ಸಾಂದರ್ಭಿಕ ಚಿತ್ರ 
ದೇಶ

ನ್ಯೂ ಇಯರ್​ ಗೆ ಬಿರಿಯಾನಿ ಓಕೆ ಆದ್ರೆ ಉಪ್ಪಿಟ್ಟು ಯಾಕೆ? ಸ್ವಿಗ್ಗಿ ಬಿಚ್ಚಿಡ್ತು ರೋಚಕ ಮಾಹಿತಿ! Swiggy Order

Swiggy Order: ದೇಶಾದ್ಯಂತ 2026 ರ ಹೊಸ ವರ್ಷದ ಆಚರಣೆ ಮತ್ತು ಪಾರ್ಟಿಗಳು ಭರದಿಂದ ಸಾಗುತ್ತಿದ್ದಂತಲೇ, ಭಾರತದಲ್ಲಿ ಆಹಾರ ವಿತರಣಾ ಅಪ್ಲಿಕೇಶನ್​ಗಳಲ್ಲಿ ಭಾರೀ ಏರಿಕೆ ಕಂಡಿವೆ ಎಂದು ವರದಿಯಾಗಿದೆ.
ನಿರ್ದಿಷ್ಟವಾಗಿ ಹೇಳುವುದಾದರೆ, ತ್ವರಿತ-ವಾಣಿಜ್ಯ ವೇದಿಕೆಯಾದ ಸ್ವಿಗ್ಗಿ ಆರ್ಡರ್‌ಗಳಲ್ಲಿ ಬೇಡಿಕೆ ಹೆಚ್ಚಾಗಿದ್ದು, ಅವರು ಹಂಚಿಕೊಂಡಿರುವ ಅಂಕಿ ಅಂಶಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್​ ಆಗಿವೆ. ಹೊಸ ವರ್ಷದ ಸಂಭ್ರಮಾಚರಣೆಯ ನಡುವೆ  ಬಿರಿಯಾನಿ ಬಹುದೊಡ್ಡ ಬೇಡಿಕೆ ಖಾದ್ಯವಾಗಿದೆ ಎಂಬುದನ್ನು ಇದು ಎತ್ತಿ ಹಿಡಿದಿದೆ.
ಸ್ವಿಗ್ಗಿ ಪ್ರಕಾರ, ಸಂಜೆ 7:30 ರ ಹೊತ್ತಿಗೆ 2,18,000 ಕ್ಕೂ ಹೆಚ್ಚು ಜನರು ಬಿರಿಯಾನಿಗಳನ್ನು ಆರ್ಡರ್ ಮಾಡಲಾಗಿದೆ. "ನೀನು ನಿಜವಾಗಿಯೂ ರಾಜ" ಎಂದು ಸ್ವಿಗ್ಗಿ  ಶೀರ್ಷಿಕೆಯಲ್ಲಿ ಬರೆದು ಪೋಸ್ಟ್ ಮಾಡಿದೆ.
ಹೊಸ ವರ್ಷದ ಆಚರಣೆಯ ಸಮಯದಲ್ಲಿ ಬಿರಿಯಾನಿ ಮಾತ್ರವಲ್ಲದೇ, ಬರ್ಗರ್​ಗಳು ಸಹ ಜನರಿಗೆ ಅಚ್ಚುಮೆಚ್ಚಿನವಾಗಿದ್ದವು. ಆದಾಗ್ಯೂ, ಕಳೆದ ರಾತ್ರಿ 9:30 ರ ಹೊತ್ತಿಗೆ, 90,000 ಕ್ಕೂ ಹೆಚ್ಚು ಬರ್ಗರ್‌ಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಯಿತು. ಕೆಲವು ಬಳಕೆದಾರರು ಲಘು ಊಟವನ್ನು ಆಯ್ದುಕೊಂಡಿದ್ದರು. ಸ್ವಿಗ್ಗಿಯ ಮಾಹಿತಿ ಪ್ರಕಾರ, 4,244 ಜನರು ಉಪ್ಪುಮಾವು ಆರ್ಡರ್ ಮಾಡಿದರೆ, ಬೆಂಗಳೂರಿನಲ್ಲಿ 1,927 ಜನರು ಸಲಾಡ್ ಆರ್ಡರ್ ಮಾಡಿದರು. ಇದಲ್ಲದೆ, 9,410 ಜನರು ಖಿಚಡಿಯನ್ನು ಆರ್ಡರ್​ ಮಾಡಿದ್ದರು. ಹಾಗೂ ರಾತ್ರಿ 9:30 ರ ಹೊತ್ತಿಗೆ ಕ್ಯಾರೆಟ್ ಹಲ್ವಾಗೆ 7,573 ಆರ್ಡರ್‌ಗಳು ಬಂದಿವೆ ಎಂದು ಸ್ವಿಗ್ಗಿ ವರದಿ ಮಾಡಿದೆ.
2025 ರಲ್ಲಿ 66.7 ಮಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ನಾವು ಆಹಾರವನ್ನು ತಲುಪಿಸಿದ್ದೇವೆ. ಈ ಕಂಪನಿಯು ಹೊಸ ವರ್ಷದ ದಿನದಂದು ತನಗಾಗಿ ಮಾತ್ರವಲ್ಲದೇ, ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆಹಾರವನ್ನು ಹಂಚಿಕೊಳ್ಳುವ ಪ್ರವೃತ್ತಿಯಲ್ಲಿ ವೇಗವಾಗಿ ಬೆಳೆದಿದೆ ಎಂದು ತೋರಿಸಿದೆ.

 ಕೆಲವು ದುಬಾರಿ ಆರ್ಡರ್‌ಗಳು ಬಗ್ಗೆ

ಸ್ವಿಗ್ಗಿ ಸಹ-ಸಂಸ್ಥಾಪಕ ಫಾನಿ ಕಿಶನ್ ಇನ್‌ಸ್ಟಾಮಾರ್ಟ್‌ನಿಂದ ಕೆಲವು ಆಸಕ್ತಿದಾಯಕ ಮತ್ತು ದೊಡ್ಡ ಆರ್ಡರ್‌ಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಬೆಂಗಳೂರಿನ ಗ್ರಾಹಕರೊಬ್ಬರು ಸ್ವಿಗ್ಗಿ ಮೂಲಕ ಸುಮಾರು 1.8 ಲಕ್ಷ ರೂ. ಮೌಲ್ಯದ ಎರಡು ಐಫೋನ್‌ಗಳನ್ನು ಖರೀದಿಸಿದ್ದು, ಇದೀಗ 2026ರಲ್ಲಿ ಫ್ಯಾಷನ್​ ಆಗಿದೆ ಎಂದು ತಿಳಿಸಿದ್ದಾರೆ. 
ಅಲ್ಲದೆ, ಮತ್ತೊಂದು ಅಂಕಿ ಅಂಶದ ಪ್ರಕಾರ, ಮುಂಬೈನ ಬಳಕೆದಾರರೊಬ್ಬರು ಹೊಸ ವರ್ಷದ ದಿನದಂದು ತಮ್ಮ ಪ್ರೀತಿಪಾತ್ರರಿಂದ 1.45 ಲಕ್ಷ ಮೌಲ್ಯದ ಚಿನ್ನದ ಉಡುಗೊರೆಯನ್ನು ಪಡೆದರು. ಹಾಗೆಯೇ,  ಹೊಸ ವರ್ಷದ ಮುನ್ನಾದಿನವು ಕೇವಲ ಪಾರ್ಟಿ ಮಾಡುವುದಲ್ಲದೇ, ಸ್ನೇಹಿತರಿಗೆ ಮತ್ತು ಕುಟುಂಬಸ್ಥರಿಗೆ ಆಹಾರ, ಉಡುಗೊರೆ, ಡಿಜಿಟಲ್ ಶಾಪಿಂಗ್​ ಬಗ್ಗೆಯೂ ಆಸಕ್ತಿ ಹೊಂದಿತ್ತು ಎಂದು ಹೇಳಿದ್ದಾರೆ (ಏಜೆನ್ಸೀಸ್​).