Newlywed Allegedly Kidnapped By Family in Telangana 
ದೇಶ

ಮಗಳ ಅಂತರ್ಜಾತಿ ವಿವಾಹಕ್ಕೆ ಪೋಷಕರ ವಿರೋಧ; ದಾಂಪತ್ಯ ಜೀವನಕ್ಕೆ ಕಾಲಿಟ್ಟ 2ನೇ ದಿನಕ್ಕೆ ನವವಧು ಕಿಡ್ನ್ಯಾಪ್.. Telangana ​​​​

ಪ್ರಮುಖ ಮುಖ್ಯಾಂಶಗಳು

  • ಅಂತರ್ಜಾತಿ ಮದುವೆಯಾದ ಮಗಳನ್ನು ಕಿಡ್ನ್ಯಾಪ್​ ಮಾಡಿದ ಕುಟುಂಬಸ್ಥರು.
  • ತೆಲಂಗಾಣದ ಪಾಪಣ್ಣಪೇಟೆ ಗ್ರಾಮದಲ್ಲಿ ನಡೆದ ಘಟನೆ, ಯುವತಿಗಾಗಿ ಪೊಲೀಸರ ಹುಡುಕಾಟ.
  • ಯುವಕನನ್ನು ಮೆಚ್ಚಿ ಪೊಲೀಸರ ಮುಂದೆ ಮದುವೆಯಾಗಿದ್ದ ನವವಧು ಅಪಹರಣ.
Newlywed Allegedly Kidnapped By Family in Telangana: ಬೇರೆ ಜಾತಿಯ ಹುಡುಗನನ್ನು ಮದುವೆಯಾಗಿದ್ದಕ್ಕೆ ಸಿಟ್ಟಾಗಿದ್ದ ಯುವತಿ ಕುಟುಂಬಸ್ಥರು, ಆಕೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಎರಡನೇ ದಿನಕ್ಕೆ ಕಿಡ್ನ್ಯಾಪ್​ ಮಾಡಿದ ಘಟನೆ ತೆಲಂಗಾಣದ ಪಾಪಣ್ಣಪೇಟೆ ಗ್ರಾಮದಲ್ಲಿ ನಡೆದಿದೆ. ಸದ್ಯ ಪೊಲೀಸರು ಯುವತಿಗಾಗಿ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ. 
ಪಾಪಣ್ಣಪೇಟೆ ಮಂಡಲದ ಎಲ್ಲಾಪುರ ಗ್ರಾಮದ ನಿವಾಸಿ ಪ್ರಣಯ್ ಮತ್ತು ಕೌಡಿಪಲ್ಲಿ ಮಂಡಲದ ಸಲಬತ್‌ಪುರ ಗ್ರಾಮದ ಯುವತಿ ಜುಲೈ6ರಂದು ಮದುವೆ ಮಾಡಿಕೊಂಡಿದ್ದರು. ಇಬ್ಬರು ವಯಸ್ಕರು. ಆದರೆ, ಬೇರೆ ಜಾತಿಯವರಾದ ಕಾರಣ ಮದುವೆಗೆ ವಿರೋಧವಿತ್ತು. ಹೀಗಾಗಿ ಪ್ರೇಮಿಗಳು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದರು.

ಪೊಲೀಸರು ಏನಂದ್ರು?

ಪ್ರೇಮಿಗಳ ಅಳಲು ಆಲಿಸಿದ ಪೊಲೀಸರು ಯುವತಿಯ ಪೋಷಕರನ್ನು ಹಾಗೂ ಪ್ರಣಯ್​ ಅವರ ತಂದೆ-ತಾಯಿಯನ್ನು ಕರೆಸಿ ಬುದ್ಧಿ ಹೇಳಿದರು. ಆಪ್ತ ಸಮಾಲೋಚನೆ ನಡೆಸಿದರು. ಪೊಲೀಸರು ದಂಪತಿಗೆ ಒಟ್ಟಿಗೆ ವಾಸಿಸಲು ಅವಕಾಶ ನೀಡಿದರು. ವಧು ತನ್ನ ಪತಿಯೊಂದಿಗೆ ಇರಲು ಬಯಸುವುದಾಗಿ ಹೇಳಿದ್ದಾಳೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

ಹುಡುಗನ ತಾಯಿ ಹೇಳಿದ್ದೇನು?

ಅಂತರ್ಜಾತಿ ವಿವಾಹದ ಬಗ್ಗೆ ಯುವತಿಯ ತಾಯಿ ಆಕ್ಷೇಪ ವ್ಯಕ್ತಪಡಿಸಿದ್ದರು. ಗಲಾಟೆ ಮಾಡಿದ್ದರು. ಯುವತಿಯೊಂದಿಗೆ ಮದುವೆಯಾದ ಎರಡನೇ ದಿನಕ್ಕೆ ಎಲ್ಲಾಪುರಕ್ಕೆ ನಾಲ್ಕು ಕಾರುಗಳಲ್ಲಿ ಬಂದರು. ಕೆಲವರು ಕಾರಿನ ಬಳಿ ಇದ್ದರು. ಇನ್ನು ಕೆಲವರು ಮನೆಗೆ ಬಂದು ಆಕೆಯನ್ನು ಎಳೆದುಕೊಂಡು ಹೋದರು. ನಾನು ಅವರನ್ನು ತಡೆಯಲು ಯತ್ನಿಸಿದೆ. ಆದರೆ, ನನ್ನನ್ನೇ ನೆಲಕ್ಕೆ ದೂಡಿ ಎಳೆದೊಯ್ದರು ಎಂದು ಮಾಧ್ಯಮದ ಮುಂದೆ ಪ್ರಣಯ್​  ತಾಯಿ ಶ್ಯಾಮಲಾ ಅವರು ಮಾಹಿತಿ ಹಂಚಿಕೊಂಡಿದ್ದಾರೆ. 

ಯುವತಿಗಾಗಿ ಹುಡುಕಾಟ

ಯುವಕ ಪ್ರಣಯ್​ ಕುಟುಂಬದವರು ಪಾಪಣ್ಣ ಪೊಲೀಸ್​ ಠಾಣೆಗೆ ದೂರು ನೀಡಲಾಗಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದ್ದು, ಕಾರುಗಳು ಯಾವ, ಯಾವ ಪ್ರದೇಶದಲ್ಲಿ ಓಡಾಟ ನಡೆಸಿದೆ ಎನ್ನುವುದರ ಬಗ್ಗೆ ತೀವ್ರ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. 
ಪ್ರಕರಣದ ಬಗ್ಗೆ ಪಾಪಣ್ಣಪೇಟೆ ಪೊಲೀಸರು ಮಾತನಾಡಿದ್ದು,  ಯುವತಿ ಎಲ್ಲಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲಾಗುತ್ತಿದೆ. ಆಕೆ ಸಿಕ್ಕ ತಕ್ಷಣ ವಿಚಾರಣೆ ನಡೆಸಿ, ಆಕೆಯನ್ನು ಬಲವಂತವಾಗಿ ಕರೆದೊಯ್ಯಲಾಗಿದೆಯೇ ಎನ್ನುವುದರ ಬಗ್ಗೆ ವಿಚಾರಣೆ ನಡೆಸುತ್ತೇವೆ. ಕಾನೂನು ನಿಯಮ ಉಲ್ಲಂಘಿಸಿದ್ದರೆ ಯುವತಿ ಕುಟುಂಬಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ಹಂಚಿಕೊಂಡರು, (ಏಜೆನ್ಸೀಸ್).