- ಇಸ್ರೇಲ್-ಅಮೆರಿಕ ಯುದ್ಧದಿಂದ ತೈಲ ಬಿಕ್ಕಟ್ಟು
- ಔಟ್ ಆಫ್ ಸ್ಟಾಕ್ ಬೋರ್ಡ್ಗಳ ಮಧ್ಯೆ ದಿಢೀರ್ ಇಂಧನ ಬೆಲೆ ಏರಿಕೆ
- ನಯಾರ ಸಂಸ್ಥೆಯಿಂದ ಬೆಲೆ ಏರಿಕೆಯ ನಿರ್ಧಾರ
Petrol Price Hike: ಇಸ್ರೇಲ್-ಇರಾನ್ ಯುದ್ಧದಿಂದ ಮಧ್ಯಪ್ರಾಚ್ಯ ತೀವ್ರ ಉದ್ವಿಗ್ನೊಂಡಿದ್ದು, ಹಾರ್ಮುಜ್ ಜಲಸಂಧಿ ಕ್ಲೋಸ್ ಆಗಿದೆ. ಭಾರತ ಸೇರಿದಂತೆ ಕೆಲವೇ ಕೆಲವು ದೇಶಗಳ ತೈಲ ಹಡಗುಗಳಿಗೆ ಇರಾನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದೇ ಆದರೂ ದೇಶದಲ್ಲಿ ಗ್ಯಾಸ್ ಬಿಕ್ಕಟ್ಟು ಮತ್ತು ಇಂಧನ ಪರಿಸ್ಥಿತಿ ಸುಧಾರಣೆ ಆಗಿದೆ ಎನ್ನುವಂತೆ ತೋರುತ್ತಿಲ್ಲ. ಇದಕ್ಕೆ ಹಲವು ಬೆಳವಣಿಗೆಗಳೇ ಜ್ವಲಂತ ಸಾಕ್ಷಿ.
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ಗಳ ಸ್ಟಾಕ್ ನಮ್ಮಲ್ಲಿದೆ. ಅದರ ಅಭಾವ ಇನ್ನೂ ಕಾಡಿಲ್ಲ. ಮತ್ತೊಂದೆಡೆ, ಇಂಧನ ಕೂಡ ಕೊರತೆಯಾಗಿಲ್ಲ. ಜನರು ಈ ವಿಷಯದ ಬಗ್ಗೆ ಆತಂಕ ಪಡುವುದು ಬೇಡ ಮತ್ತು ಬಂಕ್ಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಪೆಟ್ರೋಲ್-ಡಿಸೇಲ್ ಹಾಕಿಸಿಕೊಳ್ಳುವ ಜಟಾಪಟಿಯೂ ಬೇಡ ಎಂದು ತಿಳಿಸಿದೆ. ಇಷ್ಟಾದರೂ ಸಹ ಹಲವು ಬಂಕ್ಗಳಲ್ಲಿ ಔಟ್ ಆಫ್ ಸ್ಟಾಕ್ ಎಂಬ ಬೋರ್ಡ್ಗಳು ಕಾಣತೊಡಗಿವೆ. ಇದರ ಮಧ್ಯೆಯೇ, ನಯಾರಾ ಎನರ್ಜಿ ಸಂಸ್ಥೆಯಿಂದ ಇಂಧನ ಬೆಲೆಯನ್ನು ದಿಢೀರ್ ಹೆಚ್ಚಿಸಲಾಗಿದೆ.
ಪಾಕಿಸ್ತಾನ, ನೇಪಾಳ ಮತ್ತು ಶ್ರೀಲಂಕಾದಂತಹ ದೇಶಗಳಲ್ಲಿ ಈಗಾಗಲೇ ಇಂಧನ ಕೊರತೆ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದ್ದು, ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಕೊನೆಗೊಳ್ಳದ ಹಿನ್ನೆಲೆ ನಯಾರಾ ಸಂಸ್ಥೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಸಿದೆ ಎಂದು 'ಹಿಂದೂಸ್ಥಾನ ಟೈಮ್ಸ್' ತನ್ನ ವರದಿಯಲ್ಲಿ ತಿಳಿಸಿದೆ. ಈ ಮೂಲಕ ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ನೂತನ ದರವು ಶುಕ್ರವಾರ (ಮಾ.27) ದೇಶಾದ್ಯಂತ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಪ್ರಸ್ತುತ ಪೆಟ್ರೋಲ್ ದರ ಎಷ್ಟಿದೆ? (ಪ್ರಮುಖ ರಾಜ್ಯಗಳು)
- ಹೈದರಾಬಾದ್ 107.46 ರೂ. (ಪ್ರತಿ ಲೀ)
- ಕೋಲ್ಕತ 105.41 ರೂ.
- ಮುಂಬೈ 103.54 ರೂ.
- ಬೆಂಗಳೂರು 102.92 ರೂ.
- ಭುವನೇಶ್ವರ 101.19 ರೂ.
- ಚೆನ್ನೈ 100.80 ರೂ.
- ಗುರಗಾಂವ್ 95.57 ರೂ.
- ನೋಯ್ಡಾ 95.16 ರೂ.
ಪ್ರಸ್ತುತ ಡಿಸೇಲ್ ದರ ಎಷ್ಟಿದೆ? (ಪ್ರಮುಖ ರಾಜ್ಯಗಳು)
- ಹೈದರಾಬಾದ್ 95.70 ರೂ. (ಪ್ರತಿ ಲೀ)
- ಭುವನೇಶ್ವರ 92.77 ರೂ.
- ಚೆನ್ನೈ 92.39 ರೂ.
- ಕೋಲ್ಕತ 92.02 ರೂ.
- ಬೆಂಗಳೂರು 90.99 ರೂ.
- ಮುಂಬೈ 90.03 ರೂ.
- ನೋಯ್ಡಾ 88.31 ರೂ.
ಕಂಪನಿಯು ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 5.30 ರೂ. ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 3 ರೂ. ಹೆಚ್ಚಿಸಿದೆ. ದೇಶಾದ್ಯಂತ ಸುಮಾರು 6,500ಕ್ಕೂ ಅಧಿಕ ಪೆಟ್ರೋಲ್ ಪಂಪ್‌ಗಳನ್ನು ಹೊಂದಿರುವ ನಯಾರಾ ಸಂಸ್ಥೆ, 2025ರಲ್ಲಿ 450,000 ಟನ್ ಪಾಲಿಪ್ರೊಪಿಲೀನ್ ಸ್ಥಾವರದೊಂದಿಗೆ ಪೆಟ್ರೋಕೆಮಿಕಲ್ಸ್ ವಲಯವನ್ನು ಪ್ರವೇಶಿಸಿತು. ಈ ಮೊದಲು ಎಸ್ಸಾರ್ ಆಯಿಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಂಪನಿ, ಈಗ ನಯಾರಾ ಎನರ್ಜಿ ಆಗಿ ಬೆಳೆದು ನಿಂತಿದೆ,(ಏಜೆನ್ಸೀಸ್).