ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿ ರಿಲೀಸ್​​: ಸಂಘಟನಾ ಕಾರ್ಯದರ್ಶಿಯಾಗಿ ಬಿ.ಎಲ್​ ಸಂತೋಷ್ ಮುಂದುವರಿಕೆ, ಇಲ್ಲಿದೆ ಕಂಪ್ಲೀಟ್​ ಲೀಸ್ಟ್​... BJP 
ದೇಶ

ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿ ರಿಲೀಸ್​​: ಸಂಘಟನಾ ಕಾರ್ಯದರ್ಶಿಯಾಗಿ ಬಿ.ಎಲ್​ ಸಂತೋಷ್ ಮುಂದುವರಿಕೆ, ಇಲ್ಲಿದೆ ಕಂಪ್ಲೀಟ್​ ಲೀಸ್ಟ್​... BJP

ನವದೆಹಲಿ: ಭಾರತೀಯ ಜನತಾ ಪಾರ್ಟಿಯ ( BJP ) ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅಧಿಕಾರ ವಹಿಸಿಕೊಂಡ ಬಳಿಕ ಪಕ್ಷದಲ್ಲಿ ಭಾರಿ ಬದಲಾವಣೆ ನಡೆದಿದ್ದು, ಅನುಭವಿ ನಾಯಕರು ಹಾಗೂ ಪ್ರಮುಖ ರಾಜಕೀಯ ಮುಖಂಡರಿಗೆ ಜವಾಬ್ದಾರಿ ನೀಡುವುದರ ಮೂಲಕ ಹೊಸ ಕೇಂದ್ರ ತಂಡವನ್ನು ರಚಿಸಲಾಗಿದೆ. 13 ರಾಷ್ಟ್ರೀಯ ಉಪಾಧ್ಯಕ್ಷರು, 8 ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು 16 ಮೋರ್ಚಾ ಅಧ್ಯಕ್ಷರನ್ನು ಒಳಗೊಂಡಿರುವ ನೂತನ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಹಾಗೂ ಹಿರಿಯ ನಾಯಕ ರಾಮ್ ಮಾಧವ್ ಅವರಿಗೆ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ನೀಡಲಾಗಿದ್ದರೆ, ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡುವ ಮೂಲಕ ಪಕ್ಷವು ಮಹತ್ವದ ಹೆಜ್ಜೆ ಇಟ್ಟಿದೆ.
ಪಿಯೂಷ್ ಗೋಯಲ್ ಅವರನ್ನು ಕೋಶಾಧಿಕಾರಿಯಾಗಿ ನೇಮಿಸಲಾಗಿದ್ದು, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ, ವೈಜಯಂತ್ ಜಯ್ ಪಾಂಡಾ, ರೇಖಾ ವರ್ಮಾ ಹಾಗೂ ತಾರಿಕ್ ಮನ್ಸೂರ್ ಅವರು ರಾಷ್ಟ್ರೀಯ ಉಪಾಧ್ಯಕ್ಷರಾಗಿ ತಮ್ಮ ಸ್ಥಾನಗಳನ್ನು ಮುಂದುವರಿಸಿದ್ದಾರೆ. ವಿನೋದ್ ತಾವ್ಡೆ ಮತ್ತು ಸುನಿಲ್ ಬನ್ಸಾಲ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದು, ಬಿ.ಎಲ್. ಸಂತೋಷ್ ಅವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ (ಸಂಘಟನೆ) ಮುಂದುವರಿಯಲಿದ್ದಾರೆ.
ಅನಿಲ್ ಆಂಟನಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಮುಂದುವರಿದರೆ, ಅನಿಲ್ ಬಲೂನಿ ಅವರು ಪ್ರಮುಖ ರಾಷ್ಟ್ರೀಯ ಮಾಧ್ಯಮ ಜವಾಬ್ದಾರಿಯನ್ನು ಮುಂದುವರಿಸಲಿದ್ದಾರೆ. 13 ರಾಷ್ಟ್ರೀಯ ಉಪಾಧ್ಯಕ್ಷರಲ್ಲಿ ಐವರು ಮಹಿಳೆಯರಿದ್ದಾರೆ, ಆದರೆ ಎಂಟು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಲ್ಲಿ ಸ್ಮೃತಿ ಇರಾನಿ ಮಾತ್ರ ಏಕೈಕ ಮಹಿಳೆಯಾಗಿದ್ದಾರೆ. ವಿಶೇಷವೆಂದರೆ, ಪಕ್ಷದ ಸಾಮಾಜಿಕ ಜಾಲತಾಣ ಮತ್ತು ಐಟಿ ಸೆಲ್ ಮುಖ್ಯಸ್ಥರಾಗಿದ್ದ ಅಮಿತ್ ಮಾಳವೀಯ ಅವರ ಹೆಸರು ಬಿಜೆಪಿಯ ಹೊಸ ಪಟ್ಟಿಯಲ್ಲಿಲ್ಲ. ಜೊತೆಗೆ, ದೀಪಕ್ ಮಹಾಸ್ಕರೆ ಅವರನ್ನು ಬಿಜೆಪಿಯ ಸಾಮಾಜಿಕ ಜಾಲತಾಣ ಸಂಚಾಲಕರಾಗಿ ನೇಮಿಸಲಾಗಿದೆ.
ಕರ್ನಾಟಕದ ಸಂಸದ ಫ್ರೋ. ಎಂ. ನಾಗರಾಜ್​ ಅವರು ಕೇಂದ್ರ ಮಟ್ಟದಲ್ಲಿ ಸ್ಥಾನ ಪಡೆದಿದ್ದು, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ. ಯುವ ಮೋರ್ಚಾ ಅಧ್ಯಕ್ಷರ ಬದಲಾವಣೆಯಾಗಿದ್ದು, ಈ ಹಿಂದೆ ಯುವ ಮೋರ್ಚಾ ಅಧ್ಯಕ್ಷರಾಗಿದ್ದ ಸಂಸದ ತೇಜಸ್ವಿ ಸೂರ್ಯ ಅವರ ಸ್ಥಾನ ತಪ್ಪಿದೆ.

