ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ 
ದೇಶ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ಬಾಂಗ್ಲಾ, ನೇಪಾಳದಂತೆ ಭಾರತದಲ್ಲೂ ಜನರಲ್ ಝೆಡ್​ಗೆ ಕ್ರಾಂತಿಗೆ ಮಾಜಿ ಸಿಎಂ ಕೇಜ್ರಿವಾಲ್ ಕರೆ | Ex CM Kejriwal

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳುವಂತೆ ಭಾರತದ ಜನರಲ್​ ಝೆಡ್​ಗೆ ಒತ್ತಾಯಿಸಿರುವ ಆಪ್ ಮುಖ್ಯಸ್ಥ ಮತ್ತು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್(Ex CM Kejriwal), ಬಾಂಗ್ಲಾ ಮತ್ತು ನೇಪಾಳದಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿ ಭಾರತೀಯ ಯುವಕರು ಕ್ರಾಂತಿಯನ್ನು ಕೈಗೊಳ್ಳುವಂತೆ ಕರೆ ನೀಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಮೋದಿ ಸರ್ಕಾರ 2014 ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಒಟ್ಟು 93 ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿವೆ. ಹೆಚ್ಚಿನ ಪ್ರಶ್ನೆ ಪತ್ರಿಕೆ ಸೋರಿಕೆ ಬಿಜೆಪಿ ಸರ್ಕಾರಗಳಲ್ಲಿ ಸಂಭವಿಸಿದೆ. ಹೆಚ್ಚಿನ ಪ್ರಶ್ನೆ ಪತ್ರಿಕೆ ಸೋರಿಕೆ ಘಟನೆಗಳು ಬಿಜೆಪಿ ಆಡಳಿತವಿರುವ ರಾಜ್ಯಗಳಾದ ರಾಜಸ್ಥಾನ, ಯುಪಿ, ಉತ್ತರಾಖಂಡ ಮತ್ತು ಗುಜರಾತ್‌ನಲ್ಲಿ ಸಂಭವಿಸಿವೆ. ಇದು 6 ಕೋಟಿ ಯುವಕರ ಮೇಲೆ ಪರಿಣಾಮ ಬೀರಿದೆ ಎಂದು ಆರೋಪಿಸಿದ್ದಾರೆ.
ಇತ್ತೀಚಿನ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಕೇಂದ್ರಬಿಂದು ರಾಜಸ್ಥಾನ ಎಂದು ವರದಿಗಳು ಬರುತ್ತಿವೆ. ಪ್ರಕರಣದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆಯೇ? ಎಂಬ ಅನುಮಾನ ಮೂಡುತ್ತಿದ್ದು, ಹಾಗಿದ್ದಲ್ಲ, ಸಿಬಿಐ ಯಾವ ರೀತಿ ತನಿಖೆ ಮಾಡಬಹುದು? ನಾನು ಜನರಲ್-ಝಡ್ ಕೇಳಲು ಬಯಸುತ್ತೇನೆ. ಇದು ಮುಂದುವರಿಯಬೇಕೇ? ನೇಪಾಳ-ಬಾಂಗ್ಲಾದೇಶದ ಜನರಲ್-ಝಡ್ ರಸ್ತೆಗಿಳಿದು ತಮ್ಮ ಸರ್ಕಾರಗಳನ್ನು ಬದಲಾಯಿಸಬಹುದಾದರೆ, ನಮ್ಮ ಜನರಲ್-ಝಡ್ ಪತ್ರಿಕೆ ಸೋರಿಕೆ ಘಟನೆಗಳಲ್ಲಿ ಭಾಗಿಯಾಗಿರುವ ಮಂತ್ರಿಗಳನ್ನು ಜೈಲಿಗೆ ಕಳುಹಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ್ದಾರೆ (ಏಜೆನ್ಸೀಸ್).