"ಐ ಲವ್ ಯೂ ಮಮ್ಮಾ-ಪಪ್ಪಾ" ಎಂದು ಬರೆದಿಟ್ಟು ಡೆಹ್ರಾಡೂನ್‌ನಲ್ಲಿ ನೀಟ್ ವಿದ್ಯಾರ್ಥಿನಿ ಆತ್ಮಹತ್ಯೆ
- "ಐ ಲವ್ ಯೂ ಮಮ್ಮಾ-ಪಪ್ಪಾ" ಎಂದು ಬರೆದಿಟ್ಟು ಡೆಹ್ರಾಡೂನ್‌ನಲ್ಲಿ ನೀಟ್ ವಿದ್ಯಾರ್ಥಿನಿ ಆತ್ಮಹತ್ಯೆ
- ಕಾರ್ಗಿಲ್ ಯೋಧನ ಪುತ್ರಿ ರಿಯಾ ಕುಮಾರಿ ಥಾಪಾ ಆತ್ಮಹತ್ಯೆ
- ಪಿಯುಸಿಯಲ್ಲಿ 97% ಅಂಕ ಗಳಿಸಿದ್ದ ನೀಟ್ (NEET UG) ಆಕಾಂಕ್ಷಿ
ಡೆಹ್ರಾಡೂನ್: ನೀಟ್ ಯುಜಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಡೆಹ್ರಾಡೂನ್ನ ವಿದ್ಯಾರ್ಥಿಯೊಬ್ಬಳು ಆತ್ಮಹತ್ಯೆ (NEET Student Suicide) ಗೆ ಶರಣಾದ ಘಟನೆ ವರದಿಯಾಗಿದೆ. ಮೃತ ದುರ್ದೈವಿಯನ್ನು ರಿಯಾ ಕುಮಾರಿ ಥಾಪಾ ಎಂದು ಗುರುತಿಸಲಾಗಿದ್ದು, ಇಕೆಯ ತಂದೆ 1999 ರ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದರೆಂದು ತಿಳಿದು ಬಂದಿದೆ.
ಪೊಲೀಸ್ ಮಾಹಿತಿ ಪ್ರಕಾರ, ಮಂಗಳವಾರ (ಜೂ.16) ಮದ್ಯಾಹ್ನ ಊಟದ ಸಮಯವಾದರೂ ಮಗಳು ತನ್ನ ಕೋಣೆಯಿಂದ ಹೊರಬಾರದನ್ನು ಕಂಡು ತಾಯಿ ಚಕಿತಳಾಗಿದ್ದಾಳೆ. ಎಷ್ಟೇ ಬಾರಿ ಕೂಗಿದರೂ ಮಗಳ ಧ್ವನಿ ಕೇಳದಿದ್ದಾಗ, ತನ್ನ ಪತಿಗೆ ಮಾಹಿತಿ ನೀಡಿದ್ದಾಳೆ.
ಮಗಳ ಕೋಣೆಯ ಬಾಗಿಲನ್ನು ಒಡೆದಾಗ ಮಗಳು ಫ್ಯಾನಿಗೆ ನೇಣು ಬಿಗಿದುಕೊಂಡು ಸತ್ತಿರುವುದು ಕಂಡಿದೆ. ಕೂಡಲೇ ಪಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸೂಸೈಡ್ ನೋಟ್ನಲ್ಲೇನಿದೆ?
ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಹಾಗೆಯೇ ರೀಯಾಳ ಕೋಣೆಯಲ್ಲಿ ಸೂಸೈಡ್ ನೋಟ್ ದೊರೆತಿದ್ದು, ಅದರಲ್ಲಿ ನನ್ನ ಸಾವಿಗೆ ನಾನೇ ಹೊಣೆ, ಐ ಲವ್ ಯೂ ಮಮ್ಮಾ, ಪಪ್ಪಾ ಎಂದು ಬರೆದಿದೆ.
ಆಕೆ ಬರೆದಿರುವ ಸೂಸೈಡ್ ನೋಟ್ನ್ನು ನಾವು ವಶಕ್ಕೆ ಪಡೆದಿದ್ದು, ಅದರಲ್ಲಿ ಆಕೆಗೆ ತನ್ನ ಮೇಲಿನ ಅಸಮರ್ಥತೆ ಬಗ್ಗೆ ತೀವ್ರ ಕೊರಗಿದ್ದ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದಾಳೆಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮೃತ ರಿಯಾ ಥಾಪಾ ಪಿಯುಸಿಯಲ್ಲಿ ಬುದ್ಧಿವಂತ ವಿದ್ಯಾರ್ಥಿಯಾಗಿದ್ದು, ಶೇ. 97 ಪ್ರತಿಷತ ಅಂಕ ಪಡೆದಿದ್ದಳು. ಆದರೆ ಮೇ. 3 ರಂದು ನಡೆದ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣವಾಗದ ಹಿನ್ನಲೆ ತುಂಬಾ ನೊಂದಿಕೊಂಡಿದ್ದಳೆಂದು ಪಾಲಕರು ಹೇಳಿದ್ದಾರೆ.
ಜೂನ್ 21 ಕ್ಕೆ ನೀಟ್ ಮರು ಪರೀಕ್ಷೆ!
ಮೇ 3, 2026 ರಂದು ನಡೆದ ನೀಟ್ ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ, ಈ ಪರೀಕ್ಷೆಯನ್ನು ಜೂನ್ 21 ಕ್ಕೆ ಮತ್ತೊಂದು ಬಾರಿ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮುಂದಾಗಿದೆ. ಮೇ 3 ರಂದು ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಯಾದ ಸಿಬಿಐ ವಿಚಾರಣೆ ನಡೆಸುತ್ತಿದ್ದು, ಈಗಾಗಲೇ ಹಲವು ಅಧಿಕಾರಿಗಳು ಮತ್ತು ಶಿಕ್ಷಕರನ್ನು ವಶಕ್ಕೆ ಪಡೆದುಕೊಂಡಿದೆ, (ಏಜನ್ಸೀಸ್).