ಇಂಗ್ಲೆಂಡ್ ವಿರುದ್ಧದ ಕದನಕ್ಕೆ ಮಿಸ್ಟರಿ ಅಸ್ತ್ರ ಸಿದ್ಧ: ಭಾರತ ತಂಡದಲ್ಲಿ ಈ ಒಂದು ಬದಲಾವಣೆ ಶತ್ರುಗಳಿಗೆ ನಡುಕ ತರಿಸೋದು ಫಿಕ್ಸ್!
ನವದೆಹಲಿ: ವಿಶ್ವದಾದ್ಯಂತ ಕ್ರಿಕೆಟ್ ಪ್ರೇಮಿಗಳ ಕಣ್ಣು ಈಗ ಭಾರತ ಮತ್ತು ಇಂಗ್ಲೆಂಡ್(IndVsEng) ನಡುವಿನ ಸೆಮಿಫೈನಲ್ ಪಂದ್ಯದ ಮೇಲೆ ನೆಟ್ಟಿದೆ. ಮಾರ್ಚ್ 5ರಂದು ನಡೆಯಲಿರುವ ಈ ಮಹತ್ವದ ಕದನಕ್ಕೆ ಮುನ್ನ ಟೀಮ್ ಇಂಡಿಯಾ ಪಾಳೆಯದಿಂದ ಒಂದು ಬಿಗ್ ಅಪ್‌ಡೇಟ್ ಹೊರಬಿದ್ದಿದೆ. ಆಂಗ್ಲರ ಪಡೆಯನ್ನು ಕಟ್ಟಿಹಾಕಲು ಸೂರ್ಯ ಪಡೆ ಈಗ ಸಪ್ರೈಸ್ ಅಸ್ತ್ರವೊಂದನ್ನು ಪ್ರಯೋಗಿಸಲು ಸಜ್ಜಾಗಿದೆ.
ಕುಲದೀಪ್ ಯಾದವ್ ಎಂಟ್ರಿ - ವರುಣ್ ಚಕ್ರವರ್ತಿಗೆ ಕೊಕ್..?
ಮೂಲಗಳ ಪ್ರಕಾರ, ಈ ನಿರ್ಣಾಯಕ ಪಂದ್ಯಕ್ಕಾಗಿ ಭಾರತದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಒಂದು ಪ್ರಮುಖ ಬದಲಾವಣೆ ಬಹುತೇಕ ಖಚಿತ ಎನ್ನಲಾಗುತ್ತಿದೆ. ಇಷ್ಟು ದಿನ ತಂಡದಲ್ಲಿ ಮಿಸ್ಟರಿ ಸ್ಪಿನ್ನರ್ ಆಗಿ ಕಾಣಿಸಿಕೊಂಡಿದ್ದ ವರುಣ್ ಚಕ್ರವರ್ತಿ ಬದಲಿಗೆ, ಅನುಭವಿ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರನ್ನು ಕಣಕ್ಕಿಳಿಸಲು ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ.
ಈ ಬದಲಾವಣೆಗೆ ಕಾರಣವೇನು..?
ಇಂಗ್ಲೆಂಡ್ ಬ್ಯಾಟರ್‌ಗಳು ವೇಗದ ಬೌಲಿಂಗ್‌ಗಿಂತ ಸ್ಪಿನ್ ಬೌಲಿಂಗ್ ಎದುರಿಸಲು ಹೆಚ್ಚು ತಿಣುಕಾಡುತ್ತಾರೆ ಎಂಬುದು ಇತಿಹಾಸದಿಂದ ತಿಳಿದುಬಂದಿದೆ. ವಿಶೇಷವಾಗಿ ಕುಲದೀಪ್ ಯಾದವ್ ಅವರ ಗೂಗ್ಲಿ ಮತ್ತು ಲೂಪ್ ಎಸೆತಗಳು ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ರಂತಹ ಘಟಾನುಘಟಿಗಳಿಗೆ ಕಂಟಕವಾಗಬಲ್ಲವು.
ಪಿಚ್ ಕಂಡಿಷನ್: ಸೆಮಿಫೈನಲ್ ನಡೆಯಲಿರುವ ಕ್ರೀಡಾಂಗಣದ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಕರಿಸುವ ಸಾಧ್ಯತೆ ಇದೆ.
ಅನುಭವದ ಆಟ: ವರುಣ್ ಚಕ್ರವರ್ತಿ ವಿಕೆಟ್ ಪಡೆಯಲು ಕಷ್ಟಪಡುತ್ತಿರುವುದು ತಂಡಕ್ಕೆ ಚಿಂತೆಯಾಗಿತ್ತು. ಆದರೆ ಕುಲದೀಪ್ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದು, ಮಧ್ಯಮ ಓವರ್‌ಗಳಲ್ಲಿ ವಿಕೆಟ್ ಉರುಳಿಸುವ ಚಾಕಚಕ್ಯತೆ ಹೊಂದಿದ್ದಾರೆ.
ಸೆಮಿಫೈನಲ್ ಸಮರ: ಭಾರತಕ್ಕೆ ಅಗ್ನಿಪರೀಕ್ಷೆ
ಕಳೆದ ಕೆಲವು ಪಂದ್ಯಗಳಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿದ್ದರೂ, ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟಿಂಗ್ ಲೈನ್-ಅಪ್ ಅನ್ನು ನಿರ್ಲಕ್ಷಿಸುವಂತಿಲ್ಲ. ಈ ಒಂದು ಬದಲಾವಣೆಯು ಪಂದ್ಯದ ಗತಿಯನ್ನೇ ಬದಲಿಸಬಹುದು ಎಂದು ಕ್ರಿಕೆಟ್ ಪಂಡಿತರು ವಿಶ್ಲೇಷಿಸುತ್ತಿದ್ದಾರೆ,(ಏಜೆನ್ಸೀಸ್).