ಮಾಜಿ ಸಿಎಂ ಮುಲಾಯಂ ಸಿಂಗ್​ ಪುತ್ರ ಪ್ರತೀಕ್​ ಯಾದವ್​ ಸಾವು 
ದೇಶ

ಮುಲಾಯಂ ಪುತ್ರ ಪ್ರತೀಕ್ ಯಾದವ್ ನಿಗೂಢ ಸಾವು: ವಿಷಪ್ರಾಶನ ಶಂಕೆ; ವೈದ್ಯರ ಶಾಕಿಂಗ್ ಹೇಳಿಕೆ! Prateek Yadav Died

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಿಎಂ ಮುಲಾಯಂ ಸಿಂಗ್​ ಪುತ್ರ ಪ್ರತೀಕ್​ ಯಾದವ್​ ಸಾವು
  • ವಿಷಹಾಕಿ ಕೊಂದಿರುವುದಾಗಿ ಹಬ್ಬಿರುವ ವದಂತಿ
  • ಪ್ರತೀಕ್​ ಯಾದವ್​ ಸಾವು ವಿಷದಿಂದ ಸಂಭವಿಸಿಲ್ಲ ಎಂದ ಆಸ್ಪತ್ರೆ ವೈದ್ಯರು
ಲಖನೌ: ಸಮಾಜವಾದಿ ಪಕ್ಷ (SP) ದ ಸ್ಥಾಪಕ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿ. ಮುಲಾಯಂ ಸಿಂಗ್​ ಯಾದವ್​ ಪುತ್ರ ಪ್ರತೀಕ್​ ಯಾದವ್​ (Prateek Yadav Died) ಬುಧವಾರ (ಮೇ.13) ರಂದು ಸಾವನ್ನಪ್ಪಿದ್ದಾರೆ. 38 ವರ್ಷದ ಪ್ರತೀಕ್​ ಯಾದವ್ ವಿಷವನ್ನು ಸೇವನೆ ಮಾಡಿ ಅಥವಾ ಯಾರೋ ವಿಷಹಾಕಿ ಸಾಯಿಸಿದ್ದಾರೆ ಎಂಬ ವದಂತಿ ಕೇಳಿವರುತ್ತಿತ್ತು. ಈದೀಗ ಈ ಎಲ್ಲಾ ಅನುಮಾನಗಳಿಗೆ ಆಸ್ಪತ್ರೆ ವೈದ್ಯರು ಸ್ಪಷ್ಟಿಕರಣ ನೀಡಿದ್ದಾರೆ.

ವೈದ್ಯರು ಹೇಳಿದ್ದೇನು?

ಮುಲಾಯಮ್​ ಸಿಂಗ್​ ಪುತ್ರ ಹಾಗೂ ಅಖಿಲೇಶ್​ ಯಾದವ್​ ಮಲ ಸಹೋದರ ಪ್ರತೀಕ್​ ಯಾದವ್​ ಸಾವಿಗೆ ಕುರಿತಂತೆ ಮಾತನಾಡಿರುವ ಲಖನೌ ಸಿವಿಲ್​ ಆಸ್ಪತ್ರೆ ವೈದ್ಯರಾದ ಡಾ. ಜಿ.ಸಿ. ಗುಪ್ತಾ, ಪ್ರತೀಕ್​ ಯಾದವ್​ ಅವರು ನಮ್ಮ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇದನ್ನು ವೈದ್ಯರು ಹಾಗೂ ಪೊಲೀಸ್​ ಸಿಬ್ಬಂದಿ ಇಬ್ಬರು ದೃಢಪಡಿಸಿದ್ದಾರೆ.
ಆದರೆ ಪ್ರತೀಕ್​ ಯಾದವ್​ ದೇಹದಲ್ಲಿ ಯಾವುದೇ ರೀತಿಯ ವಿಷ ದೊರೆತಿಲ್ಲ, ಹೀಗಾಗಿ ಅವರ ಸಾವು ವಿಷದ ಸ್ವಯಂ ಸೇವನೆ ಅಥವಾ ಇತತರಿಂದ ವಿಷಪ್ರಾಶನ ನಡೆದಿಲ್ಲ ಎಂದು ಗುಪ್ತಾ ತಿಳಿಸಿದ್ದಾರೆ.
ಪ್ರತೀಕ್​ ಅವರ ಸಾವಿಗೆ ನಿಖರ ಕಾರಣ ಏನೆಂದು ಮರಣೋತ್ತರ ಪರೀಕ್ಷೆಯ ತರುವಾಯ ತಿಳಿದು ಬರಬೇಕಿದೆ, ಆದರೆ ಪ್ರಾಥಮಿಕ ತನಿಖೆಯಲ್ಲಿ ವಿಷದಿಂದ ಸಾವು ಸಂಭವಿಸಿದೆ ಎನ್ನುವುದು ಸುಳ್ಳಾಗಿದ್ದು, ಯಾರು ಈ ಕುರಿತು ವದಂತಿಗಳನ್ನು ಹಬ್ಬಿಸಬೇಡಿ ಎಂದು ಅವರು ವಿನಂತಿಸಿ ಕೊಂಡಿದ್ದಾರೆ.

ಏಪ್ರಿಲ್​ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಪ್ರತೀಕ್​!

ಮಾಹಿತಿ ಪ್ರಕಾರ, ಆರೋಗ್ಯದಲ್ಲಿ ತೀವ್ರ ವ್ಯತ್ಯಯವಾದ ಹಿನ್ನಲೆ ಪ್ರತೀಕ್​ ಯಾದವ್​, ಏಪ್ರಿಲ್​ 30 ರಂದು ಲಖನೌನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದರು ಎಂದು ತಿಳಿದು ಬಂದಿದೆ.
ಆದರೆ ಅಲ್ಲಿಯ ವೈದ್ಯರಿಗೆ ಮಾಹಿತಿ ನೀಡದೆ ಪ್ರತೀಕ್​ ಮನೆಗೆ ಹಿಂದಿರುಗಿದ್ದರು. ಪ್ರತೀಕ್​ ಶ್ವಸಕೋಶ ಹಾಗೂ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರೆಂದು ಹೇಳಲಾಗುತ್ತಿದೆ.

ರಾಜಕೀಯದಲ್ಲಿ ದೂರವಿದ್ದ ಪ್ರತೀಕ್​ ಯಾದವ್​!

ಪ್ರತೀಕ್​ ಯಾದವ್​, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್​ ಯಾದವ್​ ಹಾಗೂ ಸಾಧನಾ ಗುಪ್ತಾ (ಎರಡನೇ ಪತ್ನಿ) ಅವರ ಮಗನಾಗಿದ್ದರು. ಇವರ ತಂದೆ ಹಾಗೂ ಮಲಸಹೋದರ ಅಖಿಲೇಶ್ ಯಾದವ್​ ರಾಜಕೀಯದಲ್ಲಿ ಸಕ್ರೀಯರಾಗಿದ್ದರೂ ಸಹ ಪ್ರತೀಕ್​ ರಾಜಕಾರಣದಿಂದ ಅಂತರವನ್ನು ಕಾಯ್ದುಕೊಂಡಿದ್ದರು.
ಲಂಡನ್ನಿನ ಪ್ರತಿಷ್ಟಿತ ಕಾಲೇಜಿನಿಂದ ಎಂಬಿಎ ಪಧವಿ ಪಡೆದಿದ್ದ ಪ್ರತೀಕ್​, ಲಖನೌನಲ್ಲಿ ಫಿಟ್ನೆಸ್​ಗೆ ಸಂಬಂಧಿಸಿದ ವ್ಯಾಪಾರ-ವ್ಯವಹಾರದಲ್ಲಿ ತೊಡಗಿಕೊಂಡಿದ್ದರು.
2011 ರಲ್ಲಿ ಅಪರ್ಣಾ ಯಾದವ್​ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಪ್ರತೀಕ್​ ಯಾದವ್​ ಕೆಲ ಸಮಯದ ನಂತರ ಅಪರ್ಣಾಗೆ ವಿಚ್ಛೇದನ ನೀಡುವುದಾಗಿ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದರು. ನಂತರ ಮನೆಯವರ ಮಧ್ಯಸ್ಥಿಕೆ ನಂತರ ಇವರಿಬ್ಬರು ಜೊತೆಯಲ್ಲಿದ್ದರು.
ಪ್ರತೀಕ್​ ಪತ್ನಿ ಅಪರ್ಣಾ ರಾಜಕಾರಣದಲ್ಲಿ ಸಕ್ರೀಯರಾಗಿದ್ದು, 2017 ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಲಖನೌ ಕ್ಯಾಂಟ್‌ನಿಂದ ಸ್ಪರ್ಧಿಸಿ ಸೋತಿದ್ದರು. ನಂತರ 2022 ರಲ್ಲಿ ಬಿಜೆಪಿ ಸೇರಿದ ಅಪರ್ಣಾ ಪ್ರಸ್ತುತ ಪ್ರದೇಶ ರಾಜ್ಯ ಮಹಿಳಾ ಆಯೋಗದ ಉಪಾಧ್ಯಕ್ಷರಾಗಿದ್ದಾರೆ, (ಏಜನ್ಸೀಸ್​).