ನೀಟ್ ಯುಜಿ 2026ರ ಮರುಪರೀಕ್ಷೆಯ ಫಲಿತಾಂಶ ಪ್ರಕಟಿ 
ದೇಶ

ನೀಟ್ ಯುಜಿ ಮರುಪರೀಕ್ಷೆ ಫಲಿತಾಂಶ ಪ್ರಕಟ: 11.21 ಲಕ್ಷ ವಿದ್ಯಾರ್ಥಿಗಳು ತೇರ್ಗಡೆ, ಯುವತಿಯರದ್ದೇ ಮೇಲುಗೈ!

ನವದೆಹಲಿ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ತಡರಾತ್ರಿ ಬಹುನಿರೀಕ್ಷಿತ ನೀಟ್ ಯುಜಿ 2026ರ ಮರುಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು, 11.21 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 
ದೇಶಾದ್ಯಂತ ವೈದ್ಯಕೀಯ ಪ್ರವೇಶಾತಿ ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆಗಳು ನಿಗದಿತ ಸಮಯಕ್ಕೆ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಎನ್‌ಟಿಎ ಸಕಾಲದಲ್ಲಿ ಫಲಿತಾಂಶವನ್ನು ಬಿಡುಗಡೆಗೊಳಿಸಿದೆ. ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳು ಎನ್‌ಟಿಎ ಅಧಿಕೃತ ವೆಬ್‌ಸೈಟ್ ಆದ neet.nta.nic.inಗೆ ಭೇಟಿ ನೀಡಿ ತಮ್ಮ ಅಂಕಪಟ್ಟಿಯನ್ನು ನೋಡಬಹುದಾಗಿದೆ.
ಪ್ರಸಕ್ತ ವರ್ಷ ದೇಶಾದ್ಯಂತ ವೈದ್ಯಕೀಯ, ಡೆಂಟಲ್, ಆಯುಷ್ ಮತ್ತು ಇತರೆ ಮೈತ್ರಿಕೂಟದ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಒಟ್ಟು 11.21 ಲಕ್ಷ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದು, ಈ ಬಾರಿಯೂ ಮಹಿಳಾ ಮಣಿಗಳೇ ಮೇಲುಗೈ ಸಾಧಿಸಿದ್ದಾರೆ. ಕಳೆದ ಜೂನ್ 21ರಂದು ಭಾರತದ 551 ನಗರಗಳು ಹಾಗೂ ವಿದೇಶದ 14 ನಗರಗಳು ಸೇರಿ ಒಟ್ಟು 5,440 ಪರೀಕ್ಷಾ ಕೇಂದ್ರಗಳಲ್ಲಿ ಅಧಿಕಾರಿಗಳ ಸರ್ಪಗಾವಲಿನಲ್ಲಿ ಮರುಪರೀಕ್ಷೆಯನ್ನು ನಡೆಸಲಾಯಿತು. ಒಟ್ಟು 13 ಭಾಷೆಗಳಲ್ಲಿ ನಡೆದಿದ್ದ ಈ ಪರೀಕ್ಷೆಗೆ ಸುಮಾರು 20 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು.