ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಚುನಾವಣೆಗೂಮುನ್ನ ಕಾಂಗ್ರೆಸ್ ಪಕ್ಷದಪ್ರಣಾಳಿಕೆಯಲ್ಲಿ ಘೋಷಿಸಿದ್ದಆರೋಗ್ಯ ಮತ್ತು ಕುಟುಂಬ ಕಲ್ಯಾಣಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವಎನ್‌ಎಚ್‌ಎಂ ಒಳಗುತ್ತಿಗೆನೌಕರರನ್ನು ಖಾಯಂಗೊಳಿಸುವಬೇಡಿಕೆಯನ್ನು ಈವರೆಗೆ ಈಡೇರಿಸದಿರುವಸರ್ಕಾರನ ನಡೆಯನ್ನು ಆಕ್ಷೇಪಿಸಿಕರ್ನಾಟಕ ರಾಜ್ಯ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆಯ ಎನ್‌ಎಚ್‌ಎಂಒಳಗುತ್ತಿಗೆ ನೌಕರರ ಸಂಘ ಮಾ.16ರಿಂದ ಅನಿರ್ಧಿಷ್ಟಾವಧಿಮುಷ್ಕರ ಹಮ್ಮಿಕೊಂಡಿದೆ ಎಂದುಸಂಘದ ಅಧ್ಯಕ್ಷ ಅಶ್ವತ್ ಎಚ್.ಕೆ.ತಿಳಿಸಿದ್ದಾರೆ.
ಹಾಲಿಸರ್ಕಾರ ಅಧಿಕಾರಕ್ಕೆ ಬಂದು 3ವರ್ಷ ಪೂರೈಸುತ್ತಾಬಂದಿದ್ದರೂ ಈವರೆಗಿನ ಭರವಸೆಹುಸಿಯಾಗಿದೆ ಎಂದು ದೂರಿರುವಸಂಘದ ಪ್ರಧಾನ ಕಾರ್ಯದರ್ಶಿಶಾವುರಾಜ್ ಎಸ್.ಇತ್ತೀಚೆಗೆಮುಖ್ಯಮಂತ್ರಿ ಸಿದ್ದರಾಮಯ್ಯನವರು3ನೇಬಜೆಟ್ ಮಂಡಿಸಿದ್ದಾರೆ.ಆದರೆ ಬಜೆಟ್‌ನಲ್ಲಿನನಮ್ಮ ಬೇಡಿಕೆ ಈಡೇರಿಕೆಯ ಯಾವುದೇಪ್ರಸ್ತಾಪ ಮಾಡದಿರುವುದರಿಂದಅನಿವಾರ್ಯವಾಗಿ ನಾವು ಹೋರಾಟದಹಾದಿ ಹಿಡಿಯಬೇಕಾಗಿದೆ.ಮೊದಲ ಹಂತವಾಗಿಮಾ.11 ರಿಂದರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ28 ಸಾವಿರಎನ್‌ಎಚ್‌ಎಂ ಒಳಗುತ್ತಿಗೆ ನೌಕರರುಕಪ್ಪುಪಟ್ಟಿಯನ್ನು ಧರಿಸಿಕರ್ತವ್ಯಕ್ಕೆ ಹಾಜರಾಗುತ್ತೇವೆ.ನಂತರ ಮಾ.16ರಿಂದಮುಷ್ಕರ ಆರಂಭಿಸುವುದಾಗಿತಿಳಿಸಿದ್ದಾರೆ.
ಈಸಂಬಂಧ ಉಪಮುಖ್ಯಮಂತ್ರಿಗಳುಒಳಗುತ್ತಿಗೆ ನೌಕರರನ್ನುಖಾಯಂಗೊಳಿಸುವ ಪಕ್ಷದ ಭರವಸೆಯನ್ನುಸಂಪುಟದಲ್ಲಿ ಮಂಡಿಸುವುದಾಗಿಹೇಳಿದ್ದರು.ಈವರೆಗೆ ಆ ಕೆಲಸಆಗದಿರುವುದ ಹಲವು ಪ್ರಶ್ನೆಗಳನ್ನುಹುಟ್ಟು ಹಾಕಿದೆ ಎಂದು ಆಕ್ಷೇಪವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ,ಮುಷ್ಕರದಿಂದಸಾರ್ವಜನಿಕರಿಗಾಗುವ ತೊಂದರೆಗೆವಿಷಾಧ ವ್ಯಕ್ತಪಡಿಸಿರುವ ಸಂಘದಅಧ್ಯಕ್ಷರು ಮತ್ತು ಕಾರ್ಯದರ್ಶಿಗಳುಇದು ತಮಗೆ ಅನಿವಾರ್ಯ ಎಂದುಹೇಳಿದ್ದಾರೆ.