ನವದೆಹಲಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ದ್ವಿಪಕ್ಷೀಯ ಮಾತುಕತೆ 
ದೇಶ

ಪೋಲೆಂಡ್​ ಪ್ರಧಾನಿ ಜತೆ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ! PM Narendra Modi

ನವದೆಹಲಿ: ಅಕ್ಟೋಬರ್​ 21 ರಿಂದ 23 ರ ವರೆಗೆ ಭಾರತದ ಪ್ರವಾಸದಲ್ಲಿರುವ ಪೋಲೆಂಡ್​ ಪ್ರಧಾನಿ ಡೊನಾಲ್ಡ್​ ಟಸ್ಕ್​ ಜತೆ, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇಂದು (ಗುರುವಾರ, 22) ನವದೆಹಲಿಯ, ಹೈದರಾಬಾದ್​ ಹೌಸ್​ನಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಉಭಯ ದೇಶಗಳ ನಾಯಕರು ಆರ್ಥಿಕ, ಸಾಮಾಜಿಕ ಹಾಗೂ ಐತಿಹಾಸಿಕ ಸಂಬಂಧದ ಬಗ್ಗೆ ಚರ್ಚೆ ನಡೆಸಿದ್ದಾರೆ. ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿಂದ ಇಲ್ಲಿಯವರೆಗೆ ಭಾರತ ನಮ್ಮ ಜತೆ ನಿಂತಿರುವುದಕ್ಕೆ ನಮಗೆ ನಿಮ್ಮ ದೇಶದ ಮೇಲೆ ಅಭಿಮಾನವಿದೆ ಎಂದು ಪೋಲೆಂಡ್​ ಪ್ರಧಾನಿ ಹೇಳಿದ್ದಾರೆ. ನರೇಂದ್ರ ಮೋದಿ ಕೂಡ ಭವಿಷ್ಯದಲ್ಲಿ ಎರಡು ದೇಶಗಳ ಸಂಬಂಧ ಇನ್ನಷ್ಟು ಗಟ್ಟಿಯಾಗುವ ಬಗ್ಗೆ ಭರವಸೆ ಮೂಡಿಸಿದ್ದಾರೆ.

ವಿಜಯವಾಣಿ ಸುದ್ದಿ ಜಾಲ