ಬಿಜೆಪಿ ಪ್ರಕಟಿಸಿದ ಪದಾಧಿಕಾರಿಗಳ ಪೂರ್ಣ ಪಟ್ಟಿ

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರ ಸಂಪೂರ್ಣ ಪಟ್ಟಿ

* ವಸುಂಧರಾ ರಾಜೇ ಸಿಂಧಿಯಾ — ರಾಜಸ್ಥಾನ
* ತೀರತ್ ಸಿಂಗ್ ರಾವತ್ — ಉತ್ತರಾಖಂಡ
* ರಾಮ್ ಮಾಧವ್ — ದೆಹಲಿ
* ವೈಜಯಂತ್ ಜಯ್ ಪಾಂಡಾ — ಒಡಿಶಾ
* ಡಿ. ಪುರಂದೇಶ್ವರಿ — ಆಂಧ್ರಪ್ರದೇಶ
* ರೇಖಾ ವರ್ಮಾ — ಉತ್ತರ ಪ್ರದೇಶ
* ವರ್ಷಾಬೆನ್ ನರೇಂದ್ರಭಾಯ್ ದೋಷಿ — ಗುಜರಾತ್
* ಡಾ. ಭಾರತಿ ಪ್ರವೀಣ್ ಪವಾರ್ — ಮಹಾರಾಷ್ಟ್ರ
* ಸರ್ದಾರ್ ಮನ್‌ಪ್ರೀತ್ ಸಿಂಗ್ ಬಾದಲ್ — ಪಂಜಾಬ್
* ಲಾಲ್ ಸಿಂಗ್ ಆರ್ಯ — ಮಧ್ಯಪ್ರದೇಶ
* ಪ್ರೊ. ಎಂ. ನಾಗರಾಜ್​ — ಕರ್ನಾಟಕ
* ಪ್ರೊ. ತಾರಿಕ್ ಮನ್ಸೂರ್ — ಉತ್ತರ ಪ್ರದೇಶ
* ಡಾ. ಮಧುಚಂದ್ರ ಕರ್ — ಪಶ್ಚಿಮ ಬಂಗಾಳ

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ)

* ಶ್ರೀ ಬಿ.ಎಲ್. ಸಂತೋಷ್ — ಕರ್ನಾಟಕ

ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿಗಳು

* ಶಿವಪ್ರಕಾಶ್ — ಮುಂಬೈ
* ಸೌದನ್ ಸಿಂಗ್ — ಚಂಡೀಗಢ

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು

* ವಿನೋದ್ ತಾವ್ಡೆ — ಮಹಾರಾಷ್ಟ್ರ
* ಸುನಿಲ್ ಬನ್ಸಾಲ್ — ದೆಹಲಿ
* ಬಿಪ್ಲಬ್ ಕುಮಾರ್ ದೇವ್ — ತ್ರಿಪುರ
* ಸ್ಮೃತಿ ಇರಾನಿ — ಉತ್ತರ ಪ್ರದೇಶ
* ಸತೀಶ್ ಪೂನಿಯಾ — ರಾಜಸ್ಥಾನ
* ಗಜೇಂದ್ರ ಪಟೇಲ್ — ಮಧ್ಯಪ್ರದೇಶ
* ಹರೀಶ್ ದ್ವಿವೇದಿ — ಉತ್ತರ ಪ್ರದೇಶ
* ಸಂಜಯ್ ಭಾಟಿಯಾ — ಹರಿಯಾಣ

