ನೇಪಾಳ ಪ್ರಧಾನಿ ಬಾಲೆನ್ ಶಾ ಜೊತೆ ಪ್ರಧಾನಿ ಮೋದಿ ಮಾತುಕತೆ
- ಭೀಕರ ಪ್ರವಾಹದಿಂದ ತತ್ತರಿಸಿರುವ ನೇಪಾಳ
- ಬಾಲೆನ್ ಶಾ ಜೊತೆ ದೂರವಾಣಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ
- ಸಂತ್ರಸ್ತರಿಗೆ ಭಾರತದಿಂದ ಅಗತ್ಯ ನೆರವಿನ ಭರವಸೆ
ನವದೆಹಲಿ: ನೆರೆ ದೇಶ ನೇಪಾಳದಲ್ಲಿ ದಿಢೀರ್ ಪ್ರವಾಹ ಪರಿಸ್ಥಿತಿ ಎದುರಾದ ಪರಿಣಾಮ ಇಲ್ಲಿವರೆಗೆ ಸುಮಾರು 20 ಕ್ಕೂ ಹೆಚ್ಚಿನ ಜನ ಸಾವನ್ನಪ್ಪಿದ್ದು ನೂರಾರು ಜನ ಕಣ್ಮರೆಯಾಗಿದ್ದಾರೆಂದು ತಿಳಿದು ಬಂದಿದೆ. ಕಣ್ಮರೆಯಾದವರಲ್ಲಿ ನೂರಕ್ಕೂ ಅಧಿಕ ಭಾರತೀಯರಿದ್ದಾರೆಂಬ ಆಘಾತಕಾರಿ ವಿಷಯ ಹೊರಬಿದ್ದಿದೆ.
ಈ ಹಿನ್ನಲೆ ನೇಪಾಳ ಪ್ರಧಾನಿ ಬಾಲೆನ್ ಶಾ ಜೊತೆ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi Balen Shah Talk) ಮಾತುಕತೆ ನಡೆಸಿದ್ದು, ನೇಪಾಳದ ಈ ಕಠಿಣ ಪರಿಸ್ಥಿತಿಯಲ್ಲಿ ನಾವು ಸಹಾಯ ಮಾಡುತ್ತೇವೆಂದು ಮೋದಿ ತಿಳಿಸಿದ್ದಾರೆ.
ನಿಮ್ಮೊಂದಿಗೆ ನಾವಿದ್ದೇವೆ!
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ನರೇಂದ್ರ ಮೋದಿ, ನಾನು ಈಗಾಗಲೇ ನೇಪಾಳ ಪ್ರಧಾನಿ ಬಾಲೆನ್ ಶಾ
ಜೊತೆ ದೂರವಾಣಿ ಮೂಲಕ ಸಂಪರ್ಕಿಸಿದ್ದೇನೆ. ನೇಪಾಳದಲ್ಲಿ ಸಂಭವಿಸಿರುವ ಪ್ರವಾಹ ಹಾಗೂ ಸಾವು-ನೋವುಗಳಿಗೆ ಸಂತಾಪ ಸೂಚಿಸಿದ್ದು, ನೇಪಾಳದ ಸಹೋದರ/ರಿ ರೊಂದಿದೆ ಭಾರತ ಎಂದಿಗೂ ಜೊತೆಯಾಗಿರುತ್ತದೆ. ಅಲ್ಲಿಯ ಜನರಿಗೆ ಬೇಕಾಗಿರುವ ತುರ್ತು ವೈದ್ಯಕೀಯ ಸೇರಿದಂತೆ ಇತರೆ ಅಗತ್ಯ ಸಾಮಾಗ್ರಿ, ಸೌಕರ್ಯಗಳನ್ನು ಭಾರತ ರವಾನಿಸಲಿದೆ ಎಂದು ಮೋದಿ, ನೇಪಾಳ ಪ್ರಧಾನಿಗೆ ತಿಳಿಸಿದ್ದಾರೆ.
ಚೀನಾ ಗಡಿಯಿಂದ ಒಮ್ಮೆಲೆ ನೀರು ಬಂದ ಹಿನ್ನಲೆ ನೇಪಾಳದ ನದಿಗಳ ಮಟ್ಟ ಒಂದೇ ಸಮನೇ ಏರಿಕೆ ಕಂಡಿದೆ. ನಂತರ ಕೆಲವೇ ಸಮಯದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಹಿತಿ ಪ್ರಕಾರ, ಸುಮಾರು 20 ಕ್ಕೂ ಅಧಿಕ ಜನರ ಮೃತ ದೇಹ ಪತ್ತೆಯಾಗಿದ್ದು, ನೂರಾರು ಜನ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾಗಿ ತಿಳಿದು ಬಂದಿದೆ. ಕೊಚ್ಚಿ ಹೋದವರಲ್ಲಿ 100 ಕ್ಕೂ ಅಧಿಕ ಜನ ಭಾರತೀಯರಿದ್ದಾರೆಂದು ಹೇಳಲಾಗುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ, (ಏಜನ್ಸೀಸ್).