ಕಾಪಿ ಹೊಡೆಯಲು ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟಿದ್ದ ಹೈದರಾಬಾದ್ ವಿದ್ಯಾರ್ಥಿ!
- ಹೈದರಾಬಾದ್‌ನ ನೀಟ್ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಅಕ್ರಮ
- ಪದೇ ಪದೇ ಟಾಯ್ಲೆಟ್‌ಗೆ ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದ ಕಿಲಾಡಿ ಕಿಡ್
- ಕಾಪಿ ಹೊಡೆಯಲು ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟಿದ್ದ ಹೈದರಾಬಾದ್ ವಿದ್ಯಾರ್ಥಿ!
ಹೈದರಾಬಾದ್: ನಿನ್ನೆ (ಭಾನುವಾರ, ಜೂನ್.21) ದೇಶದೆಲ್ಲಡೆ ನೀಟ್ ಯುಜಿ ಪರೀಕ್ಷೆಯ ಮರು ಪರೀಕ್ಷೆ ನಡೆಸಲಾಗಿದ್ದು, ಈ ಭಾರಿ ಪರೀಕ್ಷೆ ಬಹಳ ಕಟ್ಟುನಿಟ್ಟಾಗಿ ನಡೆದಿದೆ ಎಂದು ಸಚಿವಾಲಯ ತಿಳಿಸಿದೆ.
ಆದರೆ ಹೈದರಾಬಾದ್ನಲ್ಲಿ 18 ವರ್ಷದ ಹುಡುಗನೊಬ್ಬ ಪರೀಕ್ಷಾ ಕೇಂದ್ರದ ಶೌಚಾಲಯದಲ್ಲಿ ಮೊಬೈಲ್ ಪೋನ್ ಅಡಗಿಸಿಟ್ಟು, ನಂತರ ಪೊಲೀಸರಲ್ಲಿ ತಗಲಾಕೊಂಡಿರುವ (NEET Cheating in Hyderabad) ಘಟನೆ ವರದಿಯಾಗಿದೆ.
ಶೌಚಾಲಯದಲ್ಲಿ ಮೊಬೈಲ್!
ಈ ಕೃತ್ಯವೆಸಗಿರುವ ವಿದ್ಯಾರ್ಥಿ ಹೈದರಾಬಾದಿನ ಅಚ್ಚಂಪೇಟ್ ನಿವಾಸಿ ಎಂದು ತಿಳಿದುಬಂದಿದೆ. ಈ ಘಟನೆಯು ಜಿಲ್ಲಾ ಪರಿಷತ್ ಪ್ರೌಢಶಾಲೆ (ZPHS) ರಾಗಣ್ಣಗುಡ ಎಂಬಲ್ಲಿ ನಡೆದಿದೆ.
ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳನ್ನು ಕಠಿಣ ತಪಾಸಣೆಗೆ ಒಳಪಡಿಸಿ ನಂತರ ಒಳ ಬಿಡುತ್ತಾರೆಂದು ತಿಳಿದ ಹುಡುಗ, ಬೆಳಿಗ್ಗೆ 7 ಗಂಟೆ ಹೊತ್ತಿಗೆ ಶಾಲೆಯ ಕಂಪೌಂಡ್ನ್ನು ಜಿಗಿದು ವೆಂಟಿಲೇಟರ್ ಮೂಲಕ ಶೌಚಾಲಯವನ್ನು ತಲುಪಿದ್ದಾನೆ.
ನಂತರ ಮೊಬೈಲ್ನ್ನು ಅವಿತಿಟ್ಟು, ಪರೀಕ್ಷೆಗೆಯಲ್ಲಿ ಗೊಂದಲ ಬಂದಾಗ ಇಲ್ಲಿಗೆ ಬಂದು ಉತ್ತರ ಹುಡಿಕಿಕೊಂಡು ಹೋಗುವುದು ಇತನ ಫ್ಲಾನ್ ಆಗಿತ್ತು. ಆದರೆ ಈ ವಿದ್ಯಾರ್ಥಿ ನಿರಂತರವಾಗಿ ಶೌಚಾಲಯಕ್ಕೆ ಹೋಗುವುದನ್ನು ಗಮನಿಸಿದ ಪೊಲೀಸರು ಶೌಚಾಲಯಕ್ಕೆ ದಿಢೀರ್ ಎಂಟ್ರಿ ಕೊಟ್ಟಾಗ ಈ ಹುಡುಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು!
ವಿದ್ಯಾರ್ಥಿಯನ್ನು ಸೆರೆ ಹಿಡಿದ ನಂತರ ಅವನ ಮೊಬೈಲನ್ನು ವಶ ಪಡಿಸಿಕೊಂಡು, ಯಾವುದಾದರೂ ಚಿಟಿಂಗ್ ಅಪ್ಲಿಕೇಶನ್ ಬಳಿಸಿದ್ದಾನೆಯೇ? ಅಥವಾ ಯಾರಾದರೂ ಇವನಿಗೆ ಉತ್ತರಗಳನ್ನು ಮೊದಲೇ ನೀಡಿದ್ದರೆ? ಎಂದೆಲ್ಲಾ ತನಿಖೆ ಮಾಡಿದ್ದಾರೆ.
ಅದರೆ ಈ ಹುಡುಗ ಗೂಗಲ್ನಲ್ಲಿ ಉತ್ತರಗಳನ್ನು ಹುಡುಕಲು ಪ್ರಯತ್ನಿಸಿದ್ದಾನೆಂದು ತಿಳಿದುಬಂದಿದೆ. ಸದ್ಯ ಈ ವಿದ್ಯಾರ್ಥಿ ಮೇಲೆ ಪರೀಕ್ಷಾ ಅಕ್ರಮ ಕಾಯ್ದೆ ಹಾಗೂ ವಂಚನೆಯ ಆರೋಪದ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ, (ಏಜನ್ಸೀಸ್).