'ಮನೋಹರ' ಎಂಬ ಹಿಂದೂ ಹೆಸರು ಹೇಳಿ ಅಪ್ರಾಪ್ತ ಬಾಲಕಿಗೆ ವಂಚಿಸಿದ್ದ ಮುನೋವರ್ ಅನ್ಸಾರಿ
- 'ಮನೋಹರ' ಎಂಬ ಹಿಂದೂ ಹೆಸರು ಹೇಳಿ ಅಪ್ರಾಪ್ತ ಬಾಲಕಿಗೆ ವಂಚಿಸಿದ್ದ ಮುನೋವರ್ ಅನ್ಸಾರಿ
- ದೇವಸ್ಥಾನದಲ್ಲಿ ಮದುವೆಯಾಗಲು ಮುಂದಾದಾಗ ಸಿಕ್ಕಿಬಿದ್ದ ಆರೋಪಿ
- ಅಪ್ರಾಪ್ತ ಬಾಲಕಿಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ದ ಆರೋಪಿ
ಸಾಹಿಬ್‌ಗಂಜ್: ಜಾರ್ಖಂಡ್ನ ಸಾಹಿಬ್ಗಂಜ್ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ತಾನೊಬ್ಬ ಹಿಂದೂ (Muslim man arrested for Posing as Hindu) ಎಂದು ಸುಳ್ಳು ಹೇಳಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ದೇವಸ್ಥಾನದಲ್ಲಿ ಮದುವೆಯಾಗಲು ಹೋದಾಗ ಸಿಕ್ಕಿಬಿದ್ದಿರುವ ಘಟನೆ ವರದಿಯಾಗಿದೆ.
ಬಂಧಿತ ವ್ಯಕ್ತಿಯನ್ನು ಮನೊವರ್ ಅನ್ಸಾರಿ ಎಂದು ಗುರುತಿಸಲಾಗಿದ್ದು, ಇತನು 'ಮನೋಹರ' ಎಂದು ತನ್ನ ಗುರುತನ್ನು ಮರೆಮಾಚಿ, ಹಿಂದೂ ಹುಡುಗಿಯನ್ನು ಪ್ರೇಮ ಪಾಶಕ್ಕೆ ಬೀಳಿಸಿ, ಆಕೆಯ ಜೊತೆಗೆ ಲೈಂಗಿಕ ಸಂಪರ್ಕವನ್ನು ಬೆಳೆಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತನ್ನ ಮಗಳಿಗೆ ಅನ್ಯಾಯವಾಗಿದೆ ಎಂದು ಬಾಲಕಿ ತಾಯಿ ನೀಡಿರುವ ದೂರನ್ನು ದಾಖಲಿಸಿಕೊಂಡ ಪೊಲೀಸರು ಈ ಮನೊವರ್ ಅನ್ಸಾರಿ ಎಂಬಾತನನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆಂದು ತಿಳಿದು ಬಂದಿದೆ.
ಅಪ್ರಾಪ್ತೆ ಜೊತೆ ಲೈಂಗಿಕ ಸಂಪರ್ಕ!
ಎಫ್ಐಆರ್ನಲ್ಲಿ ನಮೂದಿಸಿರುವಂತೆ, ಈ ಘಟನೆಯು ಜುಲೈ 15 ರಂದು ನಡೆದಿದೆ ಎಂದು ಹೇಳಲಾಗುತ್ತಿದ್ದು, ಅಪ್ರಾಪ್ತೆ ಬಾಲಕಿಯು ಶಾಲೆಗೆಂದು ಹೋದವಳು ಮನೆಗೆ ಬಾರದಿದ್ದಾಗ ತಾಯಿ ಗಾಬರಿಗೊಂಡಿದ್ದಾಳೆ. ನಂತರ ಈ ಮನೊವರ್ ಅನ್ಸಾರಿ ಅಲಿಯಾಸ್ 'ಮನೋಹರ' ತನ್ನ ಮಗಳನ್ನು ಬರಹೆತ್ನಲ್ಲಿರುವ ಶಿವಗಡಿ ದೇವಸ್ಥಾನದಲ್ಲಿ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾನೆಂದು ತಿಳಿದು ಬಂದಿದೆ.
ನಂತರ ತಾಯಿ ನೀಡಿದ ದೂರಿನಂತೆ ಪೊಲೀಸರು ಈ ಮುನೊವರ್ ಅನ್ಸಾರಿಯಬನ್ನು ಬಂಧಿಸಿದ್ದಾರೆ. ಜೂನ್ 29 ರಂದು ಆರೋಪಿ ಬಾಲಕಿಯನ್ನು ರಾಂಜಿಗೆ ಕರೆದುಕೊಂಡು ಹೋಗಿ ಲೈಂಗಿಕ ಸಂಪರ್ಕವನ್ನು ಬೆಳೆಸಿದ್ದಾನೆಂದು ಆರೋಪಿಸಲಾಗಿದೆ.
ಕೋರ್ಟ್ ಮುಂದೆ ಹೇಳಿಕೆ ನೀಡಿದ ಬಾಲಕಿ; ಮುಂದುವರಿದ ತನಿಖೆ!
ದೂರನ್ನು ಆಧರಿಸಿ ಜಾರ್ಖಂಡ್ ಪೊಲೀಸರು, ಗುರುವಾರ (ಜು.16) ರಂದು ಆರೋಪಿಯನ್ನು ಜಿಲ್ಲಾ ಮ್ಯಾಜಸ್ಟ್ರೇಟರ್ ಮುಂದೆ ನಿಲ್ಲಿಸಿದ್ದಾರೆ. ಅಲ್ಲಿ ಬಾಲಕಿ ತನ್ನ ಮೇಲೆ ಆರೋಪಿ ನಡೆಸಿರುವ ಕುಕೃತ್ಯದ ಬಗ್ಗೆ ಹೇಳಿಕೆ ನೀಡಿದ್ದಾಳೆ. ಸದ್ಯ ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದ್ದು, ಪೊಲೀಸರು ಪೊಕ್ಸೋ, ಸೇರಿದಂತೆ ಇನ್ನಿತರ ಕಠಿಣ ಕಾಯ್ದೆಗಳ ಅಡಿಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆಂದು ತಿಳಿದು ಬಂದಿದೆ, (ಏಜನ್ಸೀಸ್).