ನಾಸಿಕ್​ನ ಟಿಸಿಎಸ್​ ಕಂಪನಿಯಲ್ಲಿ ಬಲವಂತದ ಮತಾಂತರ ಪ್ರಕರಣ 
ದೇಶ

ನನ್ನ ಮಗಳು ತಲೆಮರಿಸಿ ಕೊಂಡಿಲ್ಲ; ಅವಳು ಮನೆಯಲ್ಲೇ ಇದ್ದಾಳೆ; TCS ನಿಧಾ ಖಾನ್​ ತಂದೆ ಫಸ್ಟ್​ ರಿಯಾಕ್ಷನ್​! TCS Nida Khan

ಪ್ರಮುಖ ಮುಖ್ಯಾಂಶಗಳು

  • ನಾಸಿಕ್​ನ ಟಿಸಿಎಸ್​ ಕಂಪನಿಯಲ್ಲಿ ಬಲವಂತದ ಮತಾಂತರ ಪ್ರಕರಣ
  • ಪ್ರಮುಖ ಆರೋಪಿ ನಿಧಾ ಖಾನ್​ನಿಂದ ನೀರಿಕ್ಷಣಾ ಜಾಮೀನಿಗೆ ಅರ್ಜಿ
  • ನನ್ನ ಮಗಳು ತಲೆ ಮರೆಸಿಕೊಂಡಿಲ್ಲ; ಮನೆಯಲ್ಲಿಯೇ ಇದ್ದಾಳೆ: ನಿಧಾ ತಂದೆ
ನಾಸಿಕ್​: ಮಹಾರಾಷ್ಟ್ರದ ನಾಸಿಕ್​ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಕಚೇರಿಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳನ್ನು ಲೈಂಗಿಕವಾಗಿ ಪೀಡಿಸಿ ಬಲವಂತದ ಮತಾಂತರಕ್ಕೆ ಒತ್ತಾಯಿಸಿದ ಪ್ರಕರಣ ಈಗ ದೇಶದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದ ಪ್ರಮುಖ ಕಿಂಗ್​ಪಿನ್​ ಎನ್ನಲಾದ ಕಂಪನಿಯ ಹೆಚ್​ಆರ್​ (HR) ಮುಖ್ಯಸ್ಥೆ ನಿದಾ ಖಾನ್​ (TCS Nida Khan) ತಲೆ ಮರಿಸಿ ಕೊಂಡಿರುವ ಆರೋಪವನ್ನು ಆಕೆಯ ಕುಟುಂಬ ವರ್ಗ ತಿರಸ್ಕರಿಸಿದೆ.

ನನ್ನ ಮಗಳು ಮನೆಯಲ್ಲೇ ಇದ್ದಾಳೆ!

ಮೊದಲನೆಯದಾಗಿ ನಮ್ಮ ನಿದಾ ಟಿಸಿಎಸ್​ನಲ್ಲಿ ಎಚ್​ಆರ್​ ಆಗಿರಲಿಲ್ಲ, ಅವಳು ಸೇಲ್ಸ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಳು. ಈ ಪ್ರಕರಣದ ಕುರಿತಂತೆ ನಿಧಾ ಮೇಲೆ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದು ನಿಧಾ ಕುಟುಂಬ ವರ್ಗ ಹೇಳಿದೆ.
ನನ್ನ ಮಗಳು ಆ ಕಂಪನಿಯಿಂದ ಮೊದಲೇ ಹೊರಬಂದಿದ್ದಾಳೆ, ಈ ಘಟನೆ ಎಲ್ಲಾ ಕೇಳಿದರೆ ಇಕೆ ಕೆಲಸಕ್ಕೆ ಹೋಗಿದ್ದೆ ತಪ್ಪಾಯಿತು ಎನ್ನಿಸುತ್ತದೆ. ನನ್ನ ಮಗಳು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡಿದ ಹೆಮ್ಮೆ ನನಗಿದೆ. ನನ್ನ ಮಗಳು ಈ ಪ್ರಕರಣದಲ್ಲಿ ಯಾವುದೇ ತಪ್ಪನ್ನು ಮಾಡಿಲ್ಲ, ಅವಳು ಎಲ್ಲಿಯೂ ಓಡಿ ಹೋಗಿಲ್ಲ ಮನೆಯಲ್ಲೇ ಇದ್ದಾಳೆ ಎಂದು ನಿಧಾ ತಂದೆ ಹೇಳಿಕೆ ನೀಡಿದ್ದಾರೆ.
ಈ ವಿಷಯ ತಿಳಿಯುತ್ತಿದಂತೆ ಅವಳ ತಾಯಿಯ ಆರೋಗ್ಯದಲ್ಲಿ ಏರುಪೇರಾಗಿದೆ, ನಾನು ನಾಸಿಕ್​ನಲ್ಲಿ ಟಿಂಬರ್​(ಮರದ) ವ್ಯಾಪಾರ ನಡೆಸುತ್ತೆನೆಂದು ಅವರು ಹೇಳಿದ್ದಾರೆ. ನನ್ನ ಮಗಳು ಯಾವುದೇ ತಪ್ಪು ಮಾಡಿಲ್ಲ, ಅವಳು ಎಲ್ಲರೊಡನೆ ಬೆರೆಯುತ್ತಿದ್ದಳು ಆದ್ದರಿಂದಲೇ ಈ ಆರೋಪ ಕೇಳಿಬಂದಿದೆ ಎಂದು ಹೇಳಿದ್ದಾರೆ.

ನಿರೀಕ್ಷಣಾ ಜಾಮೀನಿಗೆ ನಿಧಾ ಅರ್ಜಿ

ಲೈಂಗಿಕ ದೌರ್ಜನ್ಯ ನಡೆಸಿ ಬಲವಂತದ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಧಾ ಖಾನ್​ ಮೇಲೆ ದೂರು ದಾಖಲಾಗುತ್ತಿದಂತೆ, ನಿಧಾ ನಾಸಿಕ್​ನ ನ್ಯಾಯಾಲಯದಲ್ಲಿ, ತಾನು ಗರ್ಭಿಣಿಯಾಗಿದ್ದು, ನನ್ನ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರೀಕ್ಷಣಾ ಜಾಮೀನನ್ನು ನೀಡ ಬೇಕಾಗಿ ಕೋರಿದ್ದಾರೆ.

ಪ್ರಕರಣದ ಹಿನ್ನಲೆ

ಮಹಾರಾಷ್ಟ್ರದ ನಾಸಿಕ್​ನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಕಚೇರಿಯಲ್ಲಿ 2022ರ ಫೆಬ್ರವರಿಯಿಂದ 2026ರ ಮಾರ್ಚ್‌ವರೆಗೆ ನಡೆದ ಕಿರುಕುಳ ಬಗ್ಗೆ ಅಲ್ಲಿನ ಉದ್ಯೋಗಿಗಳು ಆರೋಪಿಸಿದ್ದಾರೆ. ತಮ್ಮ ಸೀನಿಯರ್ ಸಹೋದ್ಯೋಗಿಗಳು ಮತ್ತು ಎಚ್‌ಆರ್ ಮ್ಯಾನೇಜರ್‌ಗಳಿಂದ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ, ಬ್ಲ್ಯಾಕ್‌ಮೇಲ್, ಧಾರ್ಮಿಕ ಮತಾಂತರಕ್ಕೆ ಒತ್ತಾಯ ಮತ್ತು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಎಂಟು ಮಹಿಳಾ ಉದ್ಯೋಗಿಗಳು ಆರೋಪ ಮಾಡಿದ್ದಾರೆ. ಈ ಸಂಬಂಧ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ಏಳು ಆರೋಪಿಗಳನ್ನು ಬಂಧಿಸಿದ್ದಾರೆ,(ಏಜನ್ಸೀಸ್​).