ಮೋದಿ ನನ್ನ ಫೋನ್ ಟ್ಯಾಪ್ ಮಾಡಿಸಿದ್ದಾರೆ WEB
ದೇಶ

ಮೋದಿ ನನ್ನ ಫೋನ್ ಟ್ಯಾಪ್ ಮಾಡಿಸಿದ್ದಾರೆ; ರಾಹುಲ್ ಗಾಂಧಿ ಸ್ಫೋಟಕ ಆರೋಪ! Rahul Gandhi

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮತ್ತೊಮ್ಮೆ ಮುಗಿಬಿದ್ದಿದ್ದು, ಪ್ರಧಾನಿ ಮೋದಿಯೇ ಸ್ವತಃ ನನ್ನ ಫೋನ್ ಅನ್ನು ಟ್ಯಾಪ್ ಮಾಡಿಸುತ್ತಿದ್ದಾರೆ ಎಂದು ಗಂಭೀರ ಹಾಗೂ ಸ್ಫೋಟಕ ಆರೋಪ ಮಾಡಿದ್ದಾರೆ. ಸರ್ಕಾರದ ಅಕ್ರಮಗಳ ವಿರುದ್ಧ ತಾವು ಮಾಡುತ್ತಿರುವ ಸತ್ಯ ಸಾಕ್ಷ್ಯಗಳೆಲ್ಲವೂ ತಮ್ಮ ಫೋನ್‌ನಲ್ಲೇ ಸುರಕ್ಷಿತವಾಗಿವೆ ಎಂದು ಅವರು ಗುಡುಗಿದ್ದಾರೆ.Rahul Gandhi

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮತ್ತೊಮ್ಮೆ ಮುಗಿಬಿದ್ದಿದ್ದು, ಪ್ರಧಾನಿ ಮೋದಿಯೇ ಸ್ವತಃ ನನ್ನ ಫೋನ್ ಅನ್ನು ಟ್ಯಾಪ್ ಮಾಡಿಸುತ್ತಿದ್ದಾರೆ ಎಂದು ಗಂಭೀರ ಹಾಗೂ ಸ್ಫೋಟಕ ಆರೋಪ ಮಾಡಿದ್ದಾರೆ. ಸರ್ಕಾರದ ಅಕ್ರಮಗಳ ವಿರುದ್ಧ ತಾವು ಮಾಡುತ್ತಿರುವ ಸತ್ಯ ಸಾಕ್ಷ್ಯಗಳೆಲ್ಲವೂ ತಮ್ಮ ಫೋನ್‌ನಲ್ಲೇ ಸುರಕ್ಷಿತವಾಗಿವೆ ಎಂದು ಅವರು ಗುಡುಗಿದ್ದಾರೆ.

ಇನ್‌ಸ್ಟಾಗ್ರಾಂ ಸಂವಾದದಲ್ಲಿ ಸ್ಫೋಟಕ ನುಡಿಗಳು

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ನಡೆದ 'ಆಸ್ಕ್ ಮಿ' (Ask Me) ಸಂವಾದದ ವೇಳೆ ಮಾತನಾಡಿದ ರಾಹುಲ್ ಗಾಂಧಿ, ತಮ್ಮ ಬಳಿ ದೇಶದ ಹಿತಾಸಕ್ತಿಗೆ ಸಂಬಂಧಿಸಿದ ಹಲವು ಪ್ರಮುಖ ವಿಚಾರಗಳಿವೆ ಎಂದಿದ್ದಾರೆ. ಆದರೆ, ತಾವು ಸರ್ಕಾರದ ವಿರುದ್ಧ ಸಂಗ್ರಹಿಸಿರುವ ಎಲ್ಲ ಸಾಕ್ಷ್ಯಗಳು ಇರುವ ತಮ್ಮ ಮೊಬೈಲ್ ಫೋನ್ ಅನ್ನು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಕದ್ದಾಲಿಕೆ ಮಾಡಿಸುತ್ತಿದ್ದಾರೆ ಎಂದು ದೂರಿದ್ದಾರೆ. ಅಂದಹಾಗೆ, ಈ ಫೋನ್ ಕದ್ದಾಲಿಕೆ ಆರೋಪಕ್ಕೆ ಅವರು ಯಾವುದೇ ಸಾರ್ವಜನಿಕ ಸಾಕ್ಷ್ಯಗಳನ್ನು ಈ ವೇಳೆ ಒದಗಿಸಿಲ್ಲ.

ಮೋದಿ ಜೊತೆ ಬಹಿರಂಗ ಚರ್ಚೆಗೆ ಮತ್ತೊಮ್ಮೆ ಸವಾಲು

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮುಖಾಮುಖಿ ಬಹಿರಂಗ ಚರ್ಚೆ ನಡೆಸಲು ತಾವು ಸಿದ್ಧವಿರುವುದಾಗಿ ರಾಹುಲ್ ಗಾಂಧಿ ಪುನರುಚ್ಚರಿಸಿದ್ದಾರೆ. ಈ ಚರ್ಚೆಯು ನಡೆಯುವುದಾದರೆ, ಅಸಲಿ ದೇಶವಿರೋಧಿಗಳು ಯಾರು ಮತ್ತು ವಿದೇಶಿ ಶಕ್ತಿಗಳ ಕೈಯಲ್ಲಿ ಯಾರಿದ್ದಾರೆ ಎಂಬುದು ಜಗಜ್ಜಾಹೀರಾಗಲಿದೆ ಎಂದಿದ್ದಾರೆ. ಚರ್ಚೆ ಎಲ್ಲಿ ನಡೆಯಬೇಕು, ಅದರ ನಿರೂಪಣೆ ಅಥವಾ ತೀರ್ಪುಗಾರರು ಯಾರಿರಬೇಕು ಎಂಬುದನ್ನು ಸ್ವತಃ ಪ್ರಧಾನಿ ಮೋದಿಯವರೇ ನಿರ್ಧರಿಸಲಿ ಎಂದು ಅವರು ಸವಾಲು ಹಾಕಿದ್ದಾರೆ. (ಈ ಹಿಂದೆ ಪರೋಕ್ಷವಾಗಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಥವಾ ಉದ್ಯಮಿ ಗೌತಮ್ ಅದಾನಿ ಅವರ ಹೆಸರನ್ನೂ ಅವರು ಪ್ರಸ್ತಾಪಿಸಿದ್ದರು).

ಇದನ್ನೂ ಓದಿ : ಲಾರ್ಜ್, ಮಿಡ್ ಮತ್ತು ಸ್ಮಾಲ್ ಕ್ಯಾಪ್‌ಗಳ ತ್ರಿವಳಿ ಬಲ: ದೀರ್ಘಕಾಲೀನ ಸಂಪತ್ತು ಸೃಷ್ಟಿಗೆ ಮಲ್ಟಿಕ್ಯಾಪ್ ಫಂಡ್‌ಗಳೇ ಬೆಸ್ಟ್ ಆಯ್ಕೆ!

ಯಾವೆಲ್ಲ ವಿಷಯಗಳ ಚರ್ಚೆಗೆ ಪಟ್ಟು?

ದೇಶದ ಪ್ರಸ್ತುತ ಆರ್ಥಿಕ ವ್ಯವಸ್ಥೆ, ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದಗಳು, ವಿವಾದಾತ್ಮಕ ಅದಾನಿ ಪ್ರಕರಣ ಹಾಗೂ ಜೆಫ್ರಿ ಎಪ್ಸ್ಟೀನ್ ವಿವಾದ ಸೇರಿದಂತೆ ದೇಶವನ್ನು ಹೈದಾಟಿಸುತ್ತಿರುವ ಪ್ರಮುಖ ವಿಷಯಗಳ ಬಗ್ಗೆ ಪ್ರಧಾನಿಯೊಂದಿಗೆ ಚರ್ಚೆ ನಡೆಸಲು ತಮಗೆ ಅವಕಾಶ ಬೇಕು ಎಂದು ರಾಹುಲ್ ಆಗ್ರಹಿಸಿದ್ದಾರೆ. ಮತ್ತೊಂದೆಡೆ, ಪ್ರಧಾನಿ ಮೋದಿ ಅವರು ದಿಮಾಗಿ ನಕ್ಸಲ್‌ಗಳು (ಸೈದ್ಧಾಂತಿಕ ನಕ್ಸಲರು ಸಂಸ್ಥೆಗಳಿಗೆ ನುಸುಳುತ್ತಿದ್ದಾರೆ) ಎಂದು ನೀಡಿದ್ದ ಹೇಳಿಕೆಯ ಬೆನ್ನಲ್ಲೇ ಈ ರಾಜಕೀಯ ವಾಕ್ಸಮರ ತಾರಕಕ್ಕೇರಿದೆ.

ಬಿಜೆಪಿಯಿಂದ ತೀವ್ರ ತಿರುಗೇಟು

ರಾಹುಲ್ ಗಾಂಧಿ ಅವರ ಬಹಿರಂಗ ಚರ್ಚೆಯ ಸವಾಲನ್ನು ಬಿಜೆಪಿ ನಾಯಕರು ತಳ್ಳಿಹಾಕಿದ್ದಾರೆ. ಇಂತಹ ಆಧಾರರಹಿತ ಆರೋಪಗಳು ಮತ್ತು ರಾಷ್ಟ್ರೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಸಂಸತ್ತೇ ಅತ್ಯಂತ ಪವಿತ್ರ ಹಾಗೂ ಸೂಕ್ತ ವೇದಿಕೆ ಎಂದು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಅಮಿತ್ ಶಾ ತಿರುಗೇಟು ನೀಡಿದ್ದಾರೆ. ಧಮ್ ಇದ್ದರೆ ಸಂಸತ್ತಿಗೆ ಬಂದು ಈ ಬಗ್ಗೆ ಚರ್ಚಿಸುವಂತೆ ಅಮಿತ್ ಶಾ ಅವರು ರಾಹುಲ್‌ಗೆ ಸವಾಲು ಹಾಕಿದ್ದು, ಸದ್ಯ ದೆಹಲಿ ರಾಜಕಾರಣದಲ್ಲಿ ಈ ಬೆಳವಣಿಗೆ ಭಾರೀ ಬಿರುಗಾಳಿ ಎಬ್ಬಿಸಿದೆ.