ಸಮಾಜವಾದಿ ಪಕ್ಷದ ಮುಖಂಡ ಜೀಶನ್ ಅನ್ಸಾರಿ
ಲಖನೌ: ಉತ್ತರ ಪ್ರದೇಶದಲ್ಲಿ ಗೋವನ್ನು ರಾಷ್ಟ್ರೀಯ ಮಾತೆ ಎಂದು ಘೋಷಿಸುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ(PM Modi) ಸಮಾಜವಾದಿ ಪಕ್ಷದ ಮುಖಂಡ ಜೀಶನ್ ಅನ್ಸಾರಿ ಸೋಮವಾರ(ಜೂ. 29) ತಮ್ಮ ರಕ್ತದಲ್ಲಿ ಪತ್ರ ಬರೆದಿದ್ದಾರೆ.
ವಾರಣಾಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯ ಹೊರಗೆ ಪತ್ರ ಬರೆದ ಅನ್ಸಾರಿ, ಅದನ್ನು ಸ್ಥಳೀಯ ಆಡಳಿತದ ಮೂಲಕ ಪ್ರಧಾನಿಗೆ ಸಲ್ಲಿಸಿದ್ದಾರೆ. ಗೋವನ್ನು ರಾಷ್ಟ್ರ ಮಾತೆ ಎಂದು ಘೋಷಿಸುವ ಮೂಲಕ ಅದಕ್ಕೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು ಗುರುತಿಸುವಂತೆ ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಜೀಶನ್ ಅನ್ಸಾರಿ, ನಾನು ಮುಸ್ಲಿಂ ಸಮುದಾಯದಿಂದ ಬಂದಿದ್ದು, ಗೋ ರಕ್ಷಣೆಗೆ ಒತ್ತಾಯಿಸಿ ಪತ್ರ ಬರೆದಿದ್ದೇನೆ. ಬಿಜೆಪಿ ನಾಯಕರು ಗೋವಿನ ಬಗ್ಗೆ ವಿಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಗೋವನ್ನು ರಾಷ್ಟ್ರ ಮಾತೆ ಎಂದು ಘೋಷಿಸುವ ಮೂಲಕ ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.
ಭಾರತದಾದ್ಯಂತ ಜನರ ಭಾವನೆಗಳಲ್ಲಿ ಹಸುವಿಗೆ ವಿಶೇಷ ಸ್ಥಾನವಿದೆ. ಹಲವು ಮನೆಗಳಲ್ಲಿ, ಮೊದಲ ರೊಟ್ಟಿಯನ್ನು ಹಸುವಿಗೆ ಮೀಸಲಿಡಲಾಗುತ್ತದೆ. ಅದೇ ಸಮಯದಲ್ಲಿ ಸುವೇಂದು ಅಧಿಕಾರಿ ಮತ್ತು ಹಿಮಂತ ಬಿಸ್ವಾ ಶರ್ಮಾ ಅಂತಹ ಮುಖ್ಯಮಂತ್ರಿಗಳು ಹಸುವಿನೊಂದಿಗೆ ರೊಟ್ಟಿ ತಿನ್ನುವ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).