ನವದೆಹಲಿ: ನೀಟ್-ಯುಜಿ (NEET UG 2026) ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಿಂದಾಗಿ ಈ ಹಿಂದಿನ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, ಈಗ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಮರುಪರೀಕ್ಷೆ ಜೂನ್ 21 ರಂದು ನಡೆಯಲಿದೆ ಎಂದು ಘೋಷಿಸಿದ್ದಾರೆ.
ಮರುಪರೀಕ್ಷೆಯ ದಿನಾಂಕ ಪ್ರಕಟವಾದ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಾತನಾಡಿದ್ದು, ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ನೀಟ್ ಯುಜಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಮತ್ತು ಈ ಬಾರಿ ಅಂತಹ ದುಷ್ಕೃತ್ಯಗಳಿಗೆ ಎನ್‌ಟಿಎ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು.
ಜೂನ್ 14 ರಂದು ಅಥವಾ ಅದಕ್ಕೂ ಮೊದಲೇ ಹೊಸ ಪ್ರವೇಶ ಪತ್ರವನ್ನು ನೀಡಲಾಗುವುದು. ಈ ಬಾರಿ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ 15 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಜೊತೆಗೆ ತಮ್ಮ ಆಯ್ಕೆಯ ಪ್ರಕಾರ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡುವ ಹಕ್ಕನ್ನು ಪಡೆಯುತ್ತಾರೆ ಎಂದು ಹೇಳಿದ್ದಾರೆ.
ಆದಾಗ್ಯೂ, ಎನ್‌ಟಿಎ ನೀಟ್-ಯುಜಿ ಪರೀಕ್ಷೆಗೆ ಹೊಸ ದಿನಾಂಕವನ್ನು ಪ್ರಕಟಿಸಿದ್ದು, ಮರುಪರೀಕ್ಷೆಯು ಜೂನ್ 21 ರಂದು ನಡೆಯಲಿದೆ. ವಿದ್ಯಾರ್ಥಿಗಳು ಮತ್ತು ಅವರ ಭವಿಷ್ಯವು ಸರ್ಕಾರದ ಅತ್ಯುನ್ನತ ಆದ್ಯತೆಯಾಗಿದೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳ ಬಗ್ಗೆ ಯಾವಾಗಲೂ ಸೂಕ್ಷ್ಮತೆಯನ್ನು ಸರ್ಕಾರ ಕಾಯ್ದುಕೊಂಡಿದೆ ಎಂದರು.
ನೀಟ್ ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದಂತೆ ತನಿಖೆಯು ಈಗ ನಿರ್ಣಾಯಕ ಹಂತವನ್ನು ತಲುಪಿದೆ. ಮೇ 7ರ ಸುಮಾರಿಗೆ ಎನ್‌ಟಿಎ (NTA) ಕುಂದುಕೊರತೆ ಪರಿಹಾರ ವ್ಯವಸ್ಥೆಯ ಮೂಲಕ ಮಹತ್ವದ ದೂರುಗಳನ್ನು ಸ್ವೀಕರಿಸಲಾಗಿತ್ತು. ಕೆಲವು 'ಊಹೆ ಪತ್ರಿಕೆಗಳಲ್ಲಿ' (Guess papers) ಇದ್ದ ಪ್ರಶ್ನೆಗಳು ಈ ವರ್ಷದ ಮೂಲ ಪ್ರಶ್ನೆ ಪತ್ರಿಕೆಯ ಸೆಟ್‌ನಲ್ಲಿಯೂ ಕಾಣಿಸಿಕೊಂಡಿವೆ ಎಂಬ ಗಂಭೀರ ಆಕ್ಷೇಪಣೆಗಳು ಕೇಳಿಬಂದಿದ್ದವು.
ಈ ದೂರುಗಳು ಕಂಡುಬಂದ ತಕ್ಷಣವೇ ಎನ್‌ಟಿಎ ಮತ್ತು ಸರ್ಕಾರವು ಉನ್ನತ ಶಿಕ್ಷಣ ಇಲಾಖೆಯೊಂದಿಗೆ ಸೇರಿ ಪ್ರಾಥಮಿಕ ತನಿಖೆಯನ್ನು ಆರಂಭಿಸಿದವು. ಇದಾದ ಬಳಿಕ ಈ ವಿಷಯವನ್ನು ಭಾರರ ಸರ್ಕಾರದ ಸಂಬಂಧಪಟ್ಟ ಸಂಸ್ಥೆಗಳುಗೆ ಹಸ್ತಾಂತರಿಸಲಾಯಿತು.
ಮುಂದಿನ ವರ್ಷದಿಂದ ನೀಟ್ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷಾ (CBT) ವ್ಯವಸ್ಥೆಯತ್ತ ಕೊಂಡೊಯ್ಯುವ ಅವಶ್ಯಕತೆಯಿದೆ. ಪ್ರಸ್ತುತ ನಡೆಯುವ ಪೇಪರ್ ಪೆನ್ ಆಧಾರಿತ ಪರೀಕ್ಷೆ ಬಿಟ್ಟು ಆನ್ಲೈನ್ ಮೂಡ್ಗೆ ಬದಲಾಯಿಸಬೇಕು ಎಂದು ಧರ್ಮೇಂದ್ರ ಪ್ರಧಾನ್ ಸೂಚಿಸಿದ್ದಾರೆ.
ನೀಟ್ ಪರೀಕ್ಷಾ ವಿವಾದದ ಸುತ್ತ ಸುತ್ತುವ ಯಾವುದೇ ವದಂತಿಗಳಿಗೆ ಬಲಿಯಾಗಬೇಡಿ. ಆದಾಗ್ಯೂ, ರಾಧಾಕೃಷ್ಣನ್ ಸಮಿತಿಯ ಶಿಫಾರಸ್ಸುಗಳು ಜಾರಿಗೆ ತರಲಾಗಿದೆ. ಈ ವಿಷಯದ ಬಗ್ಗೆ ಸಿಬಿಐ ವಿವರವಾದ ತನಿಖೆ ನಡೆಸಲಿದೆ ಮತ್ತು ತಪ್ಪುಗಳಲ್ಲಿ ಭಾಗಿಯಾಗಿರುವ ಯಾರನ್ನು ಬಿಡಲಾಗುವುದಿಲ್ಲ ಎಂದು ಹೇಳಿದ್ದಾರೆ (ಏಜೆನ್ಸೀಸ್).