ಕೋಲ್ಕತ್ತಾ: ವೈಯಕ್ತಿಕ ಕಾರಣಗಳನ್ನು ನೀಡಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರ ಕುಮಾರ್ ಬೋಸ್(Chandra Kumar Bose) ಅವರು ಸೋಮವಾರ(ಆ. 03) ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ರಾಜನಾಮೆ ನೀಡಿದ್ದಾರೆ.
2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಏಪ್ರಿಲ್ನಲ್ಲಿ ಚಂದ್ರಕುಮಾರ್ ಅವರು ಪ್ರಿಲ್ 2026ರಲ್ಲಿ ಬ್ರಾತ್ಯ ಬಸು ಮತ್ತು ಕೀರ್ತಿ ಆಜಾದ್ ಸೇರಿದಂತೆ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಟಿಎಂಸಿ ಸೇರಿದ್ದರು.
ಇಂದು ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿರುವ ಚಂದ್ರ ಕುಮಾರ್ ಅವರು, ಯಾವುದೇ ಇತರ ಮುಂದಿನ ರಾಜಕೀಯ ನಡೆಗಳ ಬಗ್ಗೆ ಮಾಹಿತಿ ನೀಡಿಲ್ಲ. ಟಿಎಂಸಿ ಸೇರಿದ್ದ ವೇಳೆ ಅವರು ಬಿಜೆಪಿ ಸೇರುವ ನಿರ್ಧಾರ ಮಾಡಿದ್ದು, ತಮ್ಮ ಐತಿಹಾಸಿಕ ತಪ್ಪು ಎಂದು ಹೇಳಿದ್ದರು.
ಬೋಸ್ 2016ರಲ್ಲಿ ಬಿಜೆಪಿ ಸೇರಿದ್ದರು. ಮತ್ತು ಪಕ್ಷದ ಪಶ್ಚಿಮ ಬಂಗಾಳ ಉಪಾಧ್ಯಕ್ಷರಾಗಿದ್ದರು. 2016ರ ಚುನಾವಣೆಯಲ್ಲಿ ಭಬಾನಿಪುರದಿಂದ ಸ್ಪರ್ಧಿಸಿ ಸೋತಿದ್ದರು. 2019ರಲ್ಲೂ ಕೋಲ್ಕತ್ತಾ ದಕ್ಷಿಣದಿಂದ ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದರು. 2023 ಸೆಪ್ಟೆಂಬರ್ನಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಉಲ್ಲೇಖಿಸಿ ಬಿಜೆಪಿಗೆ ರಾಜೀನಾಮೆ ನೀಡಿದ್ದರು (ಏಜೆನ್ಸೀಸ್).