ರಾಷ್ಟ್ರೀಯ ಕಾರ್ಯದರ್ಶಿಗಳು

* ಕವಿತಾ ಪಾಟಿದಾರ್ — ಮಧ್ಯಪ್ರದೇಶ
* ಕೆ. ಸುರೇಂದ್ರನ್ — ಕೇರಳ
* ಡಾ. ಭೋಲಾ ಸಿಂಗ್ — ಉತ್ತರ ಪ್ರದೇಶ
* ಡಾ. ಪ್ರದೀಪ್ ವರ್ಮಾ — ಜಾರ್ಖಂಡ್
* ಜಗದೀಶ್ ಈಶ್ವರ್‌ಭಾಯ್ ಪಟೇಲ್ — ಗುಜರಾತ್
* ಡಾ. ಸಂದೀಪ್ ಪಾಠಕ್ — ದೆಹಲಿ
* ಫಾಂಗ್ನಾನ್ ಕೊನ್ಯಾಕ್ — ನಾಗಾಲ್ಯಾಂಡ್
* ಸಂಗೀತಾ ಯಾದವ್ — ಉತ್ತರ ಪ್ರದೇಶ
* ಅನಿಲ್ ಆಂಟನಿ — ಕೇರಳ
* ಎಂ. ವೆಂಕಟೇಶನ್ — ತಮಿಳುನಾಡು
* ಮನೋಜ್ ಟಿಗ್ಗಾ — ಪಶ್ಚಿಮ ಬಂಗಾಳ
* ಸಿದ್ಧಾರ್ಥ ಶಂಭು — ಬಿಹಾರ
* ಡಾ. ಸ್ವದೇಶ್ ಸಿಂಗ್ — ದೆಹಲಿ
* ಮೃಗಾಂಕ ದೇವ್ ಬರ್ಮನ್ — ಅಸ್ಸಾಂ
* ರೋಹನ್ ಗುಪ್ತಾ — ಗುಜರಾತ್
* ಜೈ ಪ್ರಕಾಶ್ — ದೆಹಲಿ

ರಾಷ್ಟ್ರೀಯ ಕೋಶಾಧಿಕಾರಿ

ಶ್ರೀ ಪಿಯೂಷ್ ಗೋಯಲ್ — ಮಹಾರಾಷ್ಟ್ರ

ಪ್ರಧಾನಿ ಮೋದಿ ಅಭಿನಂದನೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳಾಗಿ ನೂತನವಾಗಿ ನೇಮಕಗೊಂಡಿರುವ ಎಲ್ಲರಿಗೂ ಹಾಗೂ ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ಪಡೆದಿರುವ ಎಲ್ಲ ನಾಯಕರಿಗೆ ಟ್ವೀಟ್​ ಮಾಡುವ ಮೂಲಕ ಅಭಿನಂದನೆಗಳನ್ನು ತಿಳಿಸಿದ್ದಾರೆ. ಈ ನೂತನ ತಂಡವು ಸಾಂಸ್ಥಿಕ ಅನುಭವ, ಯುವ ಉತ್ಸಾಹ ಮತ್ತು ತಳಮಟ್ಟದ ಸಂಪರ್ಕವನ್ನು ಒಟ್ಟುಗೂಡಿಸಿದೆ. ನಮ್ಮ ಪಕ್ಷವನ್ನು ಬಲಪಡಿಸಲು ಮತ್ತು ಸಾರ್ವಜನಿಕ ಸೇವೆಯ ಮೇಲೆ ಗಮನಹರಿಸಲು ತಮ್ಮ ಅತ್ಯುತ್ತಮ ಕೊಡುಗೆಯನ್ನು ನೀಡಲಿದ್ದಾರೆ ಎಂಬ ಸಂಪೂರ್ಣ ವಿಶ್ವಾಸವಿದೆ. ಅವರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು ಎಂದು ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.

ನಿತಿನ್ ನಬಿನ್ ಅಭಿನಂದನೆಗಳು

ಹೊಸ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದ ನಿತಿನ್ ನಬಿನ್, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಈ ತಂಡದಲ್ಲಿರುವ ಅನುಭವ ಮತ್ತು ಯುವ ಉತ್ಸಾಹದ ಸಮ್ಮಿಶ್ರಣವು ಪಕ್ಷದ ಸಂಘಟನೆಗೆ ಹೊಸ ಚೈತನ್ಯವನ್ನು ನೀಡಲಿದೆ ಎಂದು ತಿಳಿಸಿದರು. ಬಿಜೆಪಿಯನ್ನು ಮತ್ತಷ್ಟು ಬಲಪಡಿಸಲು ಮತ್ತು "ವಿಕಸಿತ ಭಾರತ"ದ ದೃಷ್ಟಿಕೋನ ಹಾಗೂ ರಾಷ್ಟ್ರ ನಿರ್ಮಾಣದ ಹಾದಿಯನ್ನು ಮುನ್ನಡೆಸಲು ಪಕ್ಷದ ಸಮರ್ಪಿತ ಕಾರ್ಯಕರ್ತರಾಗಿ ಎಲ್ಲರೂ ಶ್ರಮಿಸುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು, (ಏಜೆನ್ಸೀಸ್​).