ಅಂಡಮಾನ್​ ನಿಕೋಬಾರ್​ ದ್ವೀಪಗಳು, ಸುಭಾಷ್ ಚಂದ್ರ ಬೋಸ್, ಕೆ.ಕವಿತಾ 
ದೇಶ

ಅಂಡಮಾನ್ ದ್ವೀಪಗಳಿಗೆ ‘ಆಜಾದ್ ಹಿಂದ್’ ಎಂದು ಹೆಸರಿಡಿ: ನೇತಾಜಿ ಜನ್ಮದಿನದಂದು ಪ್ರಧಾನಿ ಮೋದಿಗೆ ಕೆ. ಕವಿತಾ ಮನವಿ | Netaji

ಪ್ರಮುಖ ಮುಖ್ಯಾಂಶಗಳು

  • ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 129 ನೇ ಜನ್ಮ ದಿನಾಚರಣೆ
  • ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು 'ಆಜಾದ್ ಹಿಂದ್' ಎಂದು ಮರುನಾಮಕರಣ ಮಾಡಿ : ಕವಿತಾ
  • ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುತ್ತೇನೆ
ತೆಲಂಗಾಣ: ದೇಶವು ನೇತಾಜಿ (Netaji) ಸುಭಾಷ್ ಚಂದ್ರ ಬೋಸ್ ಅವರ 129 ನೇ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ತೆಲಂಗಾಣ ಜಾಗೃತಿ ಅಧ್ಯಕ್ಷೆ ಕೆ. ಕವಿತಾ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು 'ಆಜಾದ್ ಹಿಂದ್' ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕವಿತಾ, ಸುಭಾಷ್ ಚಂದ್ರ ಬೋಸ್ ಭಾರತದ ಯುವ ಪೀಳಿಗೆಗೆ ಸ್ಫೂರ್ತಿ ನೀಡಿದ್ದಾರೆ ಮತ್ತು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದರು. ಬೋಸ್ ಅವರು ದೇಶಕ್ಕೆ ಸಲ್ಲಿಸಿರುವ ಅವಿಸ್ಮರಣೀಯ ಸೇವೆಗಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು 'ಆಜಾದ್ ಹಿಂದ್' ಎಂದು ಮರುನಾಮಕರಣ ಮಾಡಬೇಕೆಂದು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದೆನೆ ಎಂದು ಅವರು ಹೇಳಿದರು.
ಇನ್ನೇನು ಕೆಲವೇ ದಿನಗಳಲ್ಲಿ ಗಣರಾಜ್ಯೋತ್ಸವ ನಡೆಯಲಿದ್ದು, ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಲು ಇದಕ್ಕಿಂತ ಸೂಕ್ತ ಸಮಯ ದೊರೆಯದು ಎಂದ ಅವರು,ನಮ್ಮ ಈ ಬೇಡಿಕೆ ಈಡೇರಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದಾಗಿ ಕೆ. ಕವಿತಾ ಹೇಳಿದರು.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಆಜಾದ್ ಹಿಂದ್ ಎಂಬ ಹೆಸರನ್ನು ಇಡುವ ಮೂಲಕ ನೇತಾಜಿಯವರ ಪರಂಪರೆಯನ್ನು ಸಂರಕ್ಷಿಸಲು ಒಂದು ಉತ್ತಮ ಮಾರ್ಗವಾಗಿದೆ ಎಂದು ನಾವು ಭಾವಿಸುತ್ತೇವೆ ಮತ್ತು ನಂಬುತ್ತೇವೆ ಎಂದರು. ಆದ್ದರಿಂದ ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುವಂತೆ ನಾವು ಒತ್ತಾಯಿಸುತ್ತೇವೆ ಎಂದು ಅವರು ಹೇಳಿದರು,(ಏಜನ್ಸೀಸ್​).