Narendra Modi (ಚಿತ್ರ X) 
ದೇಶ

ದಾಖಲೆಯ ಮತದಾನದ ಬೆನ್ನಲ್ಲೇ ಗಂಗಾ ಮಾತೆಗೆ ಶರಣೆಂದ ಪ್ರಧಾನಿ... ವೈರಲ್ ಆಯ್ತು ಮೋದಿ ಫೋಟೋಶೂಟ್​ Narendra Modi

ಪ್ರಮುಖ ಮುಖ್ಯಾಂಶಗಳು

  • ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನವು ಗುರುವಾರ ಮುಕ್ತಾಯಗೊಂಡಿದೆ
  • ಇಡೀ ದೇಶವೇ ಬೆರಗಾಗುವಂತಹ ದಾಖಲೆಯೊಂದಕ್ಕೆ ಬಂಗಾಳ ಸಾಕ್ಷಿಯಾಗಿದೆ
  • ಹೂಗ್ಲಿ ನದಿಯ ದಡದಲ್ಲಿ ಸಮಯ ಕಳೆಯುತ್ತಿರುವ ಚಿತ್ರಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನವು ಗುರುವಾರ (ಏ. 23) ಮುಕ್ತಾಯಗೊಂಡಿದ್ದು, ಇಡೀ ದೇಶವೇ ಬೆರಗಾಗುವಂತಹ ದಾಖಲೆಯೊಂದಕ್ಕೆ (Narendra Modi) ಬಂಗಾಳ ಸಾಕ್ಷಿಯಾಗಿದೆ. ಸ್ವಾತಂತ್ರ್ಯದ ಬಳಿಕ ಇತಿಹಾಸದಲ್ಲೇ ಅತ್ಯಧಿಕ ಮತದಾನ (92.88) ದಾಖಲಾಗಿದೆ.
ಈ ಸಂಭ್ರಮದ ಬೆನ್ನಲ್ಲೇ, ಬಂಗಾಳದ ಚುನಾವಣಾ ಪ್ರಚಾರದಲ್ಲಿರುವ ಪ್ರಧಾನಿ ಮೋದಿ ಇಂದು (ಶುಕ್ರವಾರ ಏ.24) ಬೆಳಿಗ್ಗೆ ಕೋಲ್ಕತ್ತಾದ ಹೂಗ್ಲಿ ನದಿಯ ದಡದಲ್ಲಿ ಸಮಯ ಕಳೆಯುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಪ್ರಧಾನಿ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ದೋಣಿಯ ಮೇಲೆ ಕ್ಯಾಮೆರಾ ಹಿಡಿದು ಕುಳಿತುಕೊಂಡಿದ್ದಾರೆ. ಅವರ ಹಿಂದೆ ಕೋಲ್ಕತ್ತಾದ ಪ್ರಸಿದ್ಧ ವಿದ್ಯಾಸಾಗರ್ ಸೇತು ಗೋಚರಿಸುತ್ತಿದೆ. ಈ ಸಂದರ್ಭದಲ್ಲಿ ಅವರು ಗಂಗಾ ಮಾತೆಗೆ ಕತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೇ ಬಂಗಾಳದ ಅಭಿವೃದ್ಧಿ ಮತ್ತು ಬಂಗಾಳಿ ಜನಸಂಖ್ಯೆಯ ಸಮೃದ್ಧಿಗಾಗಿ ಕೆಲಸ ಮಾಡುವ ತಮ್ಮ ಬದ್ಧತೆಯನ್ನು ಈ ಮೂಲಕ ಪುನರುಚ್ಚರಿಸಿದರು.
ಹೂಗ್ಲಿ ಗಂಗಾ ನದಿಯ ಪಶ್ಚಿಮದ ಅತ್ಯಂತ ಉಪನದಿ
ಇಂದು ಬೆಳಿಗ್ಗೆ ಕೋಲ್ಕತ್ತಾದಲ್ಲಿ, ನಾನು ಹೂಗ್ಲಿ ನದಿಯ ದಡದಲ್ಲಿ ಸ್ವಲ್ಪ ಸಮಯ ಕಳೆದೆ. ಇದು ಗಂಗಾ ಮಾತೆಗೆ ಕೃತಜ್ಞತೆ ಸಲ್ಲಿಸುವ ಒಂದು ಅವಕಾಶ ಎಂದು ಭಾವಿಸಿದ್ದೆ. ಅಲ್ಲದೆ, ಅತ್ಯಂತ ಕಠಿಣ ಪರಿಶ್ರಮದ ಗುಣ ಹೊಂದಿರುವ ದೋಣಿ ನಡೆಸುವವರನ್ನು ಹಾಗೂ ವಾಯುವಿಹಾರಿಗಳನ್ನು ಭೇಟಿ ಮಾಡುವ ಅವಕಾಶವೂ ದೊರೆಯಿತು. ಆದಾಗ್ಯೂ, ಹೂಗ್ಲಿ ನದಿಯ ದಡದಲ್ಲಿ, ಪಶ್ಚಿಮ ಬಂಗಾಳದ ಅಭಿವೃದ್ಧಿ ಮತ್ತು ಬಂಗಾಳಿ ಜನರ ಸಮೃದ್ಧಿಗಾಗಿ ಕೆಲಸ ಮಾಡುವ ನಮ್ಮ ಬದ್ಧತೆಯನ್ನು ನಾನು ಪುನರುಚ್ಚರಿಸಿದೆ ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.

ಇದು ಬದಲಾವಣೆಗೆ ಸಿಕ್ಕ ಜನಾದೇಶ ಎಂದ ಪ್ರಧಾನಿ ಮೋದಿ

ದಾಖಲೆ ಪ್ರಮಾಣದ ಮತದಾನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದು, ಕೃಷ್ಣನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಇದು ಬದಲಾವಣೆಗಾಗಿ ಅಗಾಧವಾದ ಜನಾದೇಶವನ್ನು ಸೂಚಿಸುತ್ತದೆ ಎಂದು ಬಣ್ಣಿಸಿದ್ದಾರೆ. ಬಂಗಾಳದ 152 ಕ್ಷೇತ್ರಗಳಲ್ಲಿ ಹಿಂಸಾಚಾರವನ್ನು ಕನಿಷ್ಠ ಮಟ್ಟಕ್ಕೆ ಇಳಿಸಿ ಚುನಾವಣೆ ನಡೆಸಿದ್ದಕ್ಕಾಗಿ ಆಯೋಗವನ್ನು ಅಭಿನಂದಿಸಿದರು.

ಪವಿತ್ರ ಗಂಗಾ ಬಗ್ಗೆ

ಪ್ರತಿಯೊಬ್ಬ ಬಂಗಾಳಿಗೂ, ಗಂಗಾ ಬಹಳ ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದೆ. ಆದಾಗ್ಯೂ, ಹಿಂದೂ ಧರ್ಮದಲ್ಲಿ ಗಂಗೆಯನ್ನು ಅತ್ಯಂತ ಪವಿತ್ರ ನದಿಯೆಂದು ಪರಿಗಣಿಸಲಾಗಿದ್ದು, ಈ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ತೊಳೆದು ಹೋಗುತ್ತವೆ ಎಂಬ ನಂಬಿಕೆಯಿದೆ. ನದಿಯ ದಡದಲ್ಲಿರುವ ಹರಿದ್ವಾರ, ರಿಷಿಕೇಶ, ಪ್ರಯಾಗ್‌ರಾಜ್ ಮತ್ತು ವಾರಣಾಸಿ ನಗರಗಳು ಪ್ರಮುಖ ಪುಣ್ಯಕ್ಷೇತ್ರಗಳಾಗಿವೆ. ವಿಶ್ವದ ಅತಿದೊಡ್ಡ ಧಾರ್ಮಿಕ ಸಮಾವೇಶವಾದ ಕುಂಭಮೇಳವು ಗಂಗಾ ನದಿಯ ದಡದಲ್ಲಿ ನಡೆಯುತ್ತದೆ (ಏಜೆನ್ಸೀಸ್​).