Love 
ದೇಶ

ಮನೆಯವರಿಗೆ ಹೆದರಿ ಪ್ರಿಯಕರನನ್ನು ಪೆಟ್ಟಿಗೆಯಲ್ಲಿ ಕೂಡಿಹಾಕಿದ ಯುವತಿ; ಉಸಿರುಗಟ್ಟಿ ಸಾಯುವಂತಾದ ಯುವಕ..Love

ಉತ್ತರಪ್ರದೇಶ: ( Love) ಪ್ರಿಯಕರನನ್ನು ಭೇಟಿಯಾಗಲು ಮನೆಗೆ ಕರೆಸಿಕೊಂಡ ಯುವತಿ, ಅನಿರೀಕ್ಷಿತವಾಗಿ ಮನೆಯವರು ಬಂದಾಗ ಆತನನ್ನು ರಕ್ಷಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿಸಿದ ಪ್ರಸಂಗ ಕಾನ್ಪುರದಲ್ಲಿ ನಡೆದಿದೆ.
ಕಾನ್ಪುರದ ಯುವಕನೊಬ್ಬ ತನ್ನ ಪ್ರಿಯತಮೆಯನ್ನು ಭೇಟಿಯಾಗಲು ಆಕೆಯ ಮನೆಗೆ ಹೋಗಿದ್ದನು. ಆ ಸಮಯದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಯುವತಿಯ ಕುಟುಂಬ ಸದಸ್ಯರು ಮನೆಗೆ ವಾಪಸ್ ಬಂದಿದ್ದಾರೆ. ಇದರಿಂದ ಗಾಬರಿಗೊಂಡ ಯುವತಿ, ತನ್ನ ಪ್ರಿಯಕರ ಮನೆಯವರ ಕಣ್ಣಿಗೆ ಬೀಳಬಾರದು ಎಂಬ ಆತುರದಲ್ಲಿ ಆತನನ್ನು ಮನೆಯಲ್ಲಿದ್ದ ದೊಡ್ಡದೊಂದು ಕಬ್ಬಿಣದ ಪೆಟ್ಟಿಗೆಯ ಒಳಗೆ ಅಡಗಿಸಿ ಹೊರಗಿನಿಂದ ಲಾಕ್ ಮಾಡಿದ್ದಾಳೆ.
ಯುವತಿಯ ಮನೆಯವರು ಅಲ್ಲಿಂದ ಹೊರಹೋಗಲು ಅಥವಾ ಮಲಗಲು ಬಹಳ ಸಮಯ ತೆಗೆದುಕೊಂಡಿದ್ದಾರೆ. ಈ ನಡುವೆ ಪೆಟ್ಟಿಗೆಯ ಒಳಗಿದ್ದ ಯುವಕನಿಗೆ ಗಾಳಿಯ ಸಂಚಾರವಿಲ್ಲದೆ ಉಸಿರಾಡಲು ತೊಂದರೆಯಾಗಿದೆ. ಉಸಿರುಗಟ್ಟಿ ಪ್ರಾಣಾಪಾಯದ ಸ್ಥಿತಿಗೆ ತಲುಪಿದ ಯುವಕ ಗಾಬರಿಯಿಂದ ಪೆಟ್ಟಿಗೆಯ ಒಳಗಿನಿಂದಲೇ ಸೌಂಡ್ ಮಾಡಿದ್ದಾನೆ ಮತ್ತು ಕಿರುಚಿದ್ದಾನೆ.
ಪೆಟ್ಟಿಗೆಯಿಂದ ವಿಚಿತ್ರ ಶಬ್ದ ಬರುತ್ತಿರುವುದನ್ನು ಗಮನಿಸಿದ ಮನೆಯವರು ಕಳ್ಳರಿರಬಹುದೆಂದು ಶಂಕಿಸಿ ಪೆಟ್ಟಿಗೆಯನ್ನು ತೆರೆದಿದ್ದಾರೆ. ಪೆಟ್ಟಿಗೆಯನ್ನು ತೆರೆದಾಗ ಒಳಗಡೆ ಅರ್ಧಪ್ರಜ್ಞಾವಸ್ಥೆಯಲ್ಲಿದ್ದ ಯುವಕನನ್ನು ನೋಡಿ ತಕ್ಷಣವೇ ಆತನನ್ನು ಪೆಟ್ಟಿಗೆಯಿಂದ ಹೊರತೆಗೆದು ಪ್ರಥಮ ಚಿಕಿತ್ಸೆ ನೀಡಲಾಗಿದೆ.ಯುವಕ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಈ ಘಟನೆಯ ನಂತರ ಗ್ರಾಮಸ್ಥರು ಮತ್ತು ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, "ರೋಮ್ಯಾನ್ಸ್ ಅತಿರೇಕಕ್ಕೆ ಹೋದರೆ ಪ್ರಾಣಕ್ಕೆ ಕುತ್ತು ಬರಬಹುದು" ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.