ಎಲೆಕ್ಟ್ರಿಕ್ ಜೀಪ್ ಮೇಲೆ ಕುಳಿತಿರುವ ಮುರ್ಷಿದ್ ಆಲಂ
- ಗ್ಯಾರೇಜ್ ಹುಡುಗನ ಕೈಯಿಂದ ನಿರ್ಮಾಣವಾದ ಎಲೆಕ್ಟ್ರಿಕ್ ಜೀಪ್
- ಒಮ್ಮೆ ಚಾರ್ಜ ಮಾಡಿದರೆ 100 ಕೀ.ಮಿ ಪ್ರಯಾಣ
- ದೇಸಿ ಟೆಸ್ಲಾ ಎಂದ ಸ್ಥಳೀಯರು
ಬಿಹಾರ: ಬಿಹಾರದ ಹುಡುಗನೊಬ್ಬ 18 ದಿನಗಳಲ್ಲಿ ಐದು ಆಸನಗಳ ಎಲೆಕ್ಟ್ರಿಕ್ ಜೀಪ್ (Electric Jeep) ನಿರ್ಮಿಸಿದ್ದು, ಇದನ್ನು ಸ್ಥಳೀಯರು ದೇಸಿ ಟೆಸ್ಲಾ ಎಂದು ಕರೆದಿದ್ದಾರೆ. ಈ ಜೀಪನ್ನು ನಿರ್ಮಿಸಲು ಕೇವಲ 1 ಲಕ್ಷ ರೂ. ವೆಚ್ಚವಾಗಿದ್ದು, ಒಂದು ಚಾರ್ಜ್‌ನಲ್ಲಿ ಸುಮಾರು 100 ಕಿಲೋಮೀಟರ್ ಪ್ರಯಾಣಿಸುವ ಸಾಮರ್ಥ್ಯ ಹೊಂದಿದೆ.
ಯಾವುದೇ ಎಂಜಿನಿಯರಿಂಗ್ ತರಬೇತಿ ಪಡೆಯದ ಮುರ್ಷಿದ್ ಆಲಂ ಈ ಜೀಪಿನ್ನು ನಿರ್ಮಾತನಾಗಿದ್ದಾನೆ. ಮುರ್ಷಿದ್ ಗ್ಯಾರೇಜ್ವೊಂದರಲ್ಲಿ ಕೆಲಸ ಮಾಡುವ ಹುಡುಗನಾಗಿದ್ದು, ತನ್ನ ಊರಿನಲ್ಲಿನ ರೈತರಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ವಾಹನವನ್ನು ನಿರ್ಮಿಸಿದ್ದಾಗಿ ಹೇಳಿದ್ದಾನೆ.
ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳು ದುಬಾರಿ ಮತ್ತು ಹೆಚ್ಚಿನ ನಿರ್ವಹಣೆಯ ಅಗತ್ಯವಿತ್ತು, ಆದರೆ ವಾಣಿಜ್ಯಿಕವಾಗಿ ಲಭ್ಯವಿರುವ ವಿದ್ಯುತ್ ವಾಹನಗಳು ಗ್ರಾಮೀಣ ಪ್ರದೇಶದ ಜನರಿಗೆ ತಲುಪಲು ಸಾಧ್ಯವಾಗಲಿಲ್ಲ. ಆದ್ದರಿಂದ, ಇದು ಹಳ್ಳಿ ಜನರ ಅಗತ್ಯಗಳಿಗೆ ಅನುಗುಣವಾಗಿ ಸ್ವದೇಶಿ ಎಲೆಕ್ಟ್ರಿಕ್ ಜೀಪ್ನ್ನು ತಯಾರಿಸುವ ಕಲ್ಪನೆಯನ್ನು ಹುಟ್ಟುಹಾಕಿತು ಎಂದು ಹೇಳಿದ್ದಾನೆ.
ವಾಹನವು ಟ್ಯೂಬ್‌ಲೆಸ್ ಟೈರ್, ಸ್ಪೀಡೋಮೀಟರ್, ಪವರ್ ಸ್ಟೀರಿಂಗ್ ಮತ್ತು ಚಾರ್ಜಿಂಗ್ ಪಾಯಿಂಟ್‌ನೊಂದಿಗೆ ನಾಲ್ಕು ಚಕ್ರಗಳನ್ನು ಹೊಂದಿದೆ. ಒಂದು ಸಲ ಪೂರ್ಣ ಚಾರ್ಜ್ ಮಾಡಲು ಸುಮಾರು ಐದು ಗಂಟೆಗಳು ಬೇಕಾಗುತ್ತದೆ. ನಂತರ ಜೀಪ್ ಸುಮಾರು 100 ಕಿಲೋಮೀಟರ್ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಬೆಳೆಗಳು, ರಸಗೊಬ್ಬರಗಳು ಮತ್ತು ಇತರ ಸರಕುಗಳನ್ನು ಸಾಗಿಸಲು ಹೆಚ್ಚುವರಿ ಟ್ರಾಲಿಯನ್ನು ಜೋಡಿಸಬಹುದಾಗಿದೆ.
ಭಾರತವು ಡೀಸೆಲ್, ಪೆಟ್ರೋಲ್ ಆಧರಿತ ವಾಹನಗಳಿಂದ ವಿದ್ಯುತ್ ಚಾಲಿತ ವಾಹನಗಳ ಕಡೆ ನಿಧಾನವಾಗಿ ಚಲಿಸುತ್ತಿರುವ ಸಮಯದಲ್ಲಿ ಮುರ್ಷಿದ್ ಅವರ ನೂತನ ಜೀಪ್ನ ಸೃಷ್ಟಿಯಾಗಿದೆ. ಈ ಜೀಪ್ ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬಂದರೆ ಬಹಳ ಉಪಯುಕ್ತ ಎನ್ನುವುದು ಜನರ ಮಾತಾಗಿದೆ,(ಏಜನ್ಸೀಸ್).