ಬಾಂಗ್ಲಾದೇಶ ಪ್ರಧಾನಿ ತಾರಿಕ್ ರೆಹಮಾನ್
Bangladesh: ಬಾಂಗ್ಲಾದೇಶ ಪ್ರಧಾನಿ ತಾರಿಕ್ ರೆಹಮಾನ್ ಮುಂದಿನ ತಿಂಗಳು ನಡೆಯಲಿರುವ ಬ್ರಿಕ್ಸ್ ಶೃಂಗಸಭೆಗಾಗಿ ಭಾರತಕ್ಕೆ ಭೇಟಿ ನೀಡಲಿದ್ದಾರೆಯೇ ಎಂಬ ಗೊಂದಲಗಳ ನಡುವೆ, ಪ್ರಸ್ತಾವಿತ ಭೇಟಿ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಶುಕ್ರವಾರ(ಆ. 21) ಬಾಂಗ್ಲಾ ಪ್ರಧಾನಿ ಕಚೇರಿ ಮಾಹಿತಿ ನೀಡಿದೆ.
ಈ ಕುರಿತು ಮಾಹಿತಿ ನೀಡಿರುವ ಪ್ರಧಾನಿ ತಾರಿಕ್ ರೆಹಮಾನ್ ಅವರ ಪತ್ರಿಕಾ ಕಾರ್ಯದರ್ಶಿ ಎಎಎಂ ಸಲೇಹ್ ಶಿಬ್ಲಿ, ಪ್ರಧಾನಿಯವರ ಭಾರತ ಭೇಟಿ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಬಾಂಗ್ಲಾದಿಂದ ಗಡಿಪಾರಾಗಿರುವ ಭಾರತದಲ್ಲಿ ನೆಲೆಸಿರುವ ಅಪರಾಧಿಗಳನ್ನು(ಮಾಜಿ ಪ್ರಧಾನಿ ಶೇಖ್ ಹಸೀನಾ) ಗಡೀಪಾರು ಮಾಡುವಂತೆ ಬಾಂಗ್ಲಾ ಸಲ್ಲಿಸಿದ ಮನವಿಗೆ ಭಾರತದ ಪ್ರತಿಕ್ರಿಯೆಗಾಗಿ ಕಾಯುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನೂ ‘ಇತ್ತೀಚೆಗೆ ಬಾಂಗ್ಲಾ ವಿದೇಶಾಂಗ ಸಚಿವಲಾಯ ವಕ್ತಾರ ಹುಮಾಯೂನ್ ಕೋಬಿರ್, ಸ್ಪಷ್ಟ ರಾಷ್ಟ್ರೀಯ ಹಿತಾಸಕ್ತಿಗಳಿಲ್ಲದೆ ಉನ್ನತ ಮಟ್ಟದ ಭೇಟಿಯನ್ನು ಏರ್ಪಡಿಸಲು ಢಾಕಾ ಯಾವುದೇ ಆತುರ ಹೊಂದಿಲ್ಲ ಎಂದಿದ್ದರು.
ಪ್ರಧಾನಿಯ ಮನವಿ ತಿಳಿಸಿದ್ದ ಹೈಕಮಿಷನರ್
ಮಂಗಳವಾರ(ಆ. 18) ಭಾರತೀಯ ಹೈಕಮಿಷನ್ ಪ್ರಮುಖ ಬಾಂಗ್ಲಾದೇಶದ ವ್ಯಾಪಾರ ಮುಖಂಡರು ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟದ(ಸಿಐಐ) ಭೇಟಿ ನಿಯೋಗಕ್ಕಾಗಿ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ್ದ ಬಾಂಗ್ಲಾದಲ್ಲಿರುವ ಭಾರತದ ರಾಯಭಾರಿ ದಿನೇಶ್ ತ್ರಿವೇದಿಯವರು ಪ್ರಧಾನಿಯವರ ಭೇಟಿ ಬಗ್ಗೆ ಮಾತನಾಡಿದ್ದರು.
ಪ್ರಧಾನಿ ಮೋದಿ ಅವರು ಒಂದು ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಉಭಯ ನಾಯಕರು ಭೇಟಿಯಾಗುವ ಅಗತ್ಯವಿದೆ ಎಂದು ತಿಳಿಸಿದ್ದು, ಪ್ರಧಾನಿ ತಾರಿಖ್ ರೆಹಮಾನ್ ಅವರ ಭಾರತ ಭೇಟಿಯ ಸಮಯದಲ್ಲಿ ಅವರಿಗೆ ಅರ್ಹವಾದ ಗೌರವಾನ್ವಿತ ಸ್ವಾಗತ ದೊರೆಯುತ್ತದೆ ಎಂದು ಭರವಸೆ ನೀಡಿದ್ದಾರೆ. ಮತ್ತು ಭೇಟಿಯನ್ನು ಸ್ಮರಣೀಯವಾಗಿಸಬೇಕೆಂದು ಬಯಸಿದ್ದಾರೆ. ಎಂದು ತಿಳಿಸಿದ್ದರು (ಏಜೆನ್ಸೀಸ್).