ಅಂಗರಕ್ಷಕ ಸಂತೋಷ್ ಕೇಂದ್ರೆಗೆ ಬಾದಲ್ ಪತ್ನಿ ಹರ್ಸಿಮ್ರತ್ ಕೌರ್ ಬಾದಲ್ ಧನ್ಯವಾದ
- ಮಾಜಿ ಉಪ ಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ಗೆ ಚಾಕು ಇರಿತ
- ನಂದೇಡ್ನಲ್ಲಿರುವ ಗುರುದ್ವಾರಾದಲ್ಲಿ ನಡೆದ ಘಟನೆ
- ಅಕಾಲಿ ನಾಯಕ ಪ್ರಾಣ ಕಾಪಾಡಿದ ಅಂಗರಕ್ಷಕ ಸಂತೋಷ್ ಕೇಂದ್ರೆ
- ಅಂಗರಕ್ಷಕ ಸಂತೋಷ್ ಕೇಂದ್ರೆಗೆ ಬಾದಲ್ ಪತ್ನಿ ಹರ್ಸಿಮ್ರತ್ ಕೌರ್ ಬಾದಲ್ ಧನ್ಯವಾದ
ಮುಂಬೈ: ಮಹಾರಾಷ್ಟ್ರದ ನಾಂದೇಡ್ನಲ್ಲಿರುವ ಮಾತಾ ಸಾಹಿಬ್ ಕೌರ್ ಗುರುದ್ವಾರಾಗೆ ಬೇಟಿ ನೀಡಿದ್ದ ಸಂದರ್ಭದಲ್ಲಿ, ಪಂಜಾಬ್ನ ಮಾಜಿ ಮುಖ್ಯಮಂತ್ರಿ ಹಾಗೂ ಅಕಾಲಿದಳ ನಾಯಕ ಸುಖ್ಬೀರ್ ಸಿಂಗ್ ಬಾದಲ್ ಮೇಲೆ ಕೃಪಾಣ್ (ಚಾಕು) ನಿಂದ ಮಾರಣಾಂತಿಕ ದಾಳಿ ನಡೆದಿತ್ತು.
ಈ ಸಂದರ್ಭದಲ್ಲಿ ಬಾದಲ್ ಅವರ ಅಂಗರಕ್ಷಕ ಇನ್ಸ್ಪೆಕ್ಟ್ರ್ ವೈಜನಾಥ್ ಕೇಂದ್ರೆ, ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಬಾದಲ್ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ತಾವು ಕೂಡ ಗಾಯಗೊಂಡಿದ್ದರು. ನಂತರ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಿಮ್ಮಿಂದಲೇ ನನ್ನ ಗಂಡ ಬದುಕಿದ್ದಾರೆ!
ಘಟನೆ ಬಳಿಕ ಆಸ್ಪತ್ರೆಗೆ ದೌಡಾಯಿಸಿದ ಸುಖ್ಬೀರ್ ಸಿಂಗ್ ಬಾದಲ್ ಪತ್ನಿ ಹರ್ಸಿಮ್ರತ್ ಕೌರ್ ಬಾದಲ್ (Harsimrat Kaur on Bodyguard), ಪತಿಯನ್ನು ಬೇಟಿ ಮಾಡಿದ ಬಳಿಕ, ಅಂಗರಕ್ಷಕ ವೈಜನಾಥ್ ಕೇಂದ್ರೆ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ.
ಈ ಸಂದರ್ಭದಲ್ಲಿ ನಿಮ್ಮಿಂದಲೇ ನನ್ನ ಪತಿ ಇಂದು ಜೀವಂತವಾಗಿದ್ದಾರೆ, ನಿಮ್ಮ ಸೇವೆ ಮತ್ತು ಸಹಾಸಕ್ಕೆ ನಾನು ಸೆಲ್ಯೂಟ್ ಮಾಡುತ್ತನೆ, ವಾಹೆಗುರು ನೀವು ಬೇಗ ಚೇತರಿಸಿಕೊಳ್ಳುವಂತೆ ನೋಡಿಕೊಳ್ಳಲಿ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಗುರುದ್ವಾರಾದಲ್ಲಿ ಅಟ್ಯಾಕ್!
ಮಹಾರಾಷ್ಟ್ರಕ್ಕೆ, ವೈಯಕ್ತಿಕ ಕೆಲಸ ಸಂಬಂಧ ಆಗಮಿಸಿದ್ದ ಅಕಾಲಿದಳ ನಾಯಕ ಸುಖ್ಬೀರ್ ಸಿಂಗ್ ಬಾದಲ್, ಗುರುದ್ವಾರ ಪ್ರವೇಶಿಸಲು ಮುಂದಾದಾಗ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ಸದ್ಯ ಈ ದಾಳಿ ನಡೆಸಿದ ನಿಹಾಂಗ್ ಜಸ್ಪಾಲ್ ಸಿಂಗ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾಗಿ ತಿಳಿದು ಬಂದಿದೆ.
ಬಾದಲ್ ಮೇಲೆ ಹಲ್ಲೆ ನಡೆದಿದೆ ಎಂದು ಮಾಹಿತಿ ದೊರೆತ ನಂತರ ಪ್ರಧಾನಿ ನರೇಂದ್ರ ಮೋದಿ, ಬಾದಲ್ ಪತ್ನಿ ಹರ್ಸಿಮ್ರತ್ ಕೌರ್ಗೆ ಪೋನ್ ಕರೆ ಮೂಲಕ ಸಂಪರ್ಕಿಸಿ, ಬಾದಲ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದರು. ಸದ್ಯ ಆಸ್ಪತ್ರೆಯಿಂದ ಹೊರಬಂದಿರುವ ಬಾದಲ್ ಪಂಜಾಬ್ ಸೇರಿದ್ದಾರೆ ಎಂದು ತಿಳಿದು ಬಂದಿದೆ,(ಏಜನ್ಸೀಸ್).