ಭಾರತದ ಪ್ರಧಾನಿ ನರೇಂದ್ರ ಮೋದಿ (ಚಿತ್ರ Instagram) 
ದೇಶ

ಸೋಷಿಯಲ್ ಮೀಡಿಯಾದಲ್ಲಿ 'ನಮೋ' ಸುನಾಮಿ: ವಿಶ್ವದ ಟಾಪ್-5 ಲೀಡರ್ಸ್ ಫಾಲೋವರ್ಸ್ ಲಿಸ್ಟ್ ಒಂದು ಕಡೆ, ಮೋದಿ ಕ್ರೇಜ್ ಇನ್ನೊಂದು ಕಡೆ! Narendra Modi

ಪ್ರಮುಖ ಮುಖ್ಯಾಂಶಗಳು

  • ನರೇಂದ್ರ ಮೋದಿ ಗುರುವಾರ (ಫೆ26) ಸಾಮಾಜಿಕ ಜಾಲತಾಣ ಲೋಕದಲ್ಲಿ ಹೊಸ ಮೈಲುಗಲ್ಲಿಗೆ ಹೆಜ್ಜೆಯನ್ನಿಟ್ಟಿದ್ದಾರೆ
  • ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 100 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ ವಿಶ್ವದ ಮೊದಲ ರಾಜಕಾರಣಿ
  • ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಸಕ್ರಿಯರಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರನ್ನು ಹಿಂದಿಕ್ಕಿದ ಮೋದಿ
  • ಪ್ರಧಾನಿ ಮೋದಿಯವರ ಫಾಲೋವರ್ಸ್​ ರೇಟಿಂಗ್​ ವಿಶ್ವದಲ್ಲೇ ಅತ್ಯಧಿಕವಾಗಿದ್ದು, ಶೇ. 70 ರಷ್ಟನ್ನು ಹೊಂದಿದ್ದಾರೆ
Narendra Modi: ಭಾರತದ ಪ್ರಧಾನಿ ನರೇಂದ್ರ ಮೋದಿ ಗುರುವಾರ (ಫೆ26) ಸಾಮಾಜಿಕ ಜಾಲತಾಣ ಲೋಕದಲ್ಲಿ ಹೊಸ ಮೈಲುಗಲ್ಲಿಗೆ ಹೆಜ್ಜೆಯನ್ನಿಟ್ಟಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 100 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ ವಿಶ್ವದ ಮೊದಲ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪ್ರಧಾನಿ ಮೋದಿ, ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಸಕ್ರಿಯರಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗಿಂತಲೂ ಎರಡು ಪಟ್ಟು ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿರುವುದು ಇಲ್ಲಿ ಗಮನಿಸಬೇಕಾದ ಸಂಗತಿ.
ಟ್ರಂಪ್ 43.2 ಮಿಲಿಯನ್ ಫಾಲೋವರ್ಸ್​ ಹೊಂದಿದ್ದರೆ, ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ 15 ಮಿಲಿಯನ್, ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ 14.4 ಮಿಲಿಯನ್, ಟರ್ಕಿಶ್ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ 11.6 ಮಿಲಿಯನ್, ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲೀ 6.4 ಮಿಲಿಯನ್ ಫಾಲೋವರ್ಸ್​ಗಳನ್ನು ಪಡೆದುಕೊಂಡಿದ್ದಾರೆ.
ಭಾರತದ ರಾಜಕೀಯ ನಾಯಕರ ಇನ್‌ಸ್ಟಾಗ್ರಾಮ್ ಜನಪ್ರಿಯತೆಯನ್ನು ಗಮನಿಸಿದಾಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ 16.1 ಮಿಲಿಯನ್​, ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ 12.6 ಮಿಲಿಯನ್​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.
ಪ್ರಧಾನಿ ಮೋದಿಯವರ ಫಾಲೋವರ್ಸ್​ ರೇಟಿಂಗ್​ ವಿಶ್ವದಲ್ಲೇ ಅತ್ಯಧಿಕವಾಗಿದೆ. ಸ್ಟ್ಯಾಟಿಸ್ಟಾ ಪ್ರಕಾರ, ಮೋದಿ ಅವರು ರೇಟಿಂಗ್​ನಲ್ಲಿ ಶೇ. 70 ರಷ್ಟಿದ್ದರೆ, ಜಪಾನ್​ ಪ್ರಧಾನಿ ಸನೇ ತಕೈಚಿ ಶೇ. 63,  ಜೆಕಿಯಾದ ಆಂಡ್ರೆಜ್ ಬಾಬಿ ಶೇ. 60 ರಷ್ಟಿದೆ.
ದಕ್ಷಿಣ ಕೊರಿಯಾದ ನಾಯಕಿ ಲೀ ಜೇ-ಮ್ಯುಂಗ್ ಶೇ. 57, ಸ್ವಿಟ್ಜರ್ಲೆಂಡ್‌ನ ಕರಿನ್ ಕೆಲ್ಲರ್-ಸುಟರ್ ಶೇ. 56, ಕೆನಡಾದ ಮಾರ್ಕ್ ಕಾರ್ನಿ ಶೇ.50, ಆಸ್ಟ್ರೇಲಿಯಾದ ಆಂಥೋನಿ ಅಲ್ಬನೀಸ್ ಶೇ 45. ನಾರ್ವರಿಯ ಜೋನಾಸ್ ಗಹರ್ ಸ್ಟೋರ್ ಶೇ.45, ಮೆಕ್ಸಿಕೊದ ಕ್ಲೌಡಿಯಾ ಶೀನ್‌ಬಾಮ್ ಶೇ.45, ಟ್ರಂಪ್, ಡ ಸಿಲಾ ಶೇ.43 ಹೊಂದಿದ್ದರೆ, ಇಟಲಿಯ ಜಾರ್ಜಿಯಾ ಮೆಲೋನಿ ಶೇ. 41 ರಷ್ಟು ಫಾಲೋವರ್ಸ್​ನ್ನು ಹೊಂದಿದ್ದಾರೆ.

ಪ್ರಧಾನಿ ಮೋದಿ ಇಸ್ರೇಲ್ ಭೇಟಿ

 ನರೇಂದ್ರ ಮೋದಿ ಮಧ್ಯಪ್ರಾಚ್ಯ ರಾಷ್ಟ್ರಕ್ಕೆ ಎರಡು ದಿನಗಳ ಭೇಟಿಗಾಗಿ pfrsftut ಇಸ್ರೇಲ್‌ನಲ್ಲಿದ್ದಾರೆ. ಬುಧವಾರ (ಫೆ.25) ರಂದು ಇಸ್ರೇಲಿ ಸಂಸತ್ತಿನ ನೆಸ್ಸೆಟ್‌ನ ಅತ್ಯುನ್ನತ ಗೌರವವಾದ "ಸ್ಪೀಕರ್ ಆಫ್ ದಿ ನೆಸ್ಸೆಟ್ ಪದಕ"ವನ್ನುನೀಡಲಾಯಿತು. ಇದು ಭಾರತ ಮತ್ತು ಇಸ್ರೇಲ್​ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸಿಕೊಳ್ಳಲು ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೆಸ್ಸೆಟ್​ ಅನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧ ಕೇವಲ ರಾಜತಾಂತ್ರಿಕವಲ್ಲ, ಅದು ಸಹಸ್ರಾರು ವರ್ಷಗಳ ಇತಿಹಾಸ ಹೊಂದಿದೆ ಎಂದು ಬಣ್ಣಿಸಿದ್ದಾರೆ. ಆದಾಗ್ಯೂ, ಬೈಬಲ್‌ನ ಹಳೆಯ ಒಡಂಬಡಿಕೆಯ ಭಾಗವಾದ 'ಎಸ್ತರ್ ಪುಸ್ತಕ' ದಲ್ಲಿ ಭಾರತವನ್ನು 'ಹೊಡು' ಎಂದು ಉಲ್ಲೇಖಿಸುತ್ತದೆ. ಇದು ಪ್ರಾಚೀನ ಕಾಲದಲ್ಲಿ ಭಾರತದೊಂದಿಗೆ ವ್ಯಾಪಾರವನ್ನು ಟಾಲ್ಮಡ್ ದಾಖಲಿಸುತ್ತದೆ ಎಂದು ಹೇಳಿದರು (ಏಜೆನ್ಸೀಸ್​).