ಸಾಂದರ್ಭಿಕ ಚಿತ್ರ 
ದೇಶ

ನಮನ್ ಧೀರ್ ಅರ್ಧ ಶತಕದಾಟ​; ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 160 ರನ್​ಗಳ ಗುರಿ ನೀಡಿದ ಮುಂಬೈ ಇಂಡಿಯನ್ಸ್​​​ | CSK vs MI

CSK vs MI: ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ 2026 ಆವೃತ್ತಿಯ ಚೆನ್ನೈ ಸೂಪರ್ ಕಿಂಗ್ಸ್ ತಂಡದ​ ವಿರುದ್ಧದ ಪಂದ್ಯದಲ್ಲಿ ನಮನ್ ಧೀರ್ ಅರ್ಧ ಶತಕದಾಟದಿಂದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 160ರನ್​ಗಳ ಮೊತ್ತದ ಗುರಿ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ಇಂಡಿಯನ್ಸ್, ತಂಡದ ಆರಂಭಿಕ ಬ್ಯಾಟರ್​ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಗೆಲ್ಲಲೇಬೇಕಾದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಮುಂಬೈ ಇಂಡಿಯನ್ಸ್ ತಂಡವನ್ನು 20 ಓವರ್‌ಗಳಲ್ಲಿ 159/7 ಸ್ಕೋರ್‌ಗೆ ಸೀಮಿತಗೊಳಿಸಿತು.
ಮುಂಬೈ ಇಂಡಿಯನ್ಸ್ ಪರ ನಮನ್ ಧೀರ್ ಅರ್ಧಶತಕ ಗಳಿಸಿದರು. 37 ಎಸೆತಗಳಲ್ಲಿ 4 ಬೌಂಡರಿ ಮತ್ತು ಮೂರು ಸಿಕ್ಸರ್ ಸಿಡಿಸಿ 57 ರನ್ ಗಳಿಸಿದ್ದು ಮತ್ತು ರಯಾನ್ ರಿಕಲ್ಟನ್ 37 ರನ್​ಗಳ ಆಟ ತಂಡ 150ರ ಗಡಿ ದಾಟಲು ಸಹಾಯ ಮಾಡಿತು. ಚೆನ್ನೈ ಪರ ಅನ್ಶುಲ್ ಕಾಂಬೋಜ್ 3 ವಿಕೆಟ್ ಪಡೆದರು. ನೂರ್ ಅಹ್ಮದ್ 2 ಬ್ಯಾಟ್ಸ್‌ಮನ್‌ಗಳ ವಿಕೆಟ್ ಪಡೆದರು.