Nagpur NEET aspirant Abu Dhabi center 
ದೇಶ

NEET ಮರುಪರೀಕ್ಷೆ ಎಡವಟ್ಟು: ನಾಗ್ಪುರ ವಿದ್ಯಾರ್ಥಿಗೆ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರ; NTA ಹೇಳಿದ್ದಿಷ್ಟು!

ಪ್ರಮುಖ ಮುಖ್ಯಾಂಶಗಳು

  • ಜೂನ್ 21 ರಂದು ನಡೆಯಲಿರುವ ನೀಟ್​​ ಮರುಪರೀಕ್ಷೆಗೂ ಮುನ್ನ ಎನ್​ಟಿಎ ಎಡವಟ್ಟು
  • ನಾಗ್ಪುರದ ನೀಟ್ ವಿದ್ಯಾರ್ಥಿ ಅಬ್ದುಲ್ಲಾ ಮೊಹಮ್ಮದ್ ತಾಲಿಬ್‌ಗೆ ಅಬುಧಾಬಿ ಪರೀಕ್ಷಾ ಕೇಂದ್ರ
  • ನನ್ನ ಮಗನ ಬಳಿ ಪಾಸ್‌ಪೋರ್ಟ್ ಕೂಡ ಇಲ್ಲ ಎಂದು ಪೋಷಕರ ಆತಂಕ
  • ಸಮಸ್ಯೆ ಬಗೆಹರಿದಿದೆ ಸಂಜೆ ಅಡ್ಮಿಟ್​ ಕಾರ್ಡ್​ ಸಿಗಲಿದೆ ಎಂದು ಸ್ಪಷ್ಟಪಡಿಸಿದ ಎನ್​ಟಿಎ
ನಾಗ್ಪುರ: ನಾಳೆ ನಡೆಯಲಿರುವ ನೀಟ್-ಯುಜಿ ಮರು ಪರೀಕ್ಷೆಗೆ ಸಜ್ಜಾಗಿದ್ದ ಅಭ್ಯರ್ಥಿಯ ಅಡ್ಮಿಟ್​​ ಕಾರ್ಡ್​ನಲ್ಲಿ ಪರೀಕ್ಷಾ ಕೇಂದ್ರ ತಪ್ಪಾಗಿ ಅಬುದಾಭಿ ಎಂದು ಲಗತ್ತಿಸಲಾಗಿತ್ತು. ಅಭ್ಯರ್ಥಿಯ ತಂದೆ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್​ಟಿಎ) ಎಡವಟ್ಟಿನ ಬಗ್ಗೆ ಸಾಕಷ್ಟು ವಿಡಿಯೋಗಳು ಎಕ್ಸ್​ನಲ್ಲಿ ಹರಿದಾಡಿದ ನಂತರ ಸಮಸ್ಯೆ ಇತ್ಯರ್ಥಗೊಳಿಸಿದ ಬಗ್ಗೆ ಇಲಾಖೆ ಮಾಹಿತಿ ಹಂಚಿಕೊಂಡಿದೆ.

ಎನ್​ಟಿಎ ಪೋಸ್ಟ್​ನಲ್ಲಿ ಏನಿದೆ?

ವಿದ್ಯಾರ್ಥಿಯ ಸಮಸ್ಯೆಯನ್ನು ಪರಿಹರಿಸಲಾಗಿದೆ. ಅಗತ್ಯ ಪರಿಶೀಲನೆಗಳ ನಂತರ ಮುಂಬರುವ ಕೆಲವು ಗಂಟೆಗಳಲ್ಲಿ ವಿದ್ಯಾರ್ಥಿಗೆ ನಾಗ್ಪುರದಲ್ಲೇ ಪರೀಕ್ಷಾ ಕೇಂದ್ರವನ್ನು ಮರು-ನಿಯೋಜಿಸಲಾಗುವುದು ಮತ್ತು ಶನಿವಾರ ಸಂಜೆ 4 ಗಂಟೆಯೊಳಗೆ ಹೊಸ ಪ್ರವೇಶ ಪತ್ರವನ್ನು ವಿತರಿಸಲಾಗುವುದು ಎಂದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್​​ಟಿಎ) ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿದೆ.

ಅಭ್ಯರ್ಥಿ ತಂದೆಯಿಂದ ಎಚ್ಚೆತ್ತ ಎನ್​ಟಿಎ

ನೀಟ್​ ಆಕಾಂಕ್ಷಿ ಅಬ್ದುಲ್ಲಾ ಮೊಹ್ಮದ್​ ತಾಲಿಬ್​ ಅವರ ತಂದೆ ಎಎನ್​ಐಗೆ ಜೊತೆ ಮಾತನಾಡಿದರು. ನೀಟ್ ಆಕಾಂಕ್ಷಿ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ ಜೂನ್ 19 ರ ಶುಕ್ರವಾರ ಸಂಜೆ 4 ಗಂಟೆಗೆ ತನ್ನ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಂಡಾಗ, ಅದರಲ್ಲಿ ಪರೀಕ್ಷಾ ಕೇಂದ್ರದ ವಿಳಾಸ "ಸಲಾಮಾ ಬಿಂತ್ ಬುಟ್ಟಿ ಸ್ಟ್ರೀಟ್, 23 ನೇ ಮುರೂರ್ ರೋಡ್, ಅಬುಧಾಬಿ, ಯುಎಇ" ಎಂದು ನಮೂದಿಸಲಾಗಿತ್ತು. ಇದನ್ನು ಕಂಡು ನಾನು ಆತಂಕಕ್ಕೆ ಒಳಗಾದೆ. ಮಗನಿಗೆ ಪರೀಕ್ಷೆ ಬರೆಯಲು ಸಾಧ್ಯವಾಗೋದಿಲ್ಲ ಎಂದುಕೊಂಡೆ. ಪರೀಕ್ಷಾ ಕೇಂದ್ರದ ಆಯ್ಕೆ ನಾವು ನೀಡಿರಲಿಲ್ಲ ಎಂದರು.
ಮುಂದುವರೆದು, ಎನ್​ಟಿಎ ಸಹಾಯವಾಣಿಗೆ ಕರೆ ಮಾಡಿ ಈ ಗೊಂದಲದ ಬಗ್ಗೆ ಹಂಚಿಕೊಂಡೆವು. ಇಮೇಲ್​ ಕೂಡ ಕಳಿಸಿದ್ದೇವೆ. ತಕ್ಷಣವೇ ಕರೆ ಮಾಡಿ ಶನಿವಾರ ಸಂಜೆ 4ಜ್ಜೆ ಪ್ರವೇಶ ಪತ್ರ ಖುದ್ದಾಗಿ ಕಳಿಸೋದಾಗಿ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಮಾತನಾಡಿದರು. ಅವರ ಈ ವಿಡಿಯೋಗೆ ಎನ್​ಟಿಎ ಅಧಿಕೃತವಾಗಿ ಟ್ವೀಟ್ ಮಾಡಿದೆ.
ನಾವು ನಮ್ಮ ಆಯ್ಕೆಗಳಲ್ಲಿ ಎಲ್ಲೂ ವಿದೇಶಿ ಕೇಂದ್ರವನ್ನು ಕೇಳಿರಲಿಲ್ಲ. ನಾಗ್ಪುರ ಸೇರಿದಂತೆ ದೇಶದ ಮೂರು ಜಿಲ್ಲೆಗಳನ್ನು ಮಾತ್ರ ಆಯ್ಕೆ ಮಾಡಿದ್ದೆವು. ನನ್ನ ಮಗನ ಬಳಿ ಪಾಸ್‌ಪೋರ್ಟ್ ಕೂಡ ಇಲ್ಲ. ಇನ್ನು ಕೇವಲ ಒಂದೆರಡು ದಿನ ಬಾಕಿ ಇರುವಾಗ ಆತನನ್ನು ಅಬುಧಾಬಿಗೆ ಪರೀಕ್ಷೆ ಬರೆಯಲು ಕಳುಹಿಸುವುದಾದರೂ ಹೇಗೆ? ಎಂದು ನೊಂದುಕೊಂಡರು.
ಅಭಿಷೇಕ್ ಸಿಂಗ್ ಏನಂದ್ರು?
ನೀಟ್​​ ಆಕಾಂಕ್ಷಿಗೆ ನಾಗ್ಪುರದಲ್ಲೇ ಪರೀಕ್ಷಾ ಕೇಂದ್ರವನ್ನು ಹಂಚಿಕೆ ಮಾಡಲಾಗಿದೆ ಎನ್‌ಟಿಎ ಮಹಾನಿರ್ದೇಶಕ ಅಭಿಷೇಕ್ ಸಿಂಗ್ ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ, (ಏಜೆನ್ಸೀಸ್).