Priyanka Chopra with Nick Jonas
ಮುಂಬೈ: ಜಾಗತಿಕ ತಾರೆ ಪ್ರಿಯಾಂಕಾ ಚೋಪ್ರಾ ಜೋನಾಸ್ ಅವರು ಇತ್ತೀಚೆಗೆ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ಸೀಸನ್ 4ರ ಮೊದಲ ಎಪಿಸೋಡ್‌ನಲ್ಲಿ ಅತಿಥಿಯಾಗಿ ಆಗಮಿಸಿ, ತಮ್ಮ ಪತಿ ನಿಕ್ ಜೋನಾಸ್ ಅವರೊಂದಿಗಿನ ರೊಮ್ಯಾಂಟಿಕ್ ಕ್ಷಣಗಳ ಬಗ್ಗೆ ಹಂಚಿಕೊಂಡರು.
ಹೌದು, ವಿಶೇಷವಾಗಿ ಒಂದು ಕರ್ವಾ ಚೌತ್‌ನಲ್ಲಿ ನಿಕ್ ಅವರು ತಮ್ಮನ್ನು ವಿಮಾನದಲ್ಲಿ ಮೋಡಗಳ ಮೇಲೆ ಕರೆದೊಯ್ದು ಚಂದ್ರನನ್ನು ತೋರಿಸಿದ ಬಳಿಕ ಉಪವಾಸ ತೊರೆದಿದ್ದನ್ನು ನೆನಪಿಸಿಕೊಂಡರು.ಪ್ರಿಯಾಂಕಾ ಅವರು ಕಪಿಲ್ ಶರ್ಮಾ ಅವರೊಂದಿಗೆ ಮಾತನಾಡುತ್ತಾ, "ನಾವು ಅನೇಕ ಅಜೀಬ್ ಸ್ಥಳಗಳಲ್ಲಿ ಚಂದ್ರನನ್ನು ಹುಡುಕಿದ್ದೇವೆ. ಒಮ್ಮೆ ನಿಕ್ ಸ್ಟೇಡಿಯಂನಲ್ಲಿ ಶೋ ಮಾಡುತ್ತಿದ್ದರು, 60-70 ಸಾವಿರ ಜನರು ವೀಕ್ಷಿಸುತ್ತಿದ್ದರು. ಮೋಡಗಳು ಆವರಿಸಿದ್ದವು, ಮಳೆ ಬರಲು ತಯಾರಾಗಿತ್ತು. ರಾತ್ರಿ 10-11 ಆಗಿತ್ತು, ಚಂದ್ರ ಕಾಣೆನೇ ಇಲ್ಲ. ಆಗ ನಿಕ್ ತಮ್ಮ ವಿಮಾನದಲ್ಲಿ ಮೋಡಗಳ ಮೇಲೆ ಕರೆದೊಯ್ದರು. ಅಲ್ಲಿ ಚಂದ್ರ ಕಾಣಿಸಿಕೊಂಡ, ನಾನು ಉಪವಾಸ ತೊರೆದೆ" ಎಂದು ಹೇಳಿದರು.
ಈ ಕಥೆಯನ್ನು ಕೇಳಿ ಕಪಿಲ್ ಶರ್ಮಾ ತಮಾಷೆಯಾಗಿ, "ಮೋಡಗಳಲ್ಲಿ ಕೇವಲ ಉಪವಾಸವನ್ನೇ ತೊರೆದರಾ?" ಎಂದು ಕೇಳಿದರು. ಪ್ರಿಯಾಂಕಾ ನಗುತ್ತಾ, ಸಿಹಿತಿನ್ನುವುದನ್ನೂ ಮರೆಯಲಿಲ್ಲ ಎಂದು ಉತ್ತರಿಸಿದರು. ನಿಕ್ ಅವರಿಗೆ ಕರ್ವಾ ಚೌತ್ ಅತ್ಯಂತ ಪ್ರಿಯ ಹಬ್ಬವೆಂದೂ, ಪ್ರತಿ ವರ್ಷ ಕೂಡ ಕರ್ವಾ ಚೌತ್ ಆಚರಿಸುತ್ತಿದ್ದೇವೆ ಎಂದರು.
2018ರಲ್ಲಿ ವಿವಾಹವಾದ ಪ್ರಿಯಾಂಕಾ-ನಿಕ್ ದಂಪತಿ ಸಾಂಸ್ಕೃತಿಕ ವ್ಯತ್ಯಾಸಗಳನ್ನು ಮೀರಿ ಒಂದಾಗಿ ಆಚರಿಸುವುದು ಅಭಿಮಾನಿಗಳಿಗೆ ಸ್ಫೂರ್ತಿಯಾಗಿದೆ. ಪ್ರಿಯಾಂಕಾ ಈಗ ಎಸ್‌ಎಸ್ ರಾಜಮೌಳಿ ನಿರ್ದೇಶನದ 'ವರಣಾಸಿ' ಚಿತ್ರದಲ್ಲಿ ಮಹೇಶ್ ಬಾಬು ಜೊತೆ ನಟಿಸುತ್ತಿದ್ದಾರೆ,(ಏಜೆನ್ಸೀಸ್).