ರೋಹ್ಟಕ್: ಹರಿಯಾಣದ ರೋಹ್ಟಕ್ನಲ್ಲಿ ಅಭ್ಯಾಸದ ಸಮಯದಲ್ಲಿ ಕಂಬ ಕಟ್ಟಾಗಿ ಎದೆಯ ಮೇಲೆ ಬಿದ್ದು, 16 ವರ್ಷದ ರಾಷ್ಟ್ರೀಯ ಮಟ್ಟದ ಬಾಸ್ಕೆಟ್ ಬಾಲ್(basketball player) ಆಟಗಾರ ಮಂಗಳವಾರ(ನ. 25) ದಾರುಣವಾಗಿ ಮೃತಪಟ್ಟಿದ್ದಾನೆ. ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ.
ಹಾರ್ದಿಕ್ ಮೃತಪಟ್ಟ ಬಾಸ್ಕೆಟ್ ಬಾಲ್ ಆಟಗಾರ. ನಿನ್ನೆ ಲಖನ್ ಮಜ್ರಾದ ಕೋರ್ಟ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ, ಬಾಲ್ ತೆಗೆದುಕೊಂಡು ಕಂಬಕ್ಕೆ ಹಾರಿ ಹಾಕುವಾಗ ಕಂಬವು ಮುಂದಕ್ಕೆ ಬಾಗಿ ಕಟ್ ಆಗಿ ಎದೆ ಮೇಲೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಸ್ನೇಹಿತರು ಮೈದಾನಕ್ಕೆ ಧಾವಿಸಿ ಸಹಾಯ ಮಾಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಸಂವಿಧಾನ ಬಡವರ ರಕ್ಷಣಾ ಗುರಾಣಿ; ಅದನ್ನು ರಕ್ಷಿಸುವುದು ನನ್ನ ಕರ್ತವ್ಯ; ರಾಹುಲ್ ಗಾಂಧಿ | Rahul Gandhi
ಘಟನೆಯ ಮನ ಕಲಕುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಖಲಾಗಿದೆ. ಹಾರ್ದಿಕ್ ಕೋರ್ಟ್‌ನಲ್ಲಿ ಒಬ್ಬಂಟಿಯಾಗಿ ಅಭ್ಯಾಸ ಮಾಡುತ್ತಿದ್ದು, ಆತನು ಮೂರು ಪಾಯಿಂಟ್ ರೇಖೆಯಿಂದ ಮಧ್ಯದಲ್ಲಿ ಕಂಬವಿರುವ ಅರ್ಧವೃತ್ತದಿಂದ ಓಡಿ ಜಿಗಿದು ಬುಟ್ಟಿಯನ್ನು ಮುಟ್ಟುತ್ತಾನೆ. ಎರಡು ಬಾರಿ ಸೇಮ್ ಜಿಗಿದು ಮುಟ್ಟು ಬಾಲ್ ಹಾಕುತ್ತಾನೆ. ಅದೇ ರೀತಿ ಮೂರನೇ ಬಾರಿ ಮಾಡಿದಾಗ ಕಂಬ ಕಟ್ಟಾಗಿ ಮೈಮೇಲೆ ಬಿದ್ದಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಮರಣೋತ್ತರ ಬಳಿಕ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಪ್ರಕರಣ ದಾಖಲಿಸಲಾಗಿದೆ (ಏಜೆನ್ಸೀಸ್).