KM Nanavati 
ದೇಶ

ಪತ್ನಿಯ ಪ್ರೇಮಿಯನ್ನು ಕೊಂದು ಹೀರೋ ಆಗಿದ್ದ ನಾನಾವತಿ!; ಭಾರತ ಕಮಾಂಡರ್​ನಿಂದ ಜ್ಯೂರಿ ಪದ್ಧತಿ ನಿಷೇಧವಾಗಿದ್ಯಾಕೆ?..KM Nanavati

70 ವರ್ಷಗಳ ಇತಿಹಾಸವಿರುವ ಮುಂಬೈನ ಜುಹು ಸಮುದ್ರ ತೀರದಲ್ಲಿದ್ದ ಲೀಲಾ ಹೆಸೆರಿನ ಬಂಗಲೆ ಮಾರಾಟವಾಗಿದೆ. ತೊಂಬತ್ತರ ದಶಕದಲ್ಲೇ ಲಕ್ಷ ಬೆಲೆ ಬಾಳುತ್ತಿದ್ದ ಈ ದಿವ್ಯ ಭಂಗಲೆಯನ್ನು 221 ಕೋಟಿಗೆ ಖರೀದಿಸಿದ್ದು ನೋಟಂದಾಸ್ ರಿಯಾಲ್ಟಿ ಗ್ರೂಪ್. ಅಷ್ಟಕ್ಕೂ ಈ ಕವಾಸ್ ಮಾನೆಕ್ಷಾ ನಾನಾವತಿ ಯಾರು? ಇವ್ರ ಪ್ರಕರಣದಿಂದಲೇ ಜ್ಯೂರಿ ಪದ್ಧತಿ ಭಾರತದಲ್ಲಿ ನಿಷೇಧವಾಗಿದ್ಯಾಕೆ?

ಯಾರೀ ನಾನಾವತಿ?

ಆತ ಪಾರ್ಸಿ ಸಮುದಾಯಕ್ಕೆ ಸೇರಿದ ಭಾರತೀಯ ನೌಕಾಪಡೆಯ ಕಮಾಂಡರ್ ಕೆಎಂ ನಾನಾವತಿ.​​​​ ಈಕೆ ಇಂಗ್ಲಿಷ್​(ಫಾರಿನ್)​ ಮೂಲದ ಹುಡುಗಿ ಸಿಲ್ವಿಯಾ. ದೇಶ ಬೇರೆಯಾದರೂ ಒಂದಾಗಿದ್ದು ಇಬ್ಬರ ಮನಸ್ಸು. ನಾನಾವತಿ ಮತ್ತು ಸಿಲ್ವಿಯಾ ಬಿಟ್ಟಿರಲಾರದಷ್ಟು ಪ್ರೀತಿ ಮಾಡುತ್ತಿದ್ದರು. ಕೊನೆಗೆ ಮದುವೆ ಮಾಡಿಕೊಂಡು ತಮ್ಮ ಪತ್ನಿ ಸಿಲ್ವಿಯಾ ಮತ್ತು ಮೂವರು ಮಕ್ಕಳೊಂದಿಗೆ ಮುಂಬೈನಲ್ಲಿ ವಾಸವಾಗಿದ್ದರು.

ಪ್ರೇಮ್​ ಅಹುಜಾ ಯಾರು?

ಹೀಗೆ ಸುಖ ಸಂಸಾರ ನಡೆಸುತ್ತಿದ್ದ ಕಮಾಂಡರ್, ಜೀವನೋಪಾಯಕ್ಕಾಗಿ​ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲೇ ಬೇಕಿತ್ತು. ಹೀಗಾಗಿ, ಮನೆಯಲ್ಲಿ ಸುಂದರ ಪತ್ನಿಯನ್ನು ಬಿಟ್ಟು ಕೆಲಸದ ನಿಮಿತ್ತ ತಿಂಗಳಾನುಗಟ್ಟಲೇ ಹೋಗೋದು ಅನಿವಾರ್ಯವಾಗಿರುತ್ತಿತ್ತು. ಹೀಗೆ ಪ್ರತಿನಿತ್ಯ ಒಂಟಿಯಾಗಿ ಕಾಲ ಕಳೆಯುವಾಗ ಸಿಲ್ವಿಯಾಗೆ ಸಿಕ್ಕಿದ್ದೇ ನಾನಾವತಿಯ ಆತ್ಮೀಯ ಗೆಳೆಯ, ಸಿಂಧಿ ಸಮುದಾಯದ ಮುಂಬೈನ ಉದ್ಯಮಿ ಪ್ರೇಮ್​ ಅಹುಜಾ..
ಪತಿ ಇಲ್ಲದ ಸಮಯದಲ್ಲಿ ಪ್ರೀತಿಯಿಂದ ಮಾತನಾಡಿ... ಹಲವು ಬಯಕೆಗೆ ಜೊತೆಯಾಗುತ್ತಿದ್ದದ್ದು ಪ್ರೇಮ್​ ಅಹುಜಾ...ಇಬ್ಬರು ಮಾತನಾಡುತ್ತ...ಪ್ರೇಮದ ಆಳಕ್ಕೆ ಇಳಿದಿದ್ದರು. ಸ್ವಿಲ್ವಿಯಾಗಂತು ಆತನ ಮೇಲೆ ಬಿಟ್ಟಿರಲಾರದಷ್ಟು ಪ್ರೇಮ. ಒಮ್ಮೆ ಸಿಲ್ವಿಯಾ ಅಹುಜಾನನ್ನು ಮದುವೆಯಾಗಲು ಬಯಸಿದಳು ಆದರೆ, ಇದಕ್ಕೆ ಸುತಾರಾಂ ಒಪ್ಪಲಿಲ್ಲ,

27 ಏಪ್ರಿಲ್​ 1959ರಲ್ಲಿ ಆಗಿದ್ದೇನು

ಎಡವಟ್ಟು ಆಗಿದ್ದು ಇಲ್ಲೇ ನೋಡಿ.. ಸಿಲ್ವಿಯಾ ಮತ್ತು ಪ್ರೇಮ್​ ಅಹುಜಾರ ಅಕ್ರಮ ಸಂಬಂಧವನ್ನು ಹೇಗೋ ನಾನಾವತಿ ತಿಳಿದುಕೊಂಡರು. ಪತ್ನಿಯ ವರ್ತನೆಯನ್ನು ಸಹಿಸಿಕೊಳ್ಳಲಾಗದೆ, 27 ಏಪ್ರಿಲ್​ 1959ರಲ್ಲಿ ಕೆಲಸ ಮುಗಿಸಿ ಮನೆಗೆ ಬಂದು ಪತ್ನಿಯನ್ನು ಈ ಬಗ್ಗೆ ಕೇಳಿದರು. ಆಗ ಆಕೆ ನಿಜವೆಂದು ಒಪ್ಪಿಕೊಂಡಳು. ಇದರಿಂದ ವಿಚಲಿತರಾದ ಅವರು ಪತ್ನಿ ಮತ್ತು ಮಕ್ಕಳನ್ನು ಸಿನಿಮಾ ಮಂದಿರಲ್ಲಿ ಬಿಟ್ಟು ಸಿನಿಮಾ ನೋಡಲು ಹೇಳಿದರು, ನಾನಾವತಿ ಅವರು ತಮ್ಮ ನೌಕಾಪಡೆಯ ಹಡಗಿಗೆ ತೆರಳಿ ತಮ್ಮ ಸರ್ವೀಸ್​ ಪಿಸ್ತೂಲು ಮತ್ತದಕ್ಕೆ 6 ಗುಂಡು ಪಡೆದುಕೊಂಡು ಸೀದಾ ಅಹುಕಾ ಮನೆಗೆ ತೆರಳಿದರು.
ನನ್ನ ಪತ್ನಿ ನಿಮ್ಮನ್ನು ಪ್ರೇಮಿಸುತ್ತಿದ್ದಾಳೆ. ಆಕೆಯನ್ನು ಮದುವೆಯಾಗಿ, ಮಕ್ಕಳನ್ನು ಸಾಕ್ತಿಯಾ ಎಂದು ಕೇಳಿದ್ದಾರೆ ಇದಕ್ಕೆ ಅಹುಜಾ ನಾನು ಭೇಟಿಯಾಗುವ ಪ್ರತಿ ಹೆಣ್ಣನ್ನು ಮದುವೆಯಾಗೋಕೆ ಸಾಧ್ಯವಿಲ್ಲ ಎಂದು ಉಡಾಫೆಯಿಂದ ಉತ್ತರಿಸಿದ್ದಾರೆ. ಇದರಿಂದ ಸಿಟ್ಟಾದ ಅವರು ಗುಂಡುಗಳನ್ನು ಹಾರಿಸಿ ಅಹುಜಾನನ್ನು ಜೀವಂತವಾಗಿ ಕೊಂದು ಹಾಕಿದರು. ನೇರವಾಗಿ ಪೊಲೀಸ್ ಕಮಿಷನರ್ ಬಳಿ ಹೋಗಿ ಶರಣಾದರು.

ಮುಂದಾಗಿದ್ದೇ ಇತಿಹಾಸ..

1959ರ ಕಾಲದಲ್ಲಿ ಜ್ಯೂರಿ ಪದ್ಧತಿ ವಾಡಿಕೆಯಲ್ಲಿತ್ತು. ಜ್ಯೂರಿ ಪದ್ಧತಿ ಎಂದರೆ, ಸಾಮಾನ್ಯ ಜನರೇ ನ್ಯಾಯಾಧೀಶ ಮುಮದೆ ಕುಳಿತು ತೀರ್ಪು ನೀಡಿತ್ತಿದ್ದರು. ಆಗ ಪಬ್ಲಿಕ್​ ಪ್ರಾಸಿಕ್ಯೂಟರ್​ ಆಗಿ ಕಾರ್ಲ್​ ಖಂಡಾಲವಾಲ ಇದ್ದರು ಮತ್ತು ನಾನಾವತಿ ಪರ ವಕೀಲ ಪ್ರಸಿದ್ಧ ರಾಮ್ ಜೇಠ್ಮಲಾನಿ
ಕೊಲೆ ಮಾಡಿದ್ದ ನಾನಾವತಿಯನ್ನು ಹೀರೋ ಎಂದು ಬಿಂಬಿಸಲಾಗಿತ್ತು. ಜನರು ಅವರನ್ನು ಹೀರೋ ಎಂದು ಕರೆದು, ಅಹುಜಾರನ್ನು ಪ್ಲೇ ಬಾಯ್​ ಎಂದು ಚಿತ್ರಿಸಿದ್ದರು. ವಿಚಾರಣೆಗೂ ನಾನಾವತಿ ಬೆಂಗಾವಲಿನ ಜೊತೆಗೆ ಆರಾಮಾದಾಯಕವಾಗಿ ಆಗಮಿಸುತ್ತಿದ್ದರು. ಜನರು ಅವನನ್ನು ಮೆಚ್ಚಿಕೊಂಡಿದ್ದರು. ಮಹಿಳೆಯರು ನೋಟುಗಳ ಮೇಲೆ ಚುಂಬಿಸಿ ಆತನ ಮೇಲೆ ಎಸೆಯುತ್ತಿದ್ದರು. ಜನರ ಅಷ್ಟು ಪ್ರೀತಿ, ಸಕರಾತ್ಮಕ ರೆಸ್ಪಾನ್ಸ್​ಗೆ ಕಾರಣ ಅಂದಿನ ಮಾಧ್ಯಮಗಳು.

ಜ್ಯೂರಿ ಪದ್ಧತಿ ನಿಷಿದ್ಧ

ಅಂದು ಮಾಧ್ಯಮಗಳು ನಾನಾವತಿಯವರನ್ನು ದೇಶ ಪ್ರೇಮಿ ಮೋಸ ಹೋದ ಪತಿ ಎಂದು ಚಿತ್ರಿಸಿದ್ದವು. ಇದನ್ನೇ ಕಂಡಿದ್ದ 9 ಜನರ ಜ್ಯೂರಿ ಮಂಡಳಿಯು 8:1 ಬಹುಮತದಿಂದ ನಾನಾವತಿ ನಿರ್ದೋಷಿ ಎಂದು ತೀರ್ಪುಕೊಟ್ಟಿತ್ತು. ಕೇಸ್​ ಹೈಕೋರ್ಟ್​ ಮೆಟ್ಟಿಲೇರಿತ್ತು
ಸೆಷನ್ಸ್​ ನ್ಯಾಯಾಧೀಶ ರತ್ಲಾಲ್​​ ಭೌಮನ್​ ಅವರು ಜ್ಯೂರಿ ತೀರ್ಪು ವಿಕೃತ ಎಂದು ಬಾಂಬೆ ಹೈಕೋರ್ಟ್​ ವರ್ಗಾಯಿಸಿದರು. ವಿಚಾರಣೆ ನಡೆಸಿದ ಕೋರ್ಟ್​​ ಜೀವಾವಧಿ ಶಿಕ್ಷೆ ವಿಧಿಸಿತು. ಸುಪ್ರೀಂ ಕೋರ್ಟ್​ ಸಹ ಈ ತೀರ್ಪನ್ನೇ ಎತ್ತಿ ಹಿಡಿಯಿತು.

ನಾನಾವತಿಗೆ ಸಿಕ್ತು ಕ್ಷಮಾದಾನ

ನಾನಾವತಿ ತಪ್ಪಿತಸ್ಥ ಎಂದು11 ಮಾರ್ಚ್​ 1960 ರಂದು ಜೀವಾವಧಿ ಶಿಕ್ಷೆ ವಿಧಿಸಲಾಯಿತು. ನಾನಾವತಿಯನ್ನು ಜೈಲಿಗೆ ಕಳುಹಿಸಲಾಯಿತು. ಅಕ್ಟೋಬರ್ 1963 ರಲ್ಲಿ ಆರೋಗ್ಯದ ಕಾರಣಗಳಿಗಾಗಿ ಅವರಿಗೆ ಪೆರೋಲ್ ನೀಡಲಾಯಿತು ಮತ್ತು ಲೋನಾವಾಲಾದ ಬೆಟ್ಟದ ರೆಸಾರ್ಟ್‌ನಲ್ಲಿರುವ ಬಂಗಲೆಯಲ್ಲಿ ವಾಸಿಸಲು ಅವಕಾಶ ನೀಡಲಾಯಿತು.
ಜೀವವಾಧಿ ಶಿಕ್ಷೆಯಾದರು ಇದ್ದಿದ್ದು ಮೂರೆ ವರ್ಷ 16 ಮಾರ್ಚ್​​ 1964 ಮಹಾರಾಷ್ಟ್ರದ ರಾಜ್ಯಪಾಲರಾದ ವಿಜಯಲಕ್ಷ್ಮಿ ಪಂಡಿತ್ ಅವರು ಅವರಿಗೆ ಕ್ಷಮಾದಾನ ನೀಡಿದರು. ಇದಕ್ಕೆ ಪ್ರೇಮ್ ಅಹುಜಾ ಅವರ ಸಹೋದರಿ ಮಮ್ಮಿ ಅಹುಜಾ ಅವರ ಒಪ್ಪಿಗೆಯೂ ಇತ್ತು. ಸಿಲ್ವಿಯಾ ಸಹ ಪತಿ ಪರವೇ ಹೋರಾಡಿದ್ದರು. ಬಿಡುಗಡೆಯಾದ ನಂತರ 1968ರಲ್ಲಿ ನಾನಾವತಿ ತಮ್ಮ ಕುಟುಂಬದೊಂದಿಗೆ ಕೆನಡಾಕ್ಕೆ ತೆರಳಿ ಅಲ್ಲಿಯೇ ನೆಲೆಸಿದರು. 2003ರಲ್ಲಿ ನಾನಾವತಿ ನಿಧನರಾದರು ಎನ್ನಲಾಗಿದೆ.
ಕೆ.ಎಂ. ನಾನಾವತಿ ವರ್ಸಸ್ ಸ್ಟೇಟ್ ಆಫ್ ಮಹಾರಾಷ್ಟ್ರ ಪ್ರಕರಣದ ನಂತರ ಜ್ಯೂರಿ ಪದ್ಧತಿ ಮೇಲೆ ನಂಬಿಕೆ ಕಳೆದುಕೊಂಡಿದ್ದ ಕಾರಣ ಅಂದಿನಿಂದ ಪಾಲನೆ ಮಾಡುತ್ತಿಲ್ಲ. ಆದರೆ, ಅಮೆರಿಕದಂತಹ ರಾಷ್ಟದಲ್ಲಿ ಇನ್ನೂ ವಾಡಿಕೆಯಲ್ಲಿದೆ ಎನ್ನಲಾಗುತ್ತಿದೆ.

ಸಿನಿಮಾಗಳು ರಿಲೀಸ್​

ಈ ರೋಚಕ ಕಥೆಯು ಬಾಲಿವುಡ್‌ನ ಮೇಲೆ ದೊಡ್ಡ ಪ್ರಭಾವ ಬೀರಿದೆ. ಈ ಪ್ರಕರಣವನ್ನು ಆಧರಿಸಿ ಕೆಲವು ಚಲನಚಿತ್ರಗಳು ನಿರ್ಮಾಣವಾಗಿವೆ:
ಯೇ ರಾಸ್ತೆ ಹೈ ಪ್ಯಾರ್ ಕೆ (1963)
ರುಸ್ತುಂ (2016) -
ದಿ ವರ್ಡಿಕ್ಟ್ (ವೆಬ್ ಸರಣಿ), (ಏಜೆನ್ಸೀಸ್).