ವಿದೇಶಿ ಯುವತಿಯ ವೈರಲ್ ಪಯಣ WEB
ದೇಶ

ಅಪರಿಚಿತರ ನಡುವೆ ಬ್ರೆಜಿಲ್ ಬೆಡಗಿಯ ಸಂಭ್ರಮ; ವಿದೇಶಿ ಯುವತಿಯ ವೈರಲ್ ಪಯಣ! Brazil Woman

ವಿದೇಶಕ್ಕೆ ಪ್ರವಾಸ ಹೋದಾಗ ಅಪರಿಚಿತರ ಜೊತೆ ಬೆರೆಯಬೇಡಿ, ಅವರೊಂದಿಗೆ ಎಲ್ಲಿಗೂ ಹೋಗಬೇಡಿ ಎಂಬ ಎಚ್ಚರಿಕೆ ಸಾಮಾನ್ಯವಾಗಿ ಎಲ್ಲರಿಂದಲೂ ಕೇಳಿಬರುತ್ತದೆ. ಆದರೆ ಇಂತಹ ಎಚ್ಚರಿಕೆಗಳನ್ನೇ ಬದಿಗಿಟ್ಟು, ಹೊಸದಾಗಿ ಪರಿಚಯವಾದವರ ಜೊತೆ ರಾಜಸ್ಥಾನದ ಮರುಭೂಮಿಯಲ್ಲಿ ಸುತ್ತಾಡಿದ ಬ್ರೆಜಿಲ್ ಯುವತಿಯೊಬ್ಬಳ ಅನುಭವ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಭಾರತ ಪ್ರವಾಸದಲ್ಲಿರುವ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಅರಿಯಾನೆ ,ತಾನು ಕಂಡ ಸ್ಥಳಗಳು, ಭೇಟಿಯಾದ ಜನರು ಹಾಗೂ ಅನಿರೀಕ್ಷಿತ ಸಾಹಸಗಳ ವಿಡಿಯೋಗಳನ್ನು ಹಂಚಿಕೊಂಡಿದ್ದು, ಅವು ವೈರಲ್ ಆಗಿವೆ.Brazil Woman

Brazil Woman : ವಿದೇಶಕ್ಕೆ ಪ್ರವಾಸ ಹೋದಾಗ ಅಪರಿಚಿತರ ಜೊತೆ ಬೆರೆಯಬೇಡಿ, ಅವರೊಂದಿಗೆ ಎಲ್ಲಿಗೂ ಹೋಗಬೇಡಿ ಎಂಬ ಎಚ್ಚರಿಕೆ ಸಾಮಾನ್ಯವಾಗಿ ಎಲ್ಲರಿಂದಲೂ ಕೇಳಿಬರುತ್ತದೆ. ಆದರೆ ಇಂತಹ ಎಚ್ಚರಿಕೆಗಳನ್ನೇ ಬದಿಗಿಟ್ಟು, ಹೊಸದಾಗಿ ಪರಿಚಯವಾದವರ ಜೊತೆ ರಾಜಸ್ಥಾನದ ಮರುಭೂಮಿಯಲ್ಲಿ ಸುತ್ತಾಡಿದ ಬ್ರೆಜಿಲ್ ಯುವತಿಯೊಬ್ಬಳ ಅನುಭವ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಭಾರತ ಪ್ರವಾಸದಲ್ಲಿರುವ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಅರಿಯಾನೆ ,ತಾನು ಕಂಡ ಸ್ಥಳಗಳು, ಭೇಟಿಯಾದ ಜನರು ಹಾಗೂ ಅನಿರೀಕ್ಷಿತ ಸಾಹಸಗಳ ವಿಡಿಯೋಗಳನ್ನು ಹಂಚಿಕೊಂಡಿದ್ದು, ಅವು ವೈರಲ್ ಆಗಿವೆ.

ನವೆಂಬರ್ 3ರಿಂದ ರಾಜಸ್ಥಾನದ ಪುಷ್ಕರ್‌ನಲ್ಲಿ ಪ್ರವಾಸ ಮಾಡುತ್ತಿರುವ ಅರಿಯಾನೆ, ಅದಕ್ಕೂ ಮೊದಲು ಸುಮಾರು ಒಂದು ತಿಂಗಳ ಕಾಲ ವಿಪಾಸನಾ ಧ್ಯಾನ ಶಿಬಿರದಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಬಳಿಕ ಅಲ್ಲಿನ ಪ್ರವಾಸದ ವೇಳೆ ಹೊಸದಾಗಿ ಪರಿಚಯವಾದ ಕೆಲವರೊಂದಿಗೆ ಪ್ರಯಾಣಿಸುವ ನಿರ್ಧಾರ ಕೈಗೊಂಡಿದ್ದಾರೆ. ಅಪರಿಚಿತರ ಜೊತೆ ಹೋಗಬಾರದು ಎಂದು ಹಲವರು ಸಲಹೆ ನೀಡಿದ್ದರೂ, ಅವರ ಮಾತುಗಳನ್ನು ಕಡೆಗಣಿಸಿ ಹೊಸ ಅನುಭವ ಪಡೆಯಲು ಮುಂದಾಗಿದ್ದಾರೆ.

ಅಪರಿಚಿತರ ಜೊತೆ ಮರುಭೂಮಿಯಲ್ಲಿ ಕ್ಯಾಂಪಿಂಗ್ ಮಾಡಿದ ಅನುಭವವನ್ನು ಅವರು ವಿಶೇಷವಾಗಿ ಹಂಚಿಕೊಂಡಿದ್ದಾರೆ. ಯಾವುದೇ ಪೂರ್ವಯೋಜನೆ ಇಲ್ಲದೆ ಕೈಗೊಂಡ ಈ ಸಾಹಸ ತಮ್ಮ ಭಾರತ ಪ್ರವಾಸದ ಅತ್ಯಂತ ಸುಂದರ ನೆನಪುಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. ಕೆಲವೊಮ್ಮೆ ಯೋಜನೆ ಇಲ್ಲದೆ ನಡೆಯುವ ಪ್ರಯಾಣವೇ ಜೀವನದಲ್ಲಿ ಮರೆಯಲಾಗದ ಕ್ಷಣಗಳನ್ನು ನೀಡುತ್ತದೆ ಎಂಬುದು ಅವರ ಅನುಭವದ ಮಾತು.

ಅವರ ಕಣ್ಣುಗಳೇ ಅದ್ಭುತ ಎಂದ ಮಹಿಳೆ

ರಾಜಸ್ಥಾನದ ಕಲ್ಬೇಲಿಯಾ ಸಮುದಾಯದ ಮಹಿಳೆಯರನ್ನು ಭೇಟಿಯಾದಾಗ ಅರಿಯಾನೆ ಅವರಿಂದ ಮತ್ತಷ್ಟು ಪ್ರಭಾವಿತರಾಗಿದ್ದಾರೆ. ಮಹಿಳೆಯರ ಕಣ್ಣುಗಳು ತುಂಬಾ ಭಾವಪೂರ್ಣವಾಗಿದ್ದು, ಅವುಗಳಲ್ಲಿ ಆತ್ಮವನ್ನೇ ನೋಡಿದಂತಾಗುತ್ತದೆ ಎಂದು ವರ್ಣಿಸಿದ್ದಾರೆ. ಅವರೊಂದಿಗೆ ಬೆರೆತಾಗ ಮೂಡಿದ ಭಾವನೆಗಳನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ : ಸಾವಿರಾರು ಕೋಳಿಗಳ ಸಾವಿನ ನಡುವೆ ಭಾರತದಿಂದ ಮಹತ್ವದ ಹೆಜ್ಜೆ; ಬರ್ಡ್ ಫ್ಲೂಗೆ ದೇಶೀಯ ಲಸಿಕೆ ಸಿದ್ಧ! Bird Flu

ಅರಿಯಾನೆ ಹಂಚಿಕೊಂಡ ವಿಡಿಯೋಗಳಲ್ಲಿ ರಾಜಸ್ಥಾನದ ಸಾಂಪ್ರದಾಯಿಕ ಉಡುಪು ಧರಿಸಿ ಸ್ಥಳೀಯ ಮಹಿಳೆಯರು ಮತ್ತು ಪುರುಷರೊಂದಿಗೆ ನೃತ್ಯ ಮಾಡುವುದು, ಅಡುಗೆ ಸಿದ್ಧಪಡಿಸುವುದು ಹಾಗೂ ಅಲ್ಲಿನ ಜನರೊಂದಿಗೆ ಬೆರೆಯುವುದನ್ನು ಕಾಣಬಹುದು. ರಾಜಸ್ಥಾನದ ಜನಪದ ಸಂಸ್ಕೃತಿ, ಆತಿಥ್ಯ ಮತ್ತು ಸಂಪ್ರದಾಯಗಳ ಸೊಬಗು ಈ ವಿಡಿಯೋಗಳಲ್ಲಿ ಅನಾವರಣಗೊಂಡಿದೆ.

ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ

ಅರಿಯಾನೆ ಅವರ ವಿಡಿಯೋಗಳು ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿವೆ ಎನ್ನಲಾಗಿದ್ದು, ನೆಟ್ಟಿಗರು ಅವರ ಪ್ರವಾಸದ ಅನುಭವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿನ್ನ ಜೀವನ ನೋಡಿ ನನಗೂ ಇಂತಹ ಪ್ರವಾಸ ಮಾಡಬೇಕು ಅನಿಸುತ್ತಿದೆ, ನಿನ್ನನ್ನು ಪುಷ್ಕರ್ ಮೇಳದಲ್ಲಿ ಭೇಟಿಯಾಗಿದ್ದೆ, ಮತ್ತೆ ಭೇಟಿಯಾಗುವ ಆಸೆಯಿದೆ ಎಂಬ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಅವರನ್ನು ಭೇಟಿಯಾಗುವ ಆಸೆ ವ್ಯಕ್ತಪಡಿಸಿದರೆ, ಪುಷ್ಕರ್ ಸಮೀಪ ವಾಸಿಸುವ ವ್ಯಕ್ತಿಯೊಬ್ಬರು ತಮ್ಮ ಮನೆಗೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ.