗೆ ಅನುಕೂಲವಾಗುವಂತೆ ವಿಶೇಷ ಹ್ಯಾಂಡಲ್ ಇರರುವ ಕ್ಯಾಮೆರಾ ಬಳಸುತ್ತಿದ್ದರು. 66 ವರ್ಷಗಳ ಬಳಿಕ ಅವರ ಉಗುರುಗಳು ದಾಖಲೆ ಬರೆದವು. ‘ಒಂದೇ ಕೈಯಲ್ಲಿ ಅತಿ ಉದ್ದದ ಉಗುರುಗಳನ್ನು ಹೊಂದಿದ ವ್ಯಕ್ತಿ’ ಎಂಬ ಗಿನ್ನೆಸ್ ರೆಕಾರ್ಡ್​​ ಶ್ರೀಧರ್ ಚಿಲ್ಲಾಲ್ ಹೆಸರಿನಲ್ಲಿದೆ,(ಏಜೆನ್ಸೀಸ್).