NEET 2026 paper leak: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವು ವಿದ್ಯಾರ್ಥಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಶಿಕ್ಷಣ ಇಲಾಖೆಯ ಲೋಪದೋಷಗಳ ವಿರುದ್ಧ ಹೋರಾಡಲು, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಜಿರಳೆ ಪಕ್ಷ ಪ್ರತಿಭಟನೆಗೆ ಸಜ್ಜಾಗುತ್ತಿರುವ ಹೊತ್ತಲ್ಲೇ ಮತ್ತೊಂದು ಅಘಾತಕಾರಿ ವಿಚಾರವೊಂದು ಹೊರಬಿದ್ದಿದೆ.
ಗ್ಯಾರಂಟಿ ಸ್ಕೋರ್ ಕೊಡಿಸ್ತೇವೆ
ಹೌದು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದ ತನಿಖೆಯು ಸದ್ಯ ಸಿಬಿಐ ಕೈನಲ್ಲಿದೆ. ಈ ಹೊತ್ತಲೇ ಆನ್ಲೈನ್ಲ್ಲಿ ಮತ್ತೊಂದು ವಂಚಕರ ಜಾಲ ಸೃಷ್ಟಿಯಾಗಿದೆ. ಜೂನ್21ರಂದು ನಿಗದಿಯಾಗಿದ್ದ ನೀಟ್ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಒದಗಿಸುವುದಾಗಿ ಲಕ್ಷಾಂತರ ರೂಪಾಯಿಗಳ ಬದಲಿಗೆ 'ಗ್ಯಾರಂಟಿ ಸ್ಕೋರ್' ಕೊಡಿಸುವುದಾಗಿ ಹಲವು ಟೆಲಿಗ್ರಾಮ್ನಲ್ಲಿ ಕೆಲವು ಚಾನೆಲ್ಗಳು ಆಮಿಷವೊಡ್ಡುತ್ತಿವೆ ಎನ್ನುವ ಆರೋಪ ಕೇಳಿಬಂದಿದೆ.
ಯುವಕನ ಟ್ವೀಟ್ನಲ್ಲಿ ಏನಿತ್ತು?
ಯುವಕರೊಬ್ಬರು ಎಕ್ಸ್ನಲ್ಲಿ ಮೂರು ಟೆಲಿಗ್ರಾಂ ಅಕೌಂಟ್ನ್ನು ಶೇರ್ ಮಾಡಿ, ಈ ಖಾತೆಗಳನ್ನು ಒಬ್ಬ ವ್ಯಕ್ತಿ ನಿರ್ವಹಿಸುತ್ತಿದ್ದಾನೆ. ಈತ ಟೆಲಿಗ್ರಾಮ್ನಲ್ಲಿ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮಾರಾಟ ಮಾಡುತ್ತಿದ್ದಾನೆ ಎಂದು ಸೈಬರ್ ಕ್ರೈಂ ಪೊಲೀಸರರಿಗೆ, ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ(ಎನ್ಟಿಎ)ಗೆ ಟ್ಯಾಗ್ ಮಾಡಿ ವಿಷಯ ಮುಟ್ಟಿಸಿದ್ದರು.
ಎನ್ಟಿಎ ಹೇಳಿದ್ದೇನು?
ವಿಚಾರವು ಗಂಭೀರವಾಗಿ ತಿರುವು ಪಡೆದುಕೊಳ್ಳುವ ಮುನ್ನ ಮಾತನಾಡಿದ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ(ಎನ್ಟಿಎ) ಈ ಪ್ರಕರಣವನ್ನು ಸೈಬರ್ ಕ್ರೈಂ ಪೊಲೀಸರಿಗೆ ವರ್ಗಾಯಿಸಲಾಗಿದೆ. ಅವರು ನಿಖರವಾಗಿ ತನಿಖೆ ನಡೆಸಿ, ವಂಚಕರನ್ನು ಶೀಘ್ರವೇ ಪತ್ತೆ ಹಚ್ಚಲಿದ್ದಾರೆ ಎಂದು ಹೇಳಿದೆ.
ಪರೀಕ್ಷೆ ರದ್ದು
ಮೇ.3ರಂದು ನೀಟ್ ಯುಜಿ ಪರೀಕ್ಷೆಯ ಪ್ರಶ್ನೆ ಒಪತ್ರಿಕೆ ಸೋರಿಕೆಯಾಗಿದೆ ಎಂಬುದು ಸಾಬೀತಾತದ ಹಿನ್ನೆಲೆ ಇಡೀ ದೇಶದಲ್ಲಿ ನೀಟ್ ಪರೀಕ್ಷೆ ರದ್ದು ಗೊಳಸಲಾಯಿತು. ಅದರ ಜೊತೆಗೆ ಅಕ್ರಮದಲ್ಲಿ ಭಾಗಿಯಾದವರನ್ನು ಶೀಘ್ರವೇ ಬಂಧಿಸಿ ಕ್ರಮಕೈಗೊಳ್ಳಲಾಯಿತು. ಆದರೂ ಸಹ ಇಲ್ಲಿಯವರೆಗೂ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯುವ ಸವಾಲು ಎದುರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ವಿದ್ಯಾರ್ಥಿನಿ ಆತ್ಮಹತ್ಯೆ
ಜೂನ್ 3ರಂದು ಮಧ್ಯಪ್ರದೇಶದ ಹೊಸ ಮೌಗಂಜ್ ಜಿಲ್ಲೆಯ ಮಗನಿಯಾ ಗ್ರಾಮದ ಆಕಾಂಕ್ಷಾ ಚತುರ್ವೇದಿ ಎಂಬ ಅಭ್ಯರ್ಥಿ ಸ್ವಾರಿ ಅಪ್ಪ ಇನ್ನು ನೀಟ್ ಪರೀಕ್ಷೆ ಬರೆಯುವ ತಾಳ್ಮೆ ನನ್ನಲ್ಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಆಕಾಂಕ್ಷ ಅವರ ತಂದೆ ರೈತರಾಗಿದ್ದು ಸಾಲ ಮಾಡಿ ಆಕೆಯನ್ನು ಓದಿಸುತ್ತಿದ್ದರು ಎನ್ನಲಗಿದೆ