ನರೇಂದ್ರ ಮೋದಿ ಕಾಮನ್‌ವೆಲ್ತ್ ಗೇಮ್ಸ್ ಆಟಗಾರರನ್ನು ಭೇಟಿಯಾದರು  
ದೇಶ

‘ನರೇಂದ್ರ’ ಹೆಸರೇ ಇಷ್ಟವಿಲ್ಲ ಎಂದಿದ್ದ ಪಾಕ್ ಬಾಕ್ಸರ್! ಮೋದಿ ಜತೆ ಬೆರ್ವಾಲ್ ಮಾತು | Narender Berwal

ಮಂಜುನಾಥ್ ಹಾಲವರ್ತಿ

ಪ್ರಮುಖ ಮುಖ್ಯಾಂಶಗಳು

  • ಪ್ರಧಾನಿ ಮೋ ದಿಯನ್ನು ಭೇಟಿಯಾದ ಬಾಕ್ಸರ್ ನರೇಂದರ್
  • ಪಾಕ್​ ಬಾಕ್ಸರ್ ಜತೆ ನಡೆದ ಘಟನೆ ನೆನಪಿಸಿಕೊಂಡ ಬೆರ್ವಾಲ್
  • ನರೇಂದ್ರ ಎಂಬ ಹೆಸರು ಇಷ್ಟವಿಲ್ಲ ಎಂದಿದ್ದ ಪಾಕ್ ಬಾಕ್ಸರ್
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಬಾಕ್ಸರ್ ನರೇಂದರ್ ಬೆರ್ವಾಲ್ 2015ರಲ್ಲಿ ಪಾಕಿಸ್ತಾನಿ ಬಾಕ್ಸರ್ ಜತೆ ನಡೆದಿದ್ದ ಸ್ವಾರಸ್ಯಕರ ಘಟನೆಯೊಂದನ್ನು ಮೋದಿಯೊಂದಿಗೆ ಹಂಚಿಕೊಂಡಿದ್ದಾರೆ.
2015ರ ವಿಶ್ವ ಮಿಲಿಟರಿ ಕ್ರೀಡಾಕೂಟದಲ್ಲಿ ಪಾಕಿಸ್ತಾನಿ ಬಾಕ್ಸರ್ ಜತೆ ನಡೆದ ಮಾತುಕತೆಯನ್ನು ಬೆರ್ವಾಲ್ ನೆನಪಿಸಿಕೊಂಡಿದ್ದಾರೆ. ಆಗ ಪಾಕ್ ಬಾಕ್ಸರ್, ನಿಮ್ಮ ಹೆಸರು ನರೇಂದ್ರ, ನಿಮ್ಮ ಕೋಚ್ ಹೆಸರು ಕೂಡ ನರೇಂದ್ರ, ನಿಮ್ಮ ಪ್ರಧಾನಿ ಹೆಸರೂ ನರೇಂದ್ರ. ನನಗೆ ನರೇಂದ್ರ ಎಂಬ ಹೆಸರೇ ಇಷ್ಟವಿಲ್ಲ ಅಂತ ತಮಾಷೆ ಮಾಡಿದ್ದರಂತೆ. ಇದನ್ನು ಕೇಳಿ ಅಲ್ಲಿದ್ದವರು ನಕ್ಕಿದ್ದರು ಎಂದು ಬೆರ್ವಾಲ್ ಹೇಳಿದ್ದಾರೆ.

ಪಾಕ್ ಬಾಕ್ಸರ್ ವಿರುದ್ಧ ಗೆಲುವು

ಬಾಕ್ಸರ್​​ಗೆ

ಟಾಂಗ್​ ಕೊಟ್ಟಿದ್ದರು.

ಪಂದ್ಯಕ್ಕೂ ಮುನ್ನ ಮಿಲಿಟರಿಯಿಂದ ನನಗೆ ಕರೆ ಬಂತು, ಪಾಕ್​ ವಿರುದ್ಧ ಸೋಲಬಾರದು ಎಂದು ಸೂಚನೆ ನೀಡಲಾಗಿತ್ತು ಎಂದು ಬೆರ್ವಾಲ್ ತಿಳಿಸಿದ್ದಾರೆ. ಮ್ಯಾಚ್​ ತುಂಬಾ ಟಫ್​ ಇತ್ತು. ಆಟದ ವೇಳೆ ಇಬ್ಬರೂ ಬಾಕ್ಸರ್‌ಗಳಿಗೆ ಗಾಯಗಳಾಗಿದ್ದವು. ಬಳಿಕ ಬೆರ್ವಾಲ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು.

ಬಾಕ್ಸಿಂಗ್‌ನಲ್ಲಿ ಭಾರತದ ಭರರಜರಿ ಆಟ

ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಬಾಕ್ಸರ್‌ಗಳು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಪುರುಷರ 90 ಕೆಜಿ ವಿಭಾಗದಲ್ಲಿ ನರೇಂದರ್ ಬೆರ್ವಾಲ್ ಬೆಳ್ಳಿ ಪದಕ ಗೆದ್ದಿದ್ದಾರೆ. ಬಾಕ್ಸಿಂಗ್‌ನಲ್ಲಿ ಇಂಡಿಯಾ ಒಟ್ಟು 10 ಪದಕಗಳನ್ನು ಗೆದ್ದಿದ್ದು, ಇದರಲ್ಲಿ 7 ಚಿನ್ನ ಮತ್ತು 3 ಬೆಳ್ಳಿ ಪದಕ ಸೇರಿವೆ. ಒಟ್ಟಾರೆ ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚು ಸೇರಿ ಒಟ್ಟು 39 ಪದಕಗಳನ್ನು ಗೆದ್ದು, ಭಾರತ ನಾಲ್ಕನೇ ಸ್ಥಾನ ಪಡೆದಿತ್ತು.(ಏಜೆನ್ಸೀಸ್).