ರಾಜಭವನ ಮುತ್ತಿಗೆಗೆ ಯತ್ನಿಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಲಾಠಿಚಾರ್ಜ್, ಜಲಫಿರಂಗಿ ಪ್ರಯೋಗ! 
ದೇಶ

ಪಾಟ್ನಾದಲ್ಲಿ ರಣರಂಗವಾದ NEET ಪ್ರತಿಭಟನೆ: ರಾಜಭವನ ಮುತ್ತಿಗೆಗೆ ಯತ್ನ, ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್‌, ಜಲಫಿರಂಗಿ ಪ್ರಯೋಗ! NEET Protest in Patna

ಪ್ರಮುಖ ಮುಖ್ಯಾಂಶಗಳು

  • ಬಿಹಾರದಲ್ಲಿ ಭುಗಿಲೆದ್ದ ನೀಟ್ ಅಕ್ರಮ ಖಂಡನಾ ಪ್ರತಿಭಟನೆ!
  • ರಾಜಭವನ ಮುತ್ತಿಗೆಗೆ ಯತ್ನಿಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಲಾಠಿಚಾರ್ಜ್, ಜಲಫಿರಂಗಿ ಪ್ರಯೋಗ!
  • ರಾಜಭವನ ಚಲೋ ನಡೆಸಿದ ಐಸಾ (AISA) ಕಾರ್ಯಕರ್ತರ ಮೇಲೆ ಬಿಹಾರ ಪೊಲೀಸರ ಅಶ್ರುವಾಯು ಪ್ರಯೋಗ
ಪಾಟ್ನಾ: ಕಳೆದೆರಡು ದಿನಗಳಿಂದ ದೆಹಲಿಯಲ್ಲಿ ನೀಟ್​ ಪರೀಕ್ಷೆ ಅಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಈಗ ಈ ಪ್ರತಿಭಟನೆ ಜ್ವಾಲೆ ಬಿಹರಾವನ್ನು ತಲುಪಿದ್ದು, ಪಾಟ್ನಾದಲ್ಲಿ (NEET Protest in Patna) ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯಾಗಿದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಕೋರಿ ರಾಜಭವನಕ್ಕೆ ಮುತ್ತಿಗೆ ಹಾಕಲಿ ಯತ್ನಿಸಿದ ಹಿನ್ನಲೆಯಲ್ಲಿ ಬಿಹಾರ್​ ಪೊಲೀಸರಿಗೆ ಹಾಗೂ ಪ್ರತಿಭಟನಾಕಾರರ ನಡುವೆ ಬಿರುಸಿನ ವಾತಾವರಣ ಸೃಷ್ಟಿಯಾಗಿದ್ದು, ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್​, ಆಶ್ರುವಾಯು ಪ್ರಯೋಗ ಹಾಗೂ ಜಲಫಿರಂಗಿಗಳ ಪ್ರಯೋಗ ನಡೆಸಲಾಗಿದೆ.

ರಾಜ್​ ಭವನ್​ ಮುತ್ತಿಗೆಗೆ ಯತ್ನ!

ಅಖಿಲ ಭಾರತ ವಿದ್ಯಾರ್ಥಿ ಸಂಘ (AISA) ದ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರು ಪ್ರಾರಂಭದಲ್ಲಿ ಗಾಂಧಿ ಮೈದಾನದಲ್ಲಿ ಸರ್ಕಾರ ವಿರುದ್ಧ, ಶಿಕ್ಷಣ ಸಚಿವರ ವಿರುದ್ಧ ಘೋಷಣೆಯನ್ನು ಕೂಗುತ್ತಾ, ರಾಜೀನಾಮೆಯನ್ನು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ನಂತರ ಈ ಪ್ರತಿಭಟನಾಕಾರರ ಸಮೂಹ, ರಾಜಭವನತ್ತ ಹೊರಡಲು ಪ್ರಾರಂಭಿಸಿದಾಗ, ಪೊಲೀಸರು ಇವರನ್ನು ತಡೆಯಲು ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ಉದ್ವಿಗ್ನ ಗುಂಪು ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಹಿನ್ನಲೆ ಹಾಗೂ ರಕ್ಷಣೆಯ ಹಿನ್ನಲೆಯಲ್ಲಿ ಪೊಲೀಸರು ಲಾಠಿ ಚಾರ್ಜ್​ನ್ನು ನಡೆಸಿದ್ದಾರೆ.
ಲಾಠಿ ಚಾರ್ಜ್​ಗೆ ಬಗ್ಗದ ಹಿನ್ನಲೆ ಆಶ್ರುವಾಯು ಹಾಗೂ ಜಲಫಿರಂಗಿಗಳ ಮೂಲಕ ಪ್ರತಿಭಟನಾಕರರು ರಾಜ್ಯಪಾಲರ ನಿವಾಸ ಪ್ರವೇಶಿಸುವುದನ್ನು ಪೊಲೀಸರು ತಡೆದಿದ್ದಾರೆ. ಸದ್ಯ ಪಾಟ್ನಾದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ರಾಜಧಾನಿಯ ಪ್ರಮುಖ ಸ್ಥಳಗಳಲ್ಲಿ ಪೊಲೀಸರನ್ನು ಹಾಗೂ ಅರೆ ಮಿಲಿಟರಿ ಪಡೆಗಳ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ವಾಂಗ್​​ಚುಕ್​ ಉಪವಾಸ ನಿಲ್ಲಿಸಿ!

ಕಳೆದ 25 ದಿನಗಳಿಂದ ಉಪವಾಸ ಮಾಡುತ್ತಿರುವ ಸೋನಮ್​ ವಾಂಗ್​ಚುಕ್​ ಅವರಲ್ಲಿ ವಿಡಿಯೋ ಮೂಲಕ ಮನವಿ ಮಾಡಿರುವ ದೀಪ್ಕೆ, ಸರ್​, ಈ ದೇಶಕ್ಕೆ ನಿಮ್ಮ ಅಗತ್ಯವಿದೆ, ನಿಮ್ಮ ಜೀವದ ಮೌಲ್ಯ ಈ ಹೋರಾಟಕ್ಕಿಂತ ಹೆಚ್ಚಿದೆ. ಹೀಗಾಗಿ ನೀವು ಈ ಕೂಡಲೇ ಉಪವಾಸವನ್ನು ಕೈಬಿಡಬೇಕೆಂದು ದೀಪ್ಕೆ ವಾಂಗ್​ಚುಕ್​ ಅವರಲ್ಲಿ ಮನವಿ ಮಾಡಿದ್ದಾರೆ. ಅದರೆ, ನಮ್ಮ ಈ ಹೋರಾಟ ಮುಂದುವರಿಯುತ್ತದೆ. ನಮ್ಮ ಬೇಡಿಕೆ ಈಡೇರುವರೆಗೆ ನಮ್ಮ ಹೋರಾಟ ಜಂತರ್​-ಮಂತರ್​ನಲ್ಲಿ ಮುಂದುವರಿಯಲಿದೆ ಎಂದು ದೀಪ್ಕೆ ಹೇಳಿದ್ದಾರೆ, (ಏಜನ್ಸೀಸ್​).