ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ತೊರೆದು ಯಾರಿಗೂ ಗೊತ್ತಿಲ್ಲದ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾದಲ್ಲಿ ವಿಲೀನವಾದ 20 ಬಂಡಾಯ ಸಂಸದರ ವಿರುದ್ಧ ಮತ್ತೊಮ್ಮೆ ಕಿಡಿಕಾರಿರುವ ಸಂಸದೆ ಮಹುವಾ ಮೊಯಿತ್ರಾ(Mahua Moitra), ಭಾನುವಾರ(ಜೂ. 21) ಎನ್‌ಸಿಪಿಐ ಫೇಸ್‌ಬುಕ್ ಪುಟದೊಂದಿಗೆ ಬಂಡಾಯ ಸಂಸದರನ್ನೂ ದ್ರೋಹಿಗಳೆಂದು ಕರೆದು ವ್ಯಂಗ್ಯವಾಡಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಎನ್‌ಸಿಪಿಐ ಹೊಸದಾಗಿ ರಚಿಸಲಾದ ಫೇಸ್‌ಬುಕ್ ಪುಟದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡು ಪೋಸ್ಟ್ ಮಾಡಿರುವ ಅವರು, AITC ಚಿಹ್ನೆಗಳ ಮೇಲೆ ಆಯ್ಕೆಯಾದ 20 ಸಂಸದರ ಹೊಸ ಪಕ್ಷವಾದ NCPI ಅನ್ನು ಪರಿಚಯಿಸಲಾಗುತ್ತಿದೆ. ಅದರ FB ಪುಟವು 'ಇದು ನಮ್ಮ ಸಮಾಜದ ಬಡ ಜನರಿಗೆ ಸಹಾಯ ಮಾಡುತ್ತದೆ' ಎಂದು ಹೇಳುತ್ತದೆ. ಈ 20 ಬಡವರಲ್ಲದ ದೇಶದ್ರೋಹಿಗಳಿಗೂ ಸಹಾಯ ಮಾಡುವಲ್ಲಿ ಅದು ಯಶಸ್ವಿಯಾಗುತ್ತದೆ ಎಂದು ನಿಜವಾಗಿಯೂ ಭಾವಿಸುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.
ಮೊಯಿತ್ರಾಗೆ ಕಾಕೋಲಿ ಘೋಷ್ ತಿರುಗೇಟು
ಟಿಎಂಸಿ ಮಹುವಾ ಮೊಯಿತ್ರಾ ಟ್ವೀಟ್ಗೆ ಬಂಡಾಯ ಸಂಸದೆ ಕಾಕೋಲಿ ದಸ್ತಿದಾರ್ ಘೋಷ್ RG Kar ವಿವಾದವನ್ನು ಉಲ್ಲೇಖಿಸುವ ಮೂಲಕ ನೇರವಾಗಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ನೀವು #RGKar ನಲ್ಲಿ ಪಕ್ಷದ ಭಾಗವಾಗಿದ್ದೀರಾ? ಬಡ ರೋಗಿಗಳಿಗೆ ಔಷಧ ಖರೀದಿಗೆ ಮೀಸಲಾದ ಹಣವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ವಿರೋಧಿಸಿ ಅಭಯಾ ಅವರ ಅಂತ್ಯಕ್ರಿಯೆಯ ದಿನದಂದು? ನೀವು ಅವರ ಪರವಾಗಿ ನಿಲ್ಲುತ್ತೀರೋ ಇಲ್ಲವೋ ಎಂದು ಕೇಳಿದ್ದಾರೆ (ಏಜೆನ್ಸೀಸ